Advertisement

ಫಲ್ಗುಣಿ ನದಿಯಲ್ಲಿ ಉಕ್ಕಿ ಹರಿದ ನೀರು; ಪೊಳಲಿ, ಅಮ್ಮುಜೆ ಭಾಗದಲ್ಲಿ ತಗ್ಗು ಪ್ರದೇಶ ಜಲಾವೃತ

11:22 AM Aug 01, 2024 | Team Udayavani |

ಬಂಟ್ವಾಳ: ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದ್ದು, ಪೊಳಲಿ ಸಮೀಪದ ಅಮ್ಮುಂಜೆ ಗ್ರಾಮದ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಸುಮಾರು 8 ಕುಟುಂಬಗಳಿಗೆ ನೀರು ನುಗ್ಗಿದ್ದು ಎಲ್ಲಾ ಕುಟುಂಬಗಳನ್ನು ತಹಶೀಲ್ದಾರ್ ಅರ್ಚನಾ ಭಟ್ ಅವರ ನಿರ್ದೇಶನದಂತೆ  ಆ.1ರ ಗುರುವಾರ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.

Advertisement

ಪಲ್ಗುಣಿ ನದಿಯಲ್ಲಿ ನೀರು ಏರಿಕೆಯಾದ ಬಳಿಕ ಕೃತಕ ನೆರೆಯ ರೂಪದಲ್ಲಿ ಈ 8 ಮನೆಗಳಿಗೆ ನೀರು ನುಗ್ಗಿದೆ ಎನ್ನಲಾಗಿದೆ, ಅದರಲ್ಲಿ ಮೂರು ಮನೆಗಳು ಅಪಾಯಕಾರಿಯಾಗಿದ್ದು, ಇದೀಗ ಅಗ್ನಿಶಾಮಕ ದಳದ ಬೋಟ್ ಮೂಲಕ ಅವರನ್ನು ‌ರಕ್ಷಣೆಯಲ್ಲಿ ತೊಡಗಿದ್ದಾರೆ.

ನದಿಯಲ್ಲಿ ಕಸದ ರಾಶಿಯಿಂದ ರಕ್ಷಣಾ ಕಾರ್ಯಕ್ಕೆ ಕೊಂಚ ಮಟ್ಟಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಸ್ಕಾಂ ವಿದ್ಯುತ್ ತಂತಿಗಳು ಕೂಡ ಇಲ್ಲಿ ಇದ್ದ ಕಾರಣಕ್ಕೆ ಕರೆಂಟ್ ಕಡಿತಗೊಳಿಸಿದ ಬಳಿಕ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

Advertisement

ಎಲ್ಲಾ ಕುಟುಂಬಕ್ಕೆ ಪೊಳಲಿ ಸರ್ವಮಂಗಲ ಸಭಾಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ. ಸ್ಥಳೀಯ ಗ್ರಾ.ಪಂ.ತಂಡ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next