ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 2.19 ಕೋಟಿ ಮೌಲ್ಯದ 5.06 ಕೆಜಿ ಚಿನ್ನವನ್ನು ಬುಧವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಅವರು ಚಿನ್ನದ ಫಾಯಿಲ್‌ಗಳನ್ನು ಅಡಗಿಸಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದರು.
ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದಿದ್ದ EK-544 ಮತ್ತು UL-121 ವಿಮಾನಗಳ 10 ಪ್ರಯಾಣಿಕರನ್ನು ತಡೆದು ತೀವ್ರ ತಪಾಸಣೆ ನಡೆಸಿದಾಗ ಕಳ್ಳ ಸಾಗಾಣಿಕೆ ಜಾಲ ಬಯಲಾಗಿದೆ.
ಕಳ್ಳಸಾಗಾಣಿಕೆದಾರರು ಲ್ಯಾಪ್‌ಟಾಪ್ ಕೀಬೋರ್ಡ್ ಅಡಿಯಲ್ಲಿ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳ ಅಡಿಯಲ್ಲಿ ತೆಳುವಾದ ಚಿನ್ನದ ಹಾಳೆಗಳನ್ನು ಮರೆ ಮಾಡಿರುವುದು ಅಧಿಕಾರಿಗಳು ಹಂಚಿಕೊಂಡ ಚಿತ್ರಗಳಲ್ಲಿ ಕಂಡು ಬಂದಿದೆ.
ರೂ. 48.6 ಲಕ್ಷ ಮೌಲ್ಯದ ಅಘೋಷಿತ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಕಸ್ಟಮ್ಸ್ ಆಕ್ಟ್ 1962 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.