Advertisement
ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳಿದ್ದಾರೆ. ಕಳೆದ ರಾತ್ರಿ ಅನ್ನ ಸಾರು ಸೇವಿಸಿದ್ದು, ಬೆಳಗ್ಗೆ ಇಡ್ಲಿ ಉಪಹಾರ ಸೇವಿಸಿದ್ದು ಕೆಲ ಹೊತ್ತಿನಲ್ಲಿ ತಲೆಸುತ್ತು ಶುರುವಾಗಿದೆ. ಕೂಡಲೇ ಇಡ್ಲಿ ಉಪಹಾರ ಬದಲಿಸಿ ಪಲಾವ್ ಅಡುಗೆ ತಯಾರಿಸಲು ಮುಂದಾದಾಗ 2 ತಾಸು ಹಿಡಿಯಿತು. ಆಗ ಬೆಳಗಿನ ಉಪಹಾರ ವಿಳಂಬವಾಗಿದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಒಬ್ಬರಿಂದ ಒಬ್ಬರಿಗೆ ಸಮೂಹ ಸನ್ನಿಗೆ ಒಳಗಾಗಿ ಗಾಬರಿಗೊಂಡಿರುವುದು ಕಂಡು ಬಂತು. ಆತಂಕಗೊಂಡಿದ್ದ ವಿದ್ಯಾರ್ಥಿಗಳು ಕೂಡಲೇ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ತಂದರು. ಕೂಡಲೇ ಆರೋಗ್ಯ ಇಲಾಖೆ ಗಮನಕ್ಕೆ ತಂದು ಅಸ್ವಸ್ಥಗೊಂಡ 30 ವಿದ್ಯಾರ್ಥಿಗಳನ್ನು ಮೊದಲ ಹಂತವಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಯ ದಾಖಲಿಸಿ ಚಿಕಿತ್ಸೆ ನೀಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದರು.
Related Articles
Advertisement
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಜಿ.ಪಂ. ಸದಸ್ಯ ಕೆ.ಮಹೇಶ ಮತ್ತೀತರರು ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಯ ಪ್ರಾಚಾರ್ಯ ವಿಜಯಕುಮಾರ ದೊಡ್ಡಮನಿ ಪ್ರತಿಕ್ರಿಯಿಸಿ ಬೆಳಗಿನ ಉಪಹಾರ ವಿಳಂಬವಾಗಿದ್ದರಿಂದ ಈ ರೀತಿಯಾಗಿದೆ ಎಂದು ಸ್ಪಷ್ಟಪಡಿಸಿದರು.