Advertisement
ಇದು ಅತಿವೃಷ್ಠಿಯಿಂದ ಸಂತ್ರಸ‚ರಾದವರಿಗೆ ಸರ್ಕಾರದ ವತಿಯಿಂದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಮನು ಎಂಬ ಮಹಿಳೆ ಹೇಳಿಕೊಂಡ ಮನದಾಳದ ಮಾತುಗಳು.
Related Articles
Advertisement
ಸಮರ್ಪಕ ವ್ಯವಸ್ಥೆಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸ ಲಾಗಿರುವ ಪರಿಹಾರ ಕೇಂದ್ರದಲ್ಲಿ ಸುಮಾರು 250 ರಿಂದ 300 ಜನರು ಆಶ್ರಯವನ್ನು ಪಡೆದಿದ್ದು, ಇವರಿಗೆ ಬೆಳಗಿನ ಉಪಹಾರಕ್ಕಾಗಿ ಇಡ್ಲಿ, ಸಾಂಬಾರ್, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಹಾರ ನೀಡಲಾಗುತ್ತಿದೆ. ಪರಿಹಾರ ಕೇಂದ್ರಕ್ಕೆ ಹಲವು ಸಂಘಟನೆಗಳು, ಸ್ವಯಂ ಪ್ರೇರಿತರಾಗಿ ಆಹಾರ, ತರಕಾರಿ, ಬ್ರೆಡ್ ಇತ್ಯಾದಿಗಳನ್ನು ಪೂರೈಸುತ್ತಿರುವುದು, ಕನ್ನಡಿಗರ ವಿಶಾಲ ಹೃದಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮುಖ್ಯೋಪಾಧ್ಯಾಯರಾದ ಗಾಯತ್ರಿ ಅವರು ಹೇಳುವಂತೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗಾಗಿ ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅನ್ನ ಸಾಂಬಾರ್, ರೈಸ್ ಬಾತ್ ಸೇರಿದಂತೆ ವಿವಿಧ ಅಡುಗೆ ಊಟ ಬಡಿಸಲಾಗುತ್ತಿದೆ. ಊಟ ಪೂರೈಕೆಗಾಗಿ ಅಗತ್ಯ ಸಿಬ್ಬಂದಿಗಳನ್ನೂ ಕೂಡ ನೇಮಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು, ರಾತ್ರಿ ತಂಗಲು ಕೂಡ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ಧ ನೀರಿನ ಬಾಟಲ್ ಪೂರೈಕೆ ವ್ಯವಸ್ಥೆಯೂ ಇದೆ. ಪರಿಹಾರ ಕೇಂದ್ರದಲ್ಲಿ ಅರ್ಹ ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳಾದ ಹೊಸ ಉಡುಪುಗಳು, ತಟ್ಟೆ, ಬಿಸ್ಕೆಟ್, ಮಕ್ಕಳ ಉಡುಪುಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಹಳಷ್ಟು ಸಂತ್ರಸ್ತರು ಊಟ, ಉಪಹಾರದ ಸಮಯಕ್ಕೆ ಪರಿಹಾರ ಕೇಂದ್ರಕ್ಕೆ ಬಂದು ಊಟ ಉಪಹಾರ ಸೇವಿಸಿ, ಪುನಃ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿರುವುದೂ ಕಂಡುಬಂದಿದೆ. ಇಂತಹವರಿಗೂ ಕೂಡ ಊಟ ಉಪಹಾರ ಸೇವನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪರಿಹಾರ ಕೇಂದ್ರದ ಆವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ ಎಂದರು. ಪ್ರಥಮ ಚಿಕಿತ್ಸಾ ಕೇಂದ್ರ
ಸಂತ್ರಸ್ತರಾದವರ ಆರೋಗ್ಯ ಕಾಪಾಡಲು, ಪರಿಹಾರ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನೂ ಕೂಡ ಪ್ರಾರಂಭಿಸಲಾಗಿದೆ. ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಒಬ್ಬರು ವೈದ್ಯರು, 02 ರಿಂದ 03 ನರ್ಸ್‌ಗಳನ್ನು ನೇಮಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಿಗಳು, ರಕ್ತದೊತ್ತಡ, ಮಧುಮೇಹ ಪರೀûಾ ಉಪಕರಣಗಳನ್ನೂ ಕೂಡ ಒದಗಿಸಲಾಗಿದೆ. ಇವರಿಗೆ ಆಶಾ ಕಾಯಾಕರ್ತೆಯರೂ ಕೂಡ ನೆರವಾಗುತ್ತಿದ್ದಾರೆ. ಸಚಿವರು, ಅಧಿಕಾರಿಗಳು ಮೊಕ್ಕಾಂ
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮವಾಗಿ ಸಂತ್ರಸ‚ರಾದವರಿಗೆ ಸೂಕ್ತ ಪರಿಹಾರೋಪಾಯ ಕಲ್ಪಿಸುವ ಸಲುವಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್ ಅವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಖುದ್ದು ನಿಗಾ ವಹಿಸಿದ್ದಾರೆ. ಇವರ ಜೊತೆಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಾಥ್ ನೀಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಒಟ್ಟಾರೆ ಕೊಡುಗು ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ಸಂತ್ರಸ್ತರಾದವರ ಹಿತಕಾಯಲು ಸರ್ಕಾರ ಹಲವಾರು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ, ಎದುರಾಗಿರುವ ಸಂಕಷ್ಟ ಪರಿಹರಿಸಲು ಮುಂದಾಗಿದೆ. ಪರಿಹಾರ ಕೇಂದ್ರಮೂಲಕ ವ್ಯವಸ್ಥೆ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಮನೆಗಳು ನಾಶವಾಗಿವೆ. ಸಾವಿರಾರು ಜನ ತಾವು ವಾಸಿಸುತ್ತಿದ್ದ ಮನೆಗಳನ್ನು ಕಳೆದುಕೊಂಡು, ವಾಸಕ್ಕೆ ಇದ್ದ ಸೂರು ಇಲ್ಲದಂತಾಗಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಕೂಡ ಸವಾಲಿನ ಸಂಗತಿಯಾಗಿತ್ತು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರ, ಸಂತ್ರಸ್ತ ಜನರ ಜೀವನ ಉಳಿಸಲು ಸೇನೆಯ ನೆರವು ಪಡೆದಿದ್ದು, ಅಲ್ಲದೆ, ಸಂತ್ರಸ್ತರಿಗಾಗಿ ಆಸರೆ ವ್ಯವಸ್ಥೆ ಮತ್ತು ಊಟೋಪಹಾರದ ವ್ಯವಸ್ಥೆಗಾಗಿ ಕೊಡಗು ಜಿಲ್ಲೆಯಲ್ಲಿ 41 ಪರಿಹಾರ ಕೇಂದ್ರಗಳನ್ನು ತೆರೆದು, ಸಮರ್ಪಕ ವ್ಯವಸ್ಥೆ ಕೈಗೊಂಡಿದೆ. ರಕ್ಷಣಾ ಸಿಬಂದಿ ಜೀವದ ಹಂಗನ್ನು ತೊರೆದು ಜನರ ಜೀವ ಕಾಪಾಡುವಲ್ಲಿ ತೋರಿರುವ ನಿಷ್ಠೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಿಬಿಎಂಪಿಯಿಂದ ಸ್ವಚ್ಛತೆಗಾಗಿ ಸಿಬಂದಿ
ಭಾರಿ ಮಳೆಯಿಂದ ಜಿಲ್ಲೆ ಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ನೈರ್ಮಲ್ಯದ ಕೊರತೆ ಕಂಡುಬಂದಿದ್ದರಿಂದ, ಇಲ್ಲಿನ ನಗರ, ಪಟ್ಟಣ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ತಹಬದಿಗೆ ತರುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವತಿಯಿಂದ ಸುಮಾರು 300 ಜನ ಪೌರ ಕಾರ್ಮಿಕರನ್ನು ನೇಮಿಸಿದೆ. ಪೌರ ಕಾರ್ಮಿಕರನ್ನು ಹೊತ್ತ ಬಸ್‌ಗಳು ಕುಶಾಲ ನಗರ ಮತ್ತು ಮಡಿಕೇರಿಯತ್ತ ಧಾವಿಸಿದವು.ಕಾರ್ಮಿಕರು ಸ್ವತ್ಛತಾ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂತು.