Advertisement

ಹಾಕಿ ಇಂಡಿಯಾಕ್ಕೆ ಶ್ರೇಷ್ಠ ಸಂಘಟನಾ ಪ್ರಶಸ್ತಿ

10:03 PM Mar 23, 2023 | Team Udayavani |

ನವದೆಹಲಿ: ಈ ವರ್ಷದ ಆರಂಭದಲ್ಲಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಎಫ್‌ಐಎಚ್‌ ಪುರುಷರ ವಿಶ್ವಕಪ್‌ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಹಾಕಿ ಇಂಡಿಯಾಗೆ ಏಷ್ಯನ್‌ ಹಾಕಿ ಒಕ್ಕೂಟ (ಎಎಚ್‌ಎಫ್‌) ಅತ್ಯುತ್ತಮ ಸಂಘಟಕ ಪ್ರಶಸ್ತಿಯನ್ನು ಗುರುವಾರ ನೀಡಿದೆ. ಕೊರಿಯಾದ ಮುಂಗ್‌ಯೆಯಾಂಗ್‌ನಲ್ಲಿ ನಡೆದ ಎಎಚ್‌ಎಫ್‌ ಅಧಿವೇಶನದಲ್ಲಿ ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾನಾಥ್‌ ಸಿಂಗ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

Advertisement

ಭುವನೇಶ್ವರದಲ್ಲಿರುವ ಕಳಿಂಗ ಹಾಕಿ ಕ್ರೀಡಾಂಗಣವು ಈ ಹಿಂದೆ 2018ರಲ್ಲಿ ಎಫ್‌ಐಎಚ್‌ ವಿಶ್ವಕಪ್‌ ಅನ್ನು ಆಯೋಜಿಸಿದ್ದರೆ, ರೂರ್ಕೆಲದಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣವು ಅದರ ಬೃಹತ್‌ ಆಸನ ಸಾಮರ್ಥ್ಯದಿಂದ ಹಾಕಿಪ್ರಿಯರ ಮನಗೆದ್ದಿತು. ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣವು ಒಲಿಂಪಿಕ್‌ ಶೈಲಿಯ ಹಾಕಿ ಗ್ರಾಮವನ್ನು ಸಹ ಒಳಗೊಂಡಿದೆ, ಈ ಕ್ರೀಡಾಗ್ರಾಮದಲ್ಲಿ ಒಲಿಂಪಿಕ್ಸ್‌ ,ಕಾಮನ್‌ವೆಲ್ತ ಮತ್ತು ಏಷ್ಯನ್‌ ಕ್ರೀಡಾಕೂಟಗಳಂತಹ ಬಹುರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಬಹುದಾಗಿದೆ.

ನಮ್ಮ ಸಾಧನೆಯನ್ನು ಗುರುತಿಸಿ ಗೌರವಿಸಿದ ಏಷ್ಯನ್‌ ಹಾಕಿ ಫೆಡರೇಶನ್‌ಗೆ ನಾವು ಕೃತಜ್ಞರಾಗಿದ್ದೇವೆ. ತವರಿನಲ್ಲಿ ವಿಶ್ವಕಪ್‌ ಆಯೋಜಿಸುವುದು ಹಾಕಿ ಇಂಡಿಯಾ ಪಾಲಿಗೆ ವಿಶೇಷವೆಂದು ಭಾವಿಸುತ್ತೇವೆ. ಪ್ರತಿಯೊಬ್ಬರಿಗೆ ಸ್ಮರಣೀಯ ಅನುಭವ ಸಿಗುವುದೇ ನಮ್ಮ ಪಾಲಿಗೆ ಪ್ರಮುಖ ಆದ್ಯತೆಯಾಗಿತ್ತು ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next