Advertisement

ಮೂರೂವರೆ ವರ್ಷದಲ್ಲಿ ಎಲ್ಲೆ ಮೀರಿ ಅಕಾಡೆಮಿ ಸೇವೆ :ಎಂ.ಎಸ್‌.ಮೂರ್ತಿ

11:59 AM Aug 11, 2017 | Team Udayavani |

ಬೆಂಗಳೂರು: “ಅರ್ಜಿ ಹಾಕಿ ಬಂದಂತಹ ಅಧ್ಯಕ್ಷ ನಾನಲ್ಲ. ನನಗೆ ಸಿಕ್ಕ ಅವಕಾಶವನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಜಾತ್ಯತೀತ, ಧರ್ಮಾತೀತವಾಗಿ ಪ್ರಾಂತೀಯ ಎಲ್ಲೆ ಮೀರಿ ಕೆಲಸ ಮಾಡಿದ್ದೇನೆ’ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ ಹೇಳಿದರು.

Advertisement

ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಆ.13ರಂದು ಪದತ್ಯಾಗ ಮಾಡಲಿರುವ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ಕಳೆದ 50 ವರ್ಷಗಳಲ್ಲಿ ಆಗದಷ್ಟು ಕಾರ್ಯಕ್ರಮಗಳನ್ನು ಮೂರೂವರೆ ವರ್ಷದಲ್ಲಿ ಮಾಡಿದ್ದೇವೆ. ಸಾವಿರಾರು ಅವಕಾಶ ವಂಚಿತ ಕಲಾವಿದರಿಗೆ ಮೊದಲ ಬಾರಿಗೆ ಅಕಾಡೆಮಿಯು ವಿವಿಧ ಅವಕಾಶ ನೀಡಿದೆ. ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶದಿಂದ ರಾಜ್ಯದ ಉದ್ದಗಲಕ್ಕೂ ಸುಮಾರು 1 ಲಕ್ಷ ಕಿ.ಮೀ. ಪ್ರವಾಸ ಮಾಡಿದ್ದೇನೆ’ ಎಂದು ತಿಳಿಸಿದರು.

 ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಗ್ರಾಫಿಕ್‌ ಕಲಾ ಕೇಂದ್ರಕ್ಕೆ ಸಚಿವೆ ಉಮಾಶ್ರೀಯವರು ಶಂಕುಸ್ಥಾಪನೆ ನೆರವೇರಿಸಿದ್ದು, ಲೋಕೋಪಯೋಗಿ ಇಲಾಖೆಗೆಯಿಂದ ಹಣ ಸಂದಾಯವಾಗಿದೆ, ಮುಂಬರುವ ಅಕಾಡೆಮಿ ಅಧ್ಯಕ್ಷರು ಮುತುವರ್ಜಿ ವಹಿಸಿ ಶೀಘ್ರವೇ ಗ್ರಾಫಿಕ್‌ ಕಲಾಕೇಂದ್ರ ನಿರ್ಮಿಸಿ ಲೋಕಾರ್ಪಣೆ ಮಾಡಬೇಕು. ಇದಲ್ಲದೇ ಮೂರೂವರೆ ವರ್ಷದಲ್ಲಿ ಹಲವಾರು ವಿಚಾರ ಸಂಕಿರಣ, ಕಲಾಕಮ್ಮಟಗಳು, ಕಾರ್ಯಾಗಾರ, ನೇಪಥ್ಯ ಕಲಾಕಮ್ಮಟ ಇತ್ಯಾದಿಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next