Advertisement

3 ವರ್ಷದಲ್ಲಿ 27 ಸಾವಿರ ಸಿಬ್ಬಂದಿ ರಾಜೀನಾಮೆ

10:15 AM Mar 07, 2018 | Team Udayavani |

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಸುಮಾರು 27 ಸಾವಿರ ಸಿಆರ್‌ಪಿಎಫ್ ಯೋಧರು ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ಮಾಹಿತಿ ನೀಡಿದೆ.

Advertisement

2015ರಿಂದ 2018ರ ಜನವರಿ ವೇಳೆಗೆ ಗಡಿ ಭದ್ರತಾ ಪಡೆಯ 11,198, ಕೇಂದ್ರ ಮೀಸಲು ಪೊಲೀಸ್‌ ಪಡೆಯ 10,620 ಯೋಧರು ಕೆಲಸ ಬಿಟ್ಟಿದ್ದಾರೆ. ಜತೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 3,410 ನಿವೃತ್ತಿ ತೆಗೆದುಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫ‌ಲ್ಸ್‌ ಪಡೆಯ 4200 ಯೋಧರು ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next