ಲಂಡನ್: ‘ಕ್ರಿಕೆಟ್ ಎಂಬುದು ಕವಿತೆಯಂತೆ…ಇದು ಚೆಂಡು-ದಾಂಡಿನ ಕ್ರೀಡೆಯನ್ನು ಕ್ರಿಕೆಟ್ ಪಿತಾಮಹ ಡಾ| ಡಬ್ಲ್ಯು.ಜಿ. ಗ್ರೇಸ್ ಶತಮಾನದ ಹಿಂದೆ ಬಣ್ಣಿಸಿದ ಪರಿ. ಅಂದು ಕ್ರಿಕೆಟ್ ಹಾಗಿತ್ತು… ಹಲವು ದಿನಗಳ ಕಾಲ ಸಾಗುವ ಕ್ರಿಕೆಟ್ ಪಂದ್ಯವೊಂದು ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೃದಯವನ್ನು ತಟ್ಟುತ್ತದೆ ಎಂಬುದು ಗ್ರೇಸ್ ಮಾತಿನ ಮರ್ಮ.
12ನೇ ವಿಶ್ವಕಪ್ ಸಡಗರ
ಗುರುವಾರದಿಂದ ಮೊದಲ್ಗೊಂಡು ಜುಲೈ 14ರ ತನಕ ಇಂಗ್ಲೆಂಡ್ ಮತ್ತು ವೇಲ್ಸ್ಗಳಲ್ಲಿ 12ನೇ ಏಕದಿನ ವಿಶ್ವಕಪ್ ಸಡಗರ, ಸಂಭ್ರಮ, ರೋಮಾಂಚನ. ಕ್ರಿಕೆಟಿನ ಅತೀ ದೊಡ್ಡ ಹಾಗೂ ಪ್ರತಿಷ್ಠಿತ ಕೂಟದ ಮಹಾಕುಂಭ; ಚೆಂಡು-ದಾಂಡಿನ ನಡುವಿನ ಮಹಾಯುದ್ಧ. ಗುರುವಾರದ ಉದ್ಘಾಟನಾ ಪಂದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಲಂಡನ್ನಿನ ಓವಲ್ ಅಂಗಳದಲ್ಲಿ ನಡೆಯಲಿದೆ. ಭಾರತದ ಅಭಿಯಾನ ಆರಂಭವಾಗುವುದು ಜೂ. 5ರಂದು. ಕೊಹ್ಲಿ ಪಡೆಯ ಮೊದಲ ಎದುರಾಳಿ ಕೂಡ ದಕ್ಷಿಣ ಆಫ್ರಿಕಾ.
ಹತ್ತೇ ತಂಡಗಳ ಹೋರಾಟ
ಇದು ಇಂಗ್ಲೆಂಡ್ ಆತಿಥ್ಯದಲ್ಲಿ ದಾಖಲೆ 5ನೇ ಸಲ ನಡೆಯುವ ವಿಶ್ವಕಪ್. ಹತ್ತೇ ತಂಡ ಗಳಿಗೆ ಈ ವಿಶ್ವಕಪ್ ಸೀಮಿತಗೊಂಡಿದೆ.
ಈ ಬಾರಿಯ ವಿಶ್ವಕಪ್ ಯಾರ ಪಾಲಾಗಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿಗೇ ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್ ಈ ಬಾರಿ ಹೆಚ್ಚು ಬಲಿಷ್ಠವಾಗಿದ್ದು, ಮೊದಲ ಸಲ ಕಪ್ ಎತ್ತೀತೇ ಎಂಬ ನಿರೀಕ್ಷೆ ಗರಿಗೆದರಿದೆ. ಅದು ಈ ಕೂಟದ ಫೇವರಿಟ್ ತಂಡ. ·ಅಂಡರ್-19 ವಿಶ್ವಕಪ್ ತಂದಿತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಭಾರತ ಸೀನಿಯರ್ ಹಂತದಲ್ಲೂ ಮಿಂಚಿ 3ನೇ ಸಲ ಚಾಂಪಿಯನ್ ಆಗಿ ಮೂಡಿಬರಲಿ ಎಂಬುದು ನಮ್ಮವರ ಹಾರೈಕೆ. ಇದು ಅಷ್ಟು ಸುಲಭವಲ್ಲ. ಆದರೆ ನಿರೀಕ್ಷೆಗೆ ಮಿತಿ ಇಲ್ಲ. ·ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಕೂಡ ಕಪ್ ಉಳಿಸಿಕೊಳ್ಳಲು ಸ್ಕೆಚ್ ಹಾಕಿದೆ. ಟೂರ್ನಿ ಸಮೀಪಿಸುತ್ತಿದ್ದಂತೆಯೇ ಕಾಂಗರೂ ಪಡೆ ಚಿಗುರಿ ನಿಂತಿದೆ. ·ಚೋಕರ್ ದಕ್ಷಿಣ ಆಫ್ರಿಕಾ ಈ ಕಳಂಕವನ್ನು ಮೆಟ್ಟಿನಿಂತು ಮೊದಲ ಸಲ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ಇಂಥದೊಂದು ಸಾಮರ್ಥ್ಯ ಕೂಡ ಹರಿಣಗಳ ಪಡೆ ಹೊಂದಿದೆ. ·ದೈತ್ಯ ಕ್ರಿಕೆಟಿಗರನ್ನು ಹೊಂದಿರುವ ವೆಸ್ಟ್ ಇಂಡೀಸ್ ಶಿಸ್ತು ಮತ್ತು ಬದ್ಧತೆಯಿಂದ ಆಡಿದರೆ ಬಹಳ ದೂರ ಸಾಗುವ ನಿರೀಕ್ಷೆ ಮೂಡಿಸಿದೆ. ·ಪಾಕಿಸ್ಥಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾಗಿರುವ ಅಪಾಯಕಾರಿ ತಂಡ. ಇಂಗ್ಲೆಂಡಿಗೆ ಆಗಮಿಸಿದ ಮೇಲೆ ಸೋಲನ್ನೇ ಕಾಣುತ್ತಿದೆ ಯಾದರೂ ವಿಶ್ವಕಪ್‌ನಲ್ಲಿ ಮೇಲೆದ್ದು ನಿಲ್ಲುವ ಸಾಧ್ಯತೆ ಇಲ್ಲದಿಲ್ಲ. ·ಕಳೆದ ಸಲ ಸ್ವಲ್ಪದರಲ್ಲೇ ಕಪ್ ಕಳೆದುಕೊಂಡ ನ್ಯೂಜಿಲ್ಯಾಂಡ್ ಮತ್ತೂಮ್ಮೆ ಫೈನಲ್ನತ್ತ ಮುಖ ಮಾಡುವ ಬಗ್ಗೆ ಖಾತ್ರಿ ಇಲ್ಲ. ಶ್ರೀಲಂಕಾ ತೀರಾ ದುರ್ಬಲವಾಗಿ ಗೋಚರಿಸುತ್ತಿದೆ. ·ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಒಂದೆರಡು ತಂಡಗಳಿಗಾದರೂ ಬಿಸಿ ಮುಟ್ಟಿಸಿ ಪಂದ್ಯದ ಚಿತ್ರಣವನ್ನು ಬದಲಿಸುವ ತಾಕತ್ತು ಹೊಂದಿವೆ.
Advertisement
ಆದರೆ ಕಾಲ ಬದಲಾಗಿದೆ. ಇದರೊಂದಿಗೆ ಕ್ರಿಕೆಟ್ ಕೂಡ ದೊಡ್ಡ ಮಟ್ಟದಲ್ಲಿ ಪರಿವರ್ತನೆಗೊಂಡಿದೆ. ಟೆಸ್ಟ್ ಕ್ರಿಕೆಟನ್ನು ಮೀರಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಕವಿತೆಯಂತಿದ್ದ ಕ್ರಿಕೆಟ್ ಹೊಡಿ-ಬಡಿ ಸ್ಪರ್ಶ ಪಡೆದುಕೊಂಡಿದೆ. ಇದಕ್ಕೆಲ್ಲ ಕಿರೀಟವೆಂಬಂತೆ ವಿಶ್ವಕಪ್ ಕೂಟಗಳು ಕಾಲ ಕಾಲಕ್ಕೆ ನಡೆದು ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸುತ್ತಿವೆ. ಇಂಥದೇ ಒಂದು ಕ್ರಿಕೆಟ್ ಜಾತ್ರೆಗೆ ಇಂಗ್ಲೆಂಡ್ ಸಜ್ಜಾಗಿದೆ.
ಗುರುವಾರದಿಂದ ಮೊದಲ್ಗೊಂಡು ಜುಲೈ 14ರ ತನಕ ಇಂಗ್ಲೆಂಡ್ ಮತ್ತು ವೇಲ್ಸ್ಗಳಲ್ಲಿ 12ನೇ ಏಕದಿನ ವಿಶ್ವಕಪ್ ಸಡಗರ, ಸಂಭ್ರಮ, ರೋಮಾಂಚನ. ಕ್ರಿಕೆಟಿನ ಅತೀ ದೊಡ್ಡ ಹಾಗೂ ಪ್ರತಿಷ್ಠಿತ ಕೂಟದ ಮಹಾಕುಂಭ; ಚೆಂಡು-ದಾಂಡಿನ ನಡುವಿನ ಮಹಾಯುದ್ಧ. ಗುರುವಾರದ ಉದ್ಘಾಟನಾ ಪಂದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಲಂಡನ್ನಿನ ಓವಲ್ ಅಂಗಳದಲ್ಲಿ ನಡೆಯಲಿದೆ. ಭಾರತದ ಅಭಿಯಾನ ಆರಂಭವಾಗುವುದು ಜೂ. 5ರಂದು. ಕೊಹ್ಲಿ ಪಡೆಯ ಮೊದಲ ಎದುರಾಳಿ ಕೂಡ ದಕ್ಷಿಣ ಆಫ್ರಿಕಾ.
Related Articles
ಇದು ಇಂಗ್ಲೆಂಡ್ ಆತಿಥ್ಯದಲ್ಲಿ ದಾಖಲೆ 5ನೇ ಸಲ ನಡೆಯುವ ವಿಶ್ವಕಪ್. ಹತ್ತೇ ತಂಡ ಗಳಿಗೆ ಈ ವಿಶ್ವಕಪ್ ಸೀಮಿತಗೊಂಡಿದೆ.
Advertisement
ಇವು ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಪಂದ್ಯಗಳನ್ನು ಆಡಲಿವೆ. ಅಂದರೆ ಎಲ್ಲ ತಂಡಗಳೂ ಉಳಿದ ತಂಡಗಳೆದುರು ಒಂದೊಂದು ಪಂದ್ಯವನ್ನು ಆಡಬೇಕು. ಇಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲಿಗೆ ಏರಲಿವೆ. 1992ರ ಬಳಿಕ ಮೊದಲ ಬಾರಿಗೆ ಈ ಮಾದರಿಯನ್ನು ಅಳವಡಿಸಲಾಗುತ್ತಿದೆ.
ಭಾರತಕ್ಕೆ ಒಲಿದೀತೇ ಕಪ್?ಈ ಬಾರಿಯ ವಿಶ್ವಕಪ್ ಯಾರ ಪಾಲಾಗಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಜಗತ್ತಿಗೇ ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್ ಈ ಬಾರಿ ಹೆಚ್ಚು ಬಲಿಷ್ಠವಾಗಿದ್ದು, ಮೊದಲ ಸಲ ಕಪ್ ಎತ್ತೀತೇ ಎಂಬ ನಿರೀಕ್ಷೆ ಗರಿಗೆದರಿದೆ. ಅದು ಈ ಕೂಟದ ಫೇವರಿಟ್ ತಂಡ. ·ಅಂಡರ್-19 ವಿಶ್ವಕಪ್ ತಂದಿತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಭಾರತ ಸೀನಿಯರ್ ಹಂತದಲ್ಲೂ ಮಿಂಚಿ 3ನೇ ಸಲ ಚಾಂಪಿಯನ್ ಆಗಿ ಮೂಡಿಬರಲಿ ಎಂಬುದು ನಮ್ಮವರ ಹಾರೈಕೆ. ಇದು ಅಷ್ಟು ಸುಲಭವಲ್ಲ. ಆದರೆ ನಿರೀಕ್ಷೆಗೆ ಮಿತಿ ಇಲ್ಲ. ·ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಕೂಡ ಕಪ್ ಉಳಿಸಿಕೊಳ್ಳಲು ಸ್ಕೆಚ್ ಹಾಕಿದೆ. ಟೂರ್ನಿ ಸಮೀಪಿಸುತ್ತಿದ್ದಂತೆಯೇ ಕಾಂಗರೂ ಪಡೆ ಚಿಗುರಿ ನಿಂತಿದೆ. ·ಚೋಕರ್ ದಕ್ಷಿಣ ಆಫ್ರಿಕಾ ಈ ಕಳಂಕವನ್ನು ಮೆಟ್ಟಿನಿಂತು ಮೊದಲ ಸಲ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ಇಂಥದೊಂದು ಸಾಮರ್ಥ್ಯ ಕೂಡ ಹರಿಣಗಳ ಪಡೆ ಹೊಂದಿದೆ. ·ದೈತ್ಯ ಕ್ರಿಕೆಟಿಗರನ್ನು ಹೊಂದಿರುವ ವೆಸ್ಟ್ ಇಂಡೀಸ್ ಶಿಸ್ತು ಮತ್ತು ಬದ್ಧತೆಯಿಂದ ಆಡಿದರೆ ಬಹಳ ದೂರ ಸಾಗುವ ನಿರೀಕ್ಷೆ ಮೂಡಿಸಿದೆ. ·ಪಾಕಿಸ್ಥಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾಗಿರುವ ಅಪಾಯಕಾರಿ ತಂಡ. ಇಂಗ್ಲೆಂಡಿಗೆ ಆಗಮಿಸಿದ ಮೇಲೆ ಸೋಲನ್ನೇ ಕಾಣುತ್ತಿದೆ ಯಾದರೂ ವಿಶ್ವಕಪ್‌ನಲ್ಲಿ ಮೇಲೆದ್ದು ನಿಲ್ಲುವ ಸಾಧ್ಯತೆ ಇಲ್ಲದಿಲ್ಲ. ·ಕಳೆದ ಸಲ ಸ್ವಲ್ಪದರಲ್ಲೇ ಕಪ್ ಕಳೆದುಕೊಂಡ ನ್ಯೂಜಿಲ್ಯಾಂಡ್ ಮತ್ತೂಮ್ಮೆ ಫೈನಲ್ನತ್ತ ಮುಖ ಮಾಡುವ ಬಗ್ಗೆ ಖಾತ್ರಿ ಇಲ್ಲ. ಶ್ರೀಲಂಕಾ ತೀರಾ ದುರ್ಬಲವಾಗಿ ಗೋಚರಿಸುತ್ತಿದೆ. ·ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಒಂದೆರಡು ತಂಡಗಳಿಗಾದರೂ ಬಿಸಿ ಮುಟ್ಟಿಸಿ ಪಂದ್ಯದ ಚಿತ್ರಣವನ್ನು ಬದಲಿಸುವ ತಾಕತ್ತು ಹೊಂದಿವೆ.
‘ದುರ್ಬಲ’ ತಂಡಗಳಿಗೆ ಕೊಕ್!
ಈ ಕೂಟದಲ್ಲಿ ಐಸಿಸಿ ಅಸೋಸಿಯೇಟ್ ತಂಡಗಳನ್ನು ದೂರವಿಟ್ಟಿದ್ದರಿಂದ ಇಲ್ಲಿ ‘ವೀಕ್ ಟೀಮ್’ ಎಂಬ ಮಾತೇ ಇಲ್ಲ. ಹತ್ತೂ ತಂಡಗಳು ಬಲಿಷ್ಠವಾಗಿವೆ. ಮೇಲ್ನೋಟಕ್ಕೆ ಒಂದೆರಡು ತಂಡಗಳು ದುರ್ಬಲವಾಗಿ ಗೋಚರಿಸುತ್ತಿವೆಯಾದರೂ ಅಂಗಳಕ್ಕಿಳಿದ ಮೇಲೆ ಈ ತಂಡಗಳ ಪ್ರದರ್ಶನ ಯಾವ ಹಂತ ಮುಟ್ಟೀತು ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಒಂದು ಹೆಜ್ಜೆ ಜಾರಿದರೂ ತಂಡಕ್ಕೆ ಗಂಡಾಂತರ ಎದುರಾಯಿತೆಂದೇ ಅರ್ಥ. ದುರ್ಬಲ ತಂಡಗಳ ವಿರುದ್ಧ ಆಡಿ ಪರಿಸ್ಥಿತಿಯನ್ನು ನಿಭಾಯಿಸುವ ಅವಕಾಶ ಇಲ್ಲಿಲ್ಲ!