Advertisement

Bihar Government: 1.2 ಕೋಟಿ ಮನರೇಗಾ ಕಾರ್ಡ್‌ ರದ್ದು

12:12 AM May 02, 2023 | Team Udayavani |

ಪಾಟ್ನಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅನ್ವಯ ಬಿಹಾರದಲ್ಲಿ ನೀಡಲಾಗಿರುವ ಉದ್ಯೋಗ ಕಾರ್ಡ್‌ಗಳ ಪೈಕಿ ನಿಷ್ಕ್ರಿಯವಾಗಿರುವ 1.2 ಕೋಟಿ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದಾಗಿ ರಾಜ್ಯ ಸರಕಾರ ತಿಳಿಸಿದೆ.

Advertisement

ಈ ಮೂಲಕ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಸರಕಾರದ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಶಂಕಿಸಲಾಗುತ್ತಿದೆ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾರ್ಡ್‌ಗಳ ಕುರಿತು ತಪಾಸಣೆ ನಡೆಸಲಾಗಿದೆ. ಈ ವೇಳೆ ನೀಡಲಾಗಿರುವ 3.85 ಕೋಟಿ ಕಾರ್ಡ್‌ಗಳ ಪೈಕಿ 1.2 ಕೋಟಿ ಕಾರ್ಡ್‌ಗಳು ನಿಷ್ಕ್ರಿಯವಾಗಿದ್ದದ್ದು ಪತ್ತೆಯಾಗಿದೆ.

ಕೆಲವು ಕಾರ್ಡ್‌ಗಳು ನಕಲಿ ಎಂದೂ ಗೊತ್ತಾಗಿದ್ದರಿಂದ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್‌ ಕುಮಾರ್‌ ಹೇಳಿದ್ದಾರೆ.

2020-21ನೇ ಸಾಲಿನಲ್ಲಿ 33.04 ಲಕ್ಷ, 2021-22ನೇ ಸಾಲಿನಲ್ಲಿ 4.51 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next