ಹೊಸದಿಲ್ಲಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಐಐಟಿ ದಿಲ್ಲಿ ಸೇರಿದಂತೆ 5,993 ಎನ್‌ಜಿಒಗಳಿಗೆ ಇನ್ನು ಮುಂದೆ ವಿದೇಶಗಳಿಂದ ದೇಣಿಗೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ವಿದೇಶಗಳಿಂದ ಬರುವ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್ಸಿಆರ್‌ಎ)ಯ ಅನ್ವಯ ನೋಂದಣಿಗೆ ಕೆಲವು ಎನ್‌ಜಿಒಗಳು ಅರ್ಜಿ ಸಲ್ಲಿಸದೇ ಇದ್ದ ಕಾರಣ ಮತ್ತು ಕೇಂದ್ರ ಗೃಹ ಸಚಿವಾಲಯವೇ ಮತ್ತೆ ಕೆಲವು ಸಂಘಟನೆಗಳ ನೋಂದಣಿ ನವೀಕರಣ ಅರ್ಜಿಗಳನ್ನು ತಿರಸ್ಕ ರಿಸಿರುವ ಕಾರಣ ಈ ಬೆಳವಣಿಗೆಯಾಗಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಬಗ್ಗೆ ಇರುವ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿ ರುವ ಮಾಹಿತಿ ಪ್ರಕಾರ, ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿ ಸ್ಟ್ರೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೋರಿಯಲ್ ಫೌಂಡೇಶನ್, ಲೇಡಿ ಶ್ರೀರಾಮ್ ಕಾಲೇಜ್ ಫಾರ್ ವಿಮೆನ್, ದಿಲ್ಲಿ ಕಾಲೇಜ್ ಆಫ್ ಎಂಜಿನಿಯರಿಂಗ್, ಆಕ್ಸ್‌ಫಾಮ್ ಇಂಡಿಯಾ, ಐಐಟಿ ದಿಲ್ಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋ ಸಿಯೇಶನ್‌ಗಳು ನೋಂದಣಿ ಮಾಡಿ ಸಲು ಹಿಂದೇಟು ಹಾಕಿರುವ ಅಥವಾ ಅನುಮತಿ ನಿರಾಕರಿಸಲ್ಪಟ್ಟ ಸಂಸ್ಥೆಗಳಾಗಿವೆ.
ಇದನ್ನೂ ಓದಿ:ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್: ಕಾನ್ವೆ ಶತಕ; ಚೇತರಿಸಿದ ಕಿವೀಸ್
ಹೆಸರು ಬಹಿರಂಗಪಡಿಸಲಿಚ್ಛಿಸದ ಕೇಂದ್ರ ಗೃಹ ಖಾತೆಯ ಹಿರಿಯ ಅಧಿಕಾರಿಯ ಪ್ರಕಾರ, 6 ಸಾವಿರಕ್ಕೂ ಅಧಿಕ ಎನ್‌ಜಿಒಗಳಿಗೆ ಪರವಾನಿಗೆ ಅವಧಿ ಮುಕ್ತಾ ಯಗೊಳ್ಳುವ ಬಗ್ಗೆ ಸೂಚನೆ ಹಿಂದೆಯೇ ನೀಡಲಾಗಿತ್ತು. ಆದರೆ ಅದಕ್ಕೆ ಹೆಚ್ಚಿನ ಎನ್‌ಜಿಒಗಳು ಪ್ರತಿಕ್ರಿಯೆ ನೀಡಲಿಲ್ಲ. ಅವುಗಳಿಂದ ಪ್ರತಿಕ್ರಿಯೆ ಬಾರದೆ, ಸರಕಾ ರವೇ ಹೇಗೆ ವಿದೇಶಗಳಿಂದ ದೇಣಿಗೆ ಸ್ವೀಕರಿಸಲು ಪರವಾನಿಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ವಿದೇಶಗಳಿಂದ ದೇಣಿಗೆ ಸ್ವೀಕರಿಸುವ ಯಾವುದೇ ಎನ್‌ಜಿಒ ಎಫ್ಸಿಆರ್‌ಎ ಅನ್ವಯ ನೋಂದಣಿ ಮಾಡಿಕೊಳ್ಳುವುದು ಕಾನೂನು ಪ್ರಕಾರ ಕಡ್ಡಾಯ ವಾಗಿದೆ. ಎಫ್ಸಿಆರ್‌ಎ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಪ್ರಕಾರ, ಶುಕ್ರವಾರದವರೆಗೆ 22,762 ಎನ್‌ಜಿಒಗಳು ನೋಂದಣಿ ಮಾಡಿಕೊಂಡಿವೆ.