Advertisement

Morocco Quake: 2,000 ದಾಟಿದ ಮೃತರ ಸಂಖ್ಯೆ… ಸಹಾಯಕ್ಕೆ ಧಾವಿಸಿದ ನೆರೆಯ ರಾಷ್ಟ್ರಗಳು

09:29 AM Sep 10, 2023 | Team Udayavani |

ರಬಾತ್:‌ ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2000 ಗಡಿ ದಾಟಿದ್ದು 2,059 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Advertisement

ಶುಕ್ರವಾರದಂದು 6.8 ತೀವ್ರತೆಯ ಪ್ರಬಲ ಭೂಕಂಪವು ಮಧ್ಯ ಮೊರಾಕೊದಲ್ಲಿ ಮರ್ರಾಕೇಶ್‌ನ ನೈಋತ್ಯಕ್ಕೆ 72 ಕಿಲೋಮೀಟರ್‌ ದೂರದಲ್ಲಿ ಸಂಭವಿಸಿದ್ದು, ಘಟನೆಯಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಮತ್ತು 2,059 ಮಂದಿ ಗಾಯಗೊಂಡರು. ಇದು ಆರು ದಶಕದಲ್ಲೇ ಸಂಭವಿಸಿದ ಅತೀ ದೊಡ್ಡ ದುರಂತ ಎನ್ನಲಾಗಿದೆ.

ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ತ್ವರಿತಗತಿಯಿಂದ ನಡೆಯುತ್ತಿದ್ದು ರಕ್ಷಣಾ ಕಾರ್ಯಕ್ಕೆ ನೆರೆಯ ದೇಶವಾದ ಅಲ್ಜೀರಿಯಾ ಸೇರಿದಂತೆ ಹೆಚ್ಚಿನ ದೇಶಗಳು ಸಹಾಯಕ್ಕೆ ಮುಂದಾಗಿವೆ ಎಂದು ಹೇಳಲಾಗಿದೆ.

ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಪರ್ವತ ಗ್ರಾಮವಾದ ತಫೆಘಗ್ಟೆಯಲ್ಲಿ ಇದ್ದ ಎಲ್ಲಾ ಕಟ್ಟಡಗಳು ಕುಸಿದು ಬಿದ್ದಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ, ಅಲ್ಲದೆ ಘಟನೆ ಮಧ್ಯ ರಾತ್ರಿ ಸಂಭವಿಸಿದ ಕಾರಣ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಅಧಿಕಾರಿಗಳು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು, ಆದರೆ ಹಾನಿಯನ್ನು ಸರಿಪಡಿಸಲು ವರ್ಷಗಳು ತೆಗೆದುಕೊಳ್ಳಬಹುದು ಎಂದು ರೆಡ್‌ಕ್ರಾಸ್ ಎಚ್ಚರಿಸಿದೆ.

Advertisement

ಕರಾವಳಿ ನಗರಗಳಾದ ರಬತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾದಲ್ಲಿಯೂ ಸಹ ಪ್ರಬಲವಾದ ಭೂಕಂಪನ ಸಂಭವಿಸಿತ್ತು, ಭೂಕಂಪದಿಂದ ವ್ಯಾಪಕ ಹಾನಿಯುಂಟಾಗಿದ್ದು ಕೂಡಲೇ ಕಾರ್ಯಪ್ರವೃತ್ತರಾದ ತಂಡ ನಿವಾಸಿಗಳನ್ನು ಹಾಗೂ ಪ್ರವಾಸಿಗರನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡಿದರು ಎನ್ನಲಾಗಿದೆ.

ಇದನ್ನೂ ಓದಿ: Delhi: ಹಿಂದೂ ಎನ್ನಲು ಹೆಮ್ಮೆಯಾಗುತ್ತಿದೆ; ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ರಿಷಿ ದಂಪತಿ

Advertisement

Udayavani is now on Telegram. Click here to join our channel and stay updated with the latest news.

Next