ತೆಲಂಗಾಣ: ಸುಮಾರು 100 ಮಂದಿ ಮನೆಯೊಂದಕ್ಕೆ ದಾಳಿ 24 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ತೆಲಂಗಾಣ ರಂಗರೆಡ್ಡಿ ಜಿಲ್ಲೆಯಲ್ಲಿ ಶುಕ್ರವಾರ (ಡಿ.9 ರಂದು) ನಡೆದಿದೆ.
ವೈಶಾಲಿ ಎನ್ನುವ 24 ವರ್ಷದ ಯುವತಿಯನ್ನು ಸುಮಾರು 100 ಮಂದಿ ಯುವಕರು ಯುವತಿಯ ಮನೆಯತ್ತ ಬಂದು ಮನೆಗೆ ಕಲ್ಲು ತೂರಾಟ ನಡೆಸಿ, ಮನೆಯ ಸಾಮಾಗ್ರಿಯನ್ನು ಪುಡಿಗಟ್ಟಿ,ಕಾರಿನ ಗಾಜನ್ನು ಹೊಡೆದು ಹಾಕಿ ಯುವತಿಯನ್ನು ಬಲವಂತವಾಗಿ ಪೋಷಕರ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆಯ ಮೇಲೆ ರಾಕೆಟ್ ದಾಳಿ: ಖಲೀಸ್ಥಾನಿ ಉಗ್ರರ ಕೃತ್ಯ ಶಂಕೆ
ಮನೆಯಲ್ಲಿದ್ದ ಇತರ ಸದಸ್ಯರ ಮೇಲೂ ಯುವಕರು ಹಲ್ಲೆ ನಡೆಸಿದ್ದಾರೆ. ಯುವಕರ ದಾಂಧಲೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.
Related Articles
ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ. ಯಾಕೆ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಇದುಯವರೆಗೆ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.