Advertisement

Delhi; 40 ಕೋಟಿ ರೂ. ಮೌಲ್ಯದ ಅಫೀಮು ಸಹಿತ ಮೂವರ ಬಂಧನ

06:10 PM Sep 22, 2023 | Team Udayavani |

ಹೊಸದಿಲ್ಲಿ: ದೆಹಲಿ ಪೊಲೀಸರ ವಿಶೇಷ ದಳದ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಅಫೀಮು ಸಹಿತ ಮೂವರನ್ನು ಬಂಧಿಸಿದೆ.ಆರೋಪಿಗಳನ್ನು ಅಮ್ರಾ ರಾಮ್ (34), ಭನಾ ರಾಮ್ ಚೌಧರಿ (33) ಮತ್ತು ಭಲ್ಲಾ ರಾಮ್ (31) ಎಂದು ಗುರುತಿಸಲಾಗಿದೆ, ಎಲ್ಲರೂ ರಾಜಸ್ಥಾನದ ಜೋಧ್‌ಪುರ ನಿವಾಸಿಗಳು.

Advertisement

ಅಫೀಮು ಈಶಾನ್ಯ ರಾಜ್ಯಗಳಿಂದ ಕಳ್ಳಸಾಗಣೆಯಾಗಿದ್ದು, ದೆಹಲಿ ಮತ್ತು ಇತರ ರಾಜ್ಯಗಳಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಅಫೀಮು ಅಡಗಿಸಲು ರಹಸ್ಯ ಮಾರ್ಗಗಳನ್ನೂ ಬಳಸುತ್ತಿದ್ದರು, ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next