Advertisement

ಮನಾಲಿ: ಹಿಮಪಾತದಲ್ಲಿ ಸಿಲುಕಿದ 500ಕ್ಕೂ ಅಧಿಕ ಪ್ರವಾಸಿಗರು; ಸ್ಥಳಕ್ಕೆ ಧಾವಿಸಿದ ರಕ್ಷಣಾತಂಡ

01:21 PM Jan 03, 2021 | Team Udayavani |

ಹಿಮಾಚಲ ಪ್ರದೇಶ: ಇಲ್ಲಿನ ಕುಲ್ಲು ಜಿಲ್ಲೆಯಲ್ಲಿ ಸಂಭವಿಸಿರುವ ಭಾರಿ ಪ್ರಮಾಣದ ಹಿಮಪಾತದಲ್ಲಿ 500 ಕ್ಕೂ  ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ವರದಿಯಾಗಿದೆ.

Advertisement

ಶನಿವಾರ (ಜ.2) ರಾತ್ರಿ ಘಟನೆ ನಡೆದ ತಕ್ಷಣ, 20ಕ್ಕೂ ಅಧಿಕ 4×4 ವಾಹನಗಳೊಂದಿಗೆ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿದ್ದು, ಹಿಮಪಾತದಲ್ಲಿ ಸಿಲುಕಿಕೊಂಡಿರುವವರ ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ.

ಹಿಮಪಾತದಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ 48 ಆಸನಗಳನ್ನು ಒಳಗೊಂಡಿರುವ ಬಸ್ ಅನ್ನು ಕುಲಾಂಗ್ ಪ್ರದೇಶಕ್ಕೆ ರವಾನಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ, ಪ್ರತಿಯೊಬ್ಬರೂ ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಬಳಸಲು ಅನುಮತಿ

ಕುರಿತು ಮಾಹಿತಿ ನೀಡಿದ  ಮನಾಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್.ಡಿ.ಎಮ್) ರಾಮನ್ ಘರ್ ಸಂಗಿ, ಅಟಲ್ ಸುರಂಗ  ಮತ್ತು ಸೋಲಾಂಗ್ ನಲ್ಲಾ ನಡುವಿನ ಪ್ರತಿಕೂಲ ವಾತಾವರಣದ ಪರಿಣಾಮದಿಂದಾಗಿ ಘಟನೆ ನಡೆದಿದೆ. ಈಗಾಗಲೇ ರಕ್ಷಣಾ ಕಾರ್ಯಚರಣೆ ಜಾರಿಯಲ್ಲಿದ್ದು, ಆದಷ್ಟು ಶೀಘ್ರವಾಗಿ ವಾಹನ ಸಂಚಾರವನ್ನು ಮತ್ತೆ ಆರಂಭಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ನಂ.1 ರ್ಯಾಂಕಿಂಗ್ಮೇಲೆ ನ್ಯೂಜಿಲ್ಯಾಂಡ್ ಕಣ್ಣು

Advertisement

ಮಧ್ಯೆ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಇಲಾಖೆಯಲ್ಲೋ ಅಲರ್ಟ್ಘೋಷಿಸಿದೆ. ಭಾರಿ ಹಿಮಪಾತಗಳಾಗುವ ಸಾಧ್ಯತೆಗಳಿದ್ದು, ಜನವರಿ 3 ರಿಂದ 5ರವರೆಗೆ ವಾತಾವಾಣದಲ್ಲಿ ಬದಲಾವಣೆಗಳಾಗಲಿದ್ದು, ಮಂಜು ಮುಸುಕಿದ ವಾತಾವರಣದೊಂದಿಗೆ ಗುಡುಗು ಸಹಿತವಾದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next