Advertisement

ಮನಾಲಿ-ಲೇಹ್ ರಸ್ತೆಯಲ್ಲಿ ಭಾರೀ ಹಿಮಪಾತ, ಸೇನಾ ಟ್ರಕ್ಸ್, ನೂರಾರು ಪ್ರವಾಸಿಗರ ಪರದಾಟ

10:46 AM Oct 09, 2019 | Nagendra Trasi |

ಹಿಮಾಚಲ ಪ್ರದೇಶ: ಮನಾಲಿ-ಲೇಹ್ ರಸ್ತೆಯ ಮೇಲೆ ಭಾರೀ ಹಿಮದ ರಾಶಿ ಬಿದ್ದ ಪರಿಣಾಮ ಸುಮಾರು 150ಕ್ಕೂ ಅಧಿಕ ವಾಹನಗಳು ರೋಹ್ಟಂಗ್ ಪಾಸ್ ನಲ್ಲಿ ನಿಂತಿದ್ದು, ಈವರೆಗೆ 200ಕ್ಕೂ ಅಧಿಕ ಪ್ರವಾಸಿಗರನ್ನು ರೋಹ್ಟಂಗ್ ರಕ್ಷಣಾ ತಂಡ ಮತ್ತು ಜಿಲ್ಲಾಡಳಿತ, ಪೊಲೀಸರು ಜಂಟಿಯಾಗಿ ರಕ್ಷಿಸಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ಎರಡು ದಿನಗಳಿಂದ ಮನಾಲಿ, ಲೇಹ್ ನಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಸೇನಾ ವಾಹನ ಸೇರಿದಂತೆ ನೂರಾರು ಪ್ರವಾಸಿಗರು ರಸ್ತೆ ಮಧ್ಯೆಯೇ ಸಿಲುಕಿಕೊಂಡು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಆಧುನಿಕ ಹಿಟಾಚಿ ಯಂತ್ರಗಳ ಸಹಾಯದೊಂದಿಗೆ ಹಿಮದ ರಾಶಿ ತೆರವುಗೊಳಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಸೇನಾ ಟ್ರಕ್ಸ್, ಪ್ರವಾಸಿಗರ ವಾಹನ ಹಿಮದ ರಾಶಿಯಲ್ಲಿ ಹುದುಗಿದ್ದು ಅವುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬಿರುಸಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮನಾಲಿ, ಲೇಹ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಹಿಮಪಾತದಿಂದಾಗಿ ರಾಜ್ಯಾದ್ಯಂತ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಕೇಲಾಂಗ್ ಮನಾಲಿ ಪ್ರದೇಶದ ಬಸ್ ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರು, ಜನರು ರೋಹ್ಟಂಗ್ ಪಾಸ್ ದಾರಿಯಲ್ಲಿ ಸಂಚರಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next