Advertisement
ಭಾರತದ ನಾಲ್ಕು ಪ್ರಮುಖ ಐಟಿ ಕಂಪನಿಗಳ ಪೈಕಿ, ಕಡಿಮೆ ಲಾಭ ಹೊಂದಿರುವ ವಿಪ್ರೋ, ಲಾಭದ ಪ್ರಮಾಣ ಜಾಸ್ತಿ ಮಾಡಲು ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಡಿಸೆಂಬರ್ ತ್ತೈಮಾಸಿಕದಲ್ಲಿ ವಿಪ್ರೋ ಶೇ.16 ಲಾಭಾಂಶ ದಾಖಲಿಸಿತ್ತು.
ಈ ನಡುವೆ, ಟ್ವಿಟರ್ ಮಾಜಿ ಮಾಲಿಕ ಜ್ಯಾಕ್ ಡೋರ್ಸೆಯ ಬ್ಲಾಕ್ ಕಂಪನಿಯು 1000 ಉದ್ಯೋಗಿಗಳನ್ನು ಕೆಲಸದಿಂದ ತೆಗಯಲು ನಿರ್ಧರಿಸಿದೆ. ಕಳೆದ ವರ್ಷವೇ ಉದ್ಯೋಗಿಗಳ ಸಂಖ್ಯೆಯನ್ನು 13000ದಿಂದ 12000ಕ್ಕಿಳಿಸುವುದಾಗಿ ಹೇಳಿದ್ದರು. ಇನ್ನು ವಿಶ್ವದ ದೈತ್ಯ ಸರ್ಚ್ ಎಂಜಿನ್ ಗೂಗಲ್ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು 17500 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.