ಭೋಪಾಲ್: ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಶನಿವಾರ ಮತ್ತು ಭಾನುವಾರ ರಾತ್ರಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದು, ಅಪರಾಧ ಹಿನ್ನೆಲೆಯುಳ್ಳ 9,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶದ 17,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ರಾಜ್ಯದಲ್ಲಿ ಶಾಂತಿ ನೆಲೆಸಲು ಮತ್ತು ಭದ್ರತೆ ಹೆಚ್ಚಿಸಲು ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಾರೆಂಟ್ ಹೊರಡಿಸಿದ್ದರೂ ಬಂಧನವಾಗದೇ ಇದ್ದ ಸುಮಾರು 6,000 ಅಪರಾಧಿಗಳು, ಶಾಶ್ವತ ವಾರೆಂಟ್ ಇರುವ 2,600 ಮಂದಿ, ತಲೆಮರೆಸಿಕೊಂಡಿದ್ದ 100 ಮಂದಿ ಅಪರಾಧಿಗಳು ಹಾಗೂ ಬಹುಮಾನ ಘೋಷಣೆಯಾಗಿದ್ದ 200 ಮಂದಿ ಅಪರಾಧಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ ನಾನಾ ಜಿಲ್ಲೆಗಳಲ್ಲಿ ಇರುವ 1,000ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಸೆರೆಹಿಡಿಯಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ವಿವಿಧ ವಲಯಗಳ ಎಡಿಜಿಪಿ, ಡಿಐಜಿ, ಎಸ್‌ಪಿ ಸೇರಿದಂತೆ ವಿವಿಧ ರ್‍ಯಾಂಕ್‌ಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದು, ಒಟ್ಟು 9,000 ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
6,000- ಬಂಧನವಾಗದಿರುವ ಅಪರಾಧಿಗಳು
2,600- ಶಾಶ್ವತ ವಾರೆಂಟ್ ಇರುವವರು
100- ಅಪರಾಧಿಗಳು
200- ಬಹುಮಾನ ಘೋಷಣೆ ಆಗಿದ್ದವರು
17,000- ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ