ಫ್ಯಾಷನ್ ಅತಿಯಾದರೆ ಮುಜುಗರಕ್ಕೆ ಒಳಗಾಗುವುದು ಗ್ಯಾರಂಟಿ. ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾ¤ರೆ. ಆದರೆ ಕೆಲವೊಂದು ತಪ್ಪುಗಳು ನಮ್ಮನ್ನು ಇತರರ ಮುಂದೆ ಮುಜುಗರ ಅನುಭವಿಸುವಂತೆ ಮಾಡುತ್ತವೆ. ಅಂತಹ ತಪ್ಪುಗಳಲ್ಲಿ ಒಂದು ಮಹಿಳೆಯರು ಮಾಡುವ ಫ್ಯಾಷನ್ ತಪ್ಪುಗಳು. ಫ್ಯಾಷನ್ ನಿಮಗೆ ಎಷ್ಟು ಹೆಮ್ಮೆಯನ್ನು ಮತ್ತು ಪ್ರಚಾರವನ್ನು ತಂದು ಕೊಡುತ್ತದೆಯೋ ಅಷ್ಟೇ ಮುಜುಗರವನ್ನೂ ಸಹ ತಂದು ಕೊಡುತ್ತದೆ ಎಂಬುದನ್ನು ಮರೆಯವಾರದು.
ಚಿಕ್ಕಮಕ್ಕಳು ಲಿಪ್‌ಸ್ಟಿಕ್, ಕ್ರೀಮ್ ಹಚ್ಚಿ ಕೊಂಡಾಗ ಮುದ್ದಾಗಿ ಕಾಣುತ್ತಾರೆ. ಆದರೆ ದೊಡ್ಡವರು ಮೇಕಪ್ ವಿಷಯದಲ್ಲಿ ಒಟ್ಟಾರೆ ತಪ್ಪು ಮಾಡಿದರೆ ನೋಡಿದವರು ನಗುತ್ತಾರೆ. ಸರಿಯಾದ ಉಡುಗೆ-ತೊಡುಗೆ, ಸಂದರ್ಭಕ್ಕೆ ತಕ್ಕಂತಹ ಬಟ್ಟೆಗಳನ್ನು ನಾವು ಧರಿಸಬೇಕು.ಸಮಯ ಸಂದರ್ಭ, ಹೋಗಬೇಕಾದ ಸ್ಥಳ, ಭೇಟಿಯಾಗುವಂತಹ ಜನರು ಇವರನ್ನೆಲ್ಲ ಗಮನದಲ್ಲಿಸಿಕೊಂಡು ನಾವು ಫ್ಯಾಷನ್ ಮಾಡಬೇಕೆ ಹೊರತು, ಇದೆಯೆಂದುಕೊಂಡು ಫ್ಯಾಷನ್ ಮಾಡಲು ಹೋಗಬಾರದು. ಅದು ಮುಜುಗರಕ್ಕೆ ದಾರಿ ಮಾಡಿಕೊಡುವುದು ಖಂಡಿತ.
ನಾವು ಧರಿಸುವ ತಪ್ಪಾದ ಒಳ ಉಡುಪು ಕೆಲವೊಮ್ಮೆ ಅವಸ್ಥೆ ಪಡುವಂತೆ ಮಾಡುವುದು ಖಂಡಿತ. ಯಾವಾಗ ಬಿಳಿ ಟಾಪ್ ಅಥವಾ ಬಟ್ಟೆಯನ್ನು ಧರಿಸುತ್ತಿರೋ ಆಗ ಬಿಳಿ ಬಣ್ಣದ ಒಳ ಉಡುಗೆಯನ್ನೇ ಧರಿಸಿ. ಮೇಕಪ್ ಯಾವತ್ತು ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಆಗಿರಬೇಕು. ಒಂದು ವೇಳೆ ಅದು ನಿಮ್ಮ ತ್ವಚಯ ಮೇಲೆ ಪದರದಂತೆ ಕಂಡುಬಂದರೆ ಅಸಹ್ಯವಾಗಿ ಕಾಣುತ್ತದೆ. ಆಗ ಜನರಿಗೆ ತಮಾಷೆ ಮಾಡಲು ಬೇರೆ ಕಾರಣ ಬೇಕೆಂದಿಲ್ಲ.
ಪ್ರಯೋಗಗಳನ್ನು ಮಾಡುವಾಗ ಕೆಲವೊಮ್ಮೆ ತಪ್ಪಾಗಿ ಬಿಡುತ್ತದೆ. ಅದರಲ್ಲೂ ಕೂದಲಿಗೆ ಹಚ್ಚುವ ಬಣ್ಣಗಳು. ಫ್ಯಾಷನ್ ಟ್ರೆಂಡ್ ಎಂದು ಬೇಕಾಬಿಟ್ಟಿ ಬಣ್ಣಗಳನ್ನು ಹಚ್ಚಿದರೆ ವ್ಯಂಗ್ಯದಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ. ಯಾವತ್ತಿಗೂ ಸರಳತೆಗೆ ಆದ್ಯತೆ ನೀಡಿ. ಕೆಲವೊಮ್ಮೆ ಮನೆಯಲ್ಲಿ ಇರುವ ಎಲ್ಲಾ ಒಡವೆಗಳನ್ನು ನಿಮ್ಮ ಮೈಮೇಲೆ ಹಾಕಿಕೊಂಡು ಹೋಗುವುದರಿಂದ ಜನ ನೋಡಿ ನಗುವ ಸರಕಾಗಿ ಬಿಡುತ್ತೀರಾ!
ಯಾವತ್ತಿಗೂ ನೀವು ಧರಿಸುವ ಉಡುಗೆಗಳು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿರಬೇಕು. ಸಡಿಲವಾದ, ತೀರಾ ಬಿಗಿಯಾದ ಉಡುಪುಗಳು ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಅನ್ನು ಹಾಳು ಮಾಡಿ ಬಿಡುತ್ತದೆ. ನಿಮ್ಮ ಮೈಕಟ್ಟಿಗೆ ಅನುಗುಣವಾಗಿ ಉಡುಪುಗಳನ್ನು ಧರಿಸುವುದು ಉತ್ತಮ. ಕೆಲವೊಮ್ಮೆ ಅಧಿಕವಾಗಿ ಫ್ಯಾಷನ್ ಮಾಡಿ ಅದನ್ನು ತೋರಿಸಿಕೊಳ್ಳಲು ಹೋದಾಗ ಅದು ಅಸಹ್ಯವಾಗಿ ಬಿಡುತ್ತದೆ. ಫ್ಯಾಷನ್ ಯಾವತ್ತಿಗೂ ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಇದನ್ನು ನಾವು ಮರೆಯಬಾರದು. ಅತಿ ಯಾವತ್ತಿ¤ಗೂ ಅಪಾಯಕ್ಕೆ ಆಹ್ವಾನ ನೀಡುತ್ತದೆ.
ಸುಲಭಾ ಆರ್. ಭಟ್