ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಸೋಮವಾರ ಪತ್ತೆಯಾಗಿದೆ. ಪೀರಶೆಟ್ಟಿ ಭೋದನವಾಡಿ (28) ಎಂಬ ಯುವಕ ಪ್ರವಾಹಕ್ಕೆ ಬಲಿಯಾಗಿರುವ ಯುವಕ.
ಭಾನುವಾರ ಸಂಜೆ ಹೊಲದಲ್ಲಿ ಕೆಲಸಮುಗಿಸಿಕೊಂಡು ಬರುವಾಗ ಬೈಕ್ ನಲ್ಲಿ ಹಳ್ಳ ದಾಟಲು ಯತ್ನಿಸಿದ್ದಾನೆ ಪ್ರವಾಹದ ರಭಸಕ್ಕೆ ಬೈಕ್ ಸ್ಕಿಡ್ ಆಗಿದ್ದಾರೆ. ತಕ್ಷಣ ಗ್ರಾಮಸ್ಥರು ಹಳ್ಳದ ಬಳಿ ಧಾವಿಸಿ ಪೀರಶೆಟ್ಟಿ ಅವರತ್ತ ಹಗ್ಗವನ್ನು ಎಸೆದಿದು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಆದರೆ ನೀರಿನ ಸೆಳೆತ ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದರು.
ಸೋಮವಾರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಶವ ಪತ್ತೆ ಆಗಿದೆ. ಇದರಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದಂತಾಗಿದೆ. ವಾರದ ಹಿಂದೆ ಆಳಂದ ತಾಲೂಕಿನ ಬಮ್ಮನಳ್ಳಿ- ನಿಂಬರ್ಗಾ ನಡುವಿನ ಹಳ್ಳದಲಿ ಜೆಸ್ಕಾಂ ಇಂಜಿನಿಯರ್ ಹರಿದುಕೊಂಡು ಹೋಗಿ ಸಾವನ್ನಪ್ಪಿದ್ದರು.
ಉಕ್ಕಿ ಹರಿಯುತ್ತಿರುವ ಭೀಮಾನದಿ: ಜಿಲ್ಲೆಯ ಜೀವನದಿ ಭೀಮಾ ನದಿಗೆ ಸೊನ್ನ ಬ್ಯಾರೇಜ್ ನಿಂದ ೧.೦೨ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಹಳ್ಳಿಗಳ ಜನರಿಗೆ ಪ್ರವಾಹ ಭೀತಿ ಶುರುವಾಗದೆ.
ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದರಿಂದ ಅಫಜಲಪುರ ತಾಲೂಕಿನ ಘತ್ತರಗಿ ಬಳಿಯ ಸೇತುವೆ ಸಂಪೂರ್ಣ ಮುಳುಗಿದೆ. ಇದರಿಂದ ಅಫಜಲಪುರ- ಜೇವರ್ಗಿ, ಸಿಂದಗಿ ತಾಲೂಕಿನ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ನದಿಪಾತ್ರದದುದ್ದಕ್ಕೂ ಹೊಲಗಳಿಗೆ ಭೀಮೆ ನೀರು ಪ್ರವೇಶಿಸಿದೆ. ಈಗಾಗಲೇ ಮಳೆಯಿಂದ ಬೆಳೆಗಳು ಹಾನಿಯಾಗಿದ್ದರೆ, ಈಗ ನುಗ್ಗಿರುವ ಭೀಮಾ ನೀರು ಹೊಲಗಳ ಮಣ್ಣು ಕೊಚ್ಚಿಕೊಂಡು ಹೋಗಿದೆ.