Advertisement

ಡಿಜಿಟಲ್‌ ಇಂಡಿಯಾದಲ್ಲಿ 350 ಬಾರಿ ಅಂತರ್ಜಾಲ ಸೇವೆ ಸ್ಥಗಿತ

10:01 AM Dec 20, 2019 | sudhir |

ಇಂದಿನ ದಿನ ಅಂತರ್ಜಾಲ ಇಲ್ಲದ ಬದುಕು ಸಾಧ್ಯವೇ ಇಲ್ಲ ಎಂಬಂತಿದೆ. ಆದರೆ ಗಲಭೆ, ಭಯೋತ್ಪಾದಕ ಚಟುವಟಿಕೆಗಳು ನಡೆದ ಸಂದರ್ಭ ಮೊದಲ ಕೊಡಲಿ ಪೆಟ್ಟು ಬೀಳುವುದು ಇಂಟರ್ನೆಟ್‌ಗೆ.

Advertisement

ಕಳೆದ 6 ವರ್ಷಗಳಲ್ಲಿ ದೇಶದ ವಿವಿಧೆಡೆಗಳಲ್ಲಿ ಒಟ್ಟು 350 ಬಾರಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡಿದ್ದು, ಇದಕ್ಕೆ ಕಾರಣ, ಅಂಕಿಅಂಶಗಳ ಕುರಿತ ಮಾಹಿತಿ ಇಲ್ಲಿದೆ.

ಡಾಟಾ ಇಂಟೆಲಿಜೆನ್ಸ್ ಯುನಿಟ್‌ (ಡಿಐಯು) ವಿಶ್ಲೇಷಣೆ
ದೇಶದಲ್ಲಿನ ಇಂಟರ್‌ನೆಟ್‌ ಸೇವೆ ಸ್ಥಗಿತಕ್ಕೆ ಸಂಬಂಧಪಟ್ಟಂತೆ ಡಾಟಾ ಇಂಟೆಲಿಜೆನ್ಸ್‌ ಯುನಿಟ್‌ (ಡಿಐಯು) ವಿಶ್ಲೇಷಣೆ ನಡೆಸಿದ್ದು, ಭಯೋತ್ಪಾದಕ ಚಟುವಟಿಕೆಗಳು ಮತ್ತು ಕೋಮು ಉದ್ವಿಗ್ನತೆಗಳ ನಿಯಂತ್ರಿಸುವಿಕೆಯಲ್ಲಿ ಇಂಟರ್‌ನೆಟ್‌ ಸ್ಥಗಿತದಂತಹ ನಿಯಮಗಳು ಅತಿದೊಡ್ಡ ಕೊಡುಗೆ ನೀಡಿವೆ ಎಂದು ಹೇಳಿದೆ.

ಒಟ್ಟು 357 ಬಾರಿ
slfc.in ಮತ್ತು ಇಂಟರ್‌ನೆಟ್‌ಶಟ್‌ಡೌನ್ಸ್‌.ಕಾಮ್‌ ಸಿದ್ಧಪಡಿಸಿದ ದತ್ತಾಂಶದ ಪ್ರಕಾರ 2014ರಿಂದ ದೇಶದಲ್ಲಿ ಒಟ್ಟು 357 ಬಾರಿ ಇಂಟರ್‌ನೆಟ್‌ ಸ್ಥಗಿತಗೊಳಿ ಸಬೇಕಾದ ಪರಿಸ್ಥಿತಿ ಎದುರಾಗಿದೆ.

2012ರಲ್ಲಿ ಮೊದಲ ಬಾರಿ
2012ರಲ್ಲಿ ಜಮ್ಮು ಮತ್ತು ಕಾಶ್ಮೀರ ದಲ್ಲಿ ಗಣರಾಜ್ಯೋತ್ಸವದ ಅಂಗ ವಾಗಿ ಯಾವುದೇ ಕೋಮು ಗಲಭೆಗಳು ನಡೆಯಬಾರದು ಮತ್ತು ವಿವಾದಾತ್ಮಕ ವದಂತಿ ಹರಡಬಾರದೆಂಬ ದೃಷ್ಟಿ ಯಿಂದ ದೇಶದಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

Advertisement

2018ರಲ್ಲಿ ಶೇ.67ರಷ್ಟು ಸ್ಥಗಿತ
ಇಂಟರ್‌ನೆಟ್‌ ಕ್ರಿಯೆಯನ್ನು ಆಧರಿಸುವ ಶಟ್‌ಡೌನ್‌ ಟ್ರ್ಯಾಕರ್‌ ಅಪ್ಟಿಮೇಶನ್‌ ಪ್ರಾಜೆಕ್ಟ್‌ನ ದತ್ತಾಂಶದ ಪ್ರಕಾರ 2018 ರಲ್ಲಿ ವಿಶ್ವದ ಶೇ. 67ರಷ್ಟು ಇಂಟರ್‌ನೆಟ್‌ ಸ್ಥಗಿತಗೊಳ್ಳುವಿಕೆ ಪ್ರಕ ರಣಗಳು ದೇಶದಲ್ಲಿ ನಡೆದಿವೆ.

ಭಾರತದಲ್ಲೇ ಹೆಚ್ಚು
2019ರ ಜನವರಿಯಿಂದ ಜುಲೈ ವರೆಗೆ ಜಗತ್ತಿನಲ್ಲಿ ಅತೀ ಹೆಚ್ಚು ಬಾರಿ ಇಂಟರ್‌ನೆಟ್‌ ಸ್ಥಗಿತಗೊಂಡಿದ್ದು ಭಾರತ ದಲ್ಲೇ. ಈ ಅವಧಿಯಲ್ಲಿ ಶೇ.80ರಷ್ಟು ಸ್ಥಗಿತಗೊಂಡಿದ್ದು, ಜಾಗತಿಕವಾಗಿ ಭಾರತದ ಪಾಲು ಶೇ.67ರಷ್ಟಿದೆ.

ವರ್ಷದಲ್ಲಿ 167 ಬಾರಿ ಸ್ಥಗಿತ
2019ರಲ್ಲಿ ದೇಶದಲ್ಲಿ 93 ಬಾರಿ ಇಂಟರ್‌ನೆಟ್‌ ಸ್ಥಗಿತಗೊಳಿಸ ಲಾಗಿದ್ದು, ಒಟ್ಟು 167 ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಈ ಪೈಕಿ, ಜಮ್ಮು ಮತ್ತು ಕಾಶ್ಮೀರದಲ್ಲಿ 53 ಬಾರಿ ಇಂಟರ್‌ನೆಟ್‌ ಸ್ಥಗಿತವಾಗಿದ್ದು, 93 ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ.

ಕಾಶ್ಮೀರದಲ್ಲಿ ಹೆಚ್ಚು
ಇಂಟರ್‌ನೆಟ್‌ ಸೇವೆ ಸ್ಥಗಿತಕ್ಕೆ ಒಳಗಾದ ಪ್ರದೇಶಗಳ ಪೈಕಿ ಜಮ್ಮು-ಕಾಶ್ಮೀರ ಅಗ್ರಸ್ಥಾನದಲ್ಲಿದ್ದು, 370ನೇ ವಿಧಿ ರದ್ದು ಮತ್ತು ಪುಲ್ವಾಮಾ ದಾಳಿ ಅವಧಿಯಲ್ಲಿ ಹೆಚ್ಚು ಬಾರಿ ಇಂಟರ್‌ನೆಟ್‌ ಸೇವೆ ಸ್ಥಗಿತ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next