ಗುಂಡ್ಲುಪೇಟೆ: ತಾಲೂಕಿನ ಆಲತ್ತೂರು ಗ್ರಾಮದಲ್ಲಿ 400ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ರಾಜ್ಯ ವಕ್ತಾರ ಹಾಗೂ ಯುವ ಮುಖಂಡ ಎನ್. ರಾಜುಗೌಡ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಈ ವೇಳೆ ಗುಂಡ್ಲುಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎನ್. ರಾಜು ಗೌಡ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಜನರು, ಜೆಡಿಎಸ್ ತತ್ವ ಸಿದ್ಧಾಂತ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಆಡಳಿತದಲ್ಲಿ ಆದ ಅಭಿವೃದ್ಧಿ ಕಾರ್ಯ ಮೆಚ್ಚಿ ಇತರೆ ಪಕ್ಷಗಳ ಮುಖಂಡರು ಜೆಡಿಎಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಹಿಡಿಯಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಚುನಾವಣೆಗೂ ಮುನ್ನವೇ ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು. ಇದಕ್ಕೂ ಮೊದಲು ಗ್ರಾಮಸ್ಥರು ಎನ್.ರಾಜುಗೌಡಗೆ 15ಕ್ಕೂ ಹೆಚ್ಚು ಟ್ರಾಕ್ಟರ್ ಮೂಲಕ ರ್ಯಾಲಿ ನಡೆಸಿ, ಸ್ವಾಗತ ಕೋರಿದರು.
ಜೆಡಿಎಸ್ ಹಿರಿಯ ಮುಖಂಡ ಬಸವರಾಜಸ್ವಾಮಿ, ರೋಟರ್ ಛೇರ್ಮನ್ ರವಿಕುಮಾರ್, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ್, ಜೆಡಿಎಸ್ ಯುವ ಮುಖಂಡ ರಾಜೇಶ್(ರಾಸ), ಪ್ರವೀಣ್ ಕುಮಾರ್, ಮನು, ಮದನ್ ಗೌಡ, ಕಳ್ಳಿಪುರ ಕುಮಾರ್, ರಘು, ಗಿರೀಶ್, ಪ್ರತಾಪ್, ಲೋಕೇಶ್, ಮುತ್ತುರಾಜ್, ಸೋಮಶೇಖರ್, ಅಕ್ಷಯ್, ಆಕಾಶ್, ರಮೇಶ್, ಮಂಜುನಾಥ್, ದೀಪು, ಜಿ.ಟಿ.ಸುನಿಲ್ ಉಪಸ್ಥಿತರಿದ್ದರು. ಮಂದಿ ಜೆಡಿಎಸ್ ಸೇರ್ಪಡೆ