Advertisement
ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯಗಳಿಗನುಗುಣವಾಗಿ ಈಗಾಗಲೇ ಕೇಂದ್ರ ಸರ್ಕಾರದ ಕಡೆಯಿಂದ 37.93 ಕೋಟಿಯಷ್ಟು ಪ್ರಮಾಣದ ಲಸಿಕೆಗಳನ್ನು ಪೂರೈಸಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Related Articles
Advertisement
ಲಸಿಕಾ ಅಭಿಯಾನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಲಸಿಕೆಗಳನ್ನು ಪೂರೈಸುವುದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಶೇಕಡಾ 75 ರಷ್ಟು ಲಸಿಕೆಗಳು ಸಿದ್ಧವಾಗುತ್ತಿವೆ. ಅದು ಉತ್ಪಾದಕರಿಂದ ಲಭ್ಯವಾದಗ ಅಗತ್ಯಗಳಿಗನುಗುಣವಾಗಿ ರಾಜ್ಯಗಳಗೆ ಪೂರೈಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಸಂಪುಟದಲ್ಲಿ ಜಾತಿ, ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಿದ ಪ್ರಧಾನಿ ಅಭಿನಂದನಾರ್ಹ: ನಿರಾಣಿ