Advertisement

ಅತಿರಥನ ಐಟಂ ಸಾಂಗ್‌

10:44 AM Jul 05, 2017 | |

“ಅತಿರಥ’ ಚಿತ್ರದಲ್ಲೊಂದು ಸ್ಪೆಷಲ್‌ ಸಾಂಗ್‌ ಇದೆ, ಆ ಹಾಡಿನಲ್ಲಿ ಯಾರು ಕುಣಿಯುತ್ತಾರೋ ನೋಡಬೇಕು. ಒಂದಷ್ಟು ಮಂದಿ ಜೊತೆ ಮಾತುಕತೆ ನಡೆಯುತ್ತಿದೆ… ಹೀಗೆಂದು ತಿಂಗಳ ಹಿಂದೆಯಷ್ಟೇ ಮಹೇಶ್‌ ಬಾಬು ಹೇಳಿದ್ದರು. ಅದರಂತೆ ಈಗ ಸ್ಪೆಷಲ್‌ ಸಾಂಗ್‌ನಲ್ಲಿ ಕುಣಿಯಲು ಹುಡುಗಿ ಸಿಕ್ಕಿಯಾಗಿದೆ. ಬರೀ ಸಿಕ್ಕಿದ್ದಷ್ಟೇ ಅಲ್ಲ, ಆ ಹಾಡಿನ ಚಿತ್ರೀಕರಣ ಕೂಡಾ ಆಗಿದೆ.

Advertisement

“ಅತಿರಥ’ನ ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡವರು ಎಸ್ತರ್‌ ನರೋನ್ಹಾ. ನಾಗೇಂದ್ರ ಪ್ರಸಾದ್‌ ಬರೆದಿರುವ “ಜಾದುಗಾರ ಜಾದುಗಾರ ಜಾದು ಮಾಡು ಬಾ …’ ಎಂಬ ಐಟಂ ನಂಬರ್‌ಗೆ ಎಸ್ತರ್‌ ನರೋನ್ಹಾ ಸಖತ್ತಾಗಿ ಸ್ಟೆಪ್‌ ಹಾಕಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಿದ್ದು, ಮುರುಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. 

ಅಂದಹಾಗೆ, ಎಸ್ತರ್‌ ಇಲ್ಲಿ ಕೇವಲ ಹಾಡಿನಲ್ಲಿ ಕುಣಿದಿದ್ದಷ್ಟೇ ಅಲ್ಲ, ಆ ಹಾಡನ್ನು ಕೂಡಾ ಹಾಡಿದ್ದಾರೆ. ಈ ಮೂಲಕ “ಅತಿರಥ’ ಚಿತ್ರದ ಗಾಯಕಿಯರಲ್ಲಿ ಅವರು ಒಬ್ಬರಾಗಿದ್ದಾರೆ. ಎಸ್ತರ್‌ ಅವರ ಧ್ವನಿ ಇಷ್ಟವಾದ ಕಾರಣ ಚಿತ್ರತಂಡ ಅವರಿಂದಲೇ ಈ ಹಾಡು ಹಾಡಿಸಿದೆ. ಹೀರೋ ಹಾಗೂ ವಿಲನ್‌ ಭೇಟಿಯ ಹಿನ್ನೆಲೆಯಲ್ಲಿ ಈ ಹಾಡು ಬರುತ್ತದೆಯಂತೆ. ಹಾಡಿನಲ್ಲಿ ನಾಯಕ ಚೇತನ್‌ ಕೂಡಾ ಕಾಣಿಸಿಕೊಂಡಿದ್ದಾರೆ. 

ಮಂಗಳೂರು ಮೂಲದ ಎಸ್ತರ್‌ಗೆ ಕನ್ನಡ ಚಿತ್ರರಂಗ ಹೊಸದಲ್ಲ. ಈಗಾಗಲೇ ಕನ್ನಡದಲ್ಲಿ ನಾಯಕಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. “ಉಸಿರಿಗಿಂತ ನೀನೇ ಹತ್ತಿರ’ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ಎಸ್ತರ್‌, ಸದ್ಯ “ನುಗ್ಗೇಕಾಯಿ’ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತುಳು, ಮರಾಠಿ, ಕೊಂಕಣಿ ಚಿತ್ರಗಳಲ್ಲಿ ನಟಿಸಿರುವ ಎಸ್ತಾರ್‌ಗೆ ಗಾಯನ ಹೊಸದಲ್ಲ. ಈಗಾಗಲೇ ಕೊಂಕಣಿ ಹಾಗೂ ಮರಾಠಿಯಲ್ಲಿ ಹಾಡಿರುವ ಎಸ್ತರ್‌ ಈಗ ಕನ್ನಡದಲ್ಲೂ ಹಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next