ಚಿಕ್ಕಮಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಹೊರಗುತ್ತಿಗೆ ಪದ್ಧತಿ ಕೈ ಬಿಡುವಂತೆ ಒತ್ತಾಯಿಸಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಹೋರಾಟ ಭಾನುವಾರಕ್ಕೆ 11ನೇ ದಿನಕ್ಕೆ ಕಾಲಿಟ್ಟಿದ್ದು. ಸರ್ಕಾರ ನೌಕರರ ಬೇಡಿಕೆಗೆ ಕ್ಯಾರೇ ಎನ್ನದಿರುವುದರಿಂದ ಆಸ್ಪತ್ರೆಗಳು ಅವ್ಯಸ್ಥೆಯ ಆಗರವಾಗಿವೆ.
ಜಿಲ್ಲಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಗೆ ಮುಂದಾಗಿರುವುದರಿಂದ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ವೈದ್ಯರು, ನರ್ಸ್, ಡಾಟಾ ಎಂಟ್ರಿ ಸಿಬ್ಬಂದಿ, “ಡಿ’ ಗ್ರೂಪ್ ನೌಕರರಿಲ್ಲದೆ ಸಮಸ್ಯೆ ಉಂಟಾಗಿದ್ದು, ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದರಿಂದ ಪರಿಸ್ಥತಿ ಮತ್ತಷ್ಟು ಬಿಗಡಾಯಿಸಿದೆ.
ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವಾ ಭದ್ರತೆ ನೀಡಬೇಕು. ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ವೈದ್ಯರು, ಡಾಟಾಎಂಟ್ರಿ ಆಪರೇಟರ್, ನರ್ಸ್, “ಡಿ’ ದರ್ಜೆ ನೌಕರರುಕರ್ತವ್ಯಕ್ಕೆ ಹಾಜರಾಗದೇ ಹೋರಾಟಕ್ಕೆಮುಂದಾಗಿರುವ ಪರಿಣಾಮ ಚಿಕ್ಕಮಗಳೂರುನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅನೇಕ ಸಮಸ್ಯೆ ಎದುರಿಸುವಂತಾಗಿದೆ.
ನವಜಾತ ಶಿಶು ನಿಗಾ ಘಟಕದ ಬಹುತೇಕ ಸಿಬ್ಬಂದಿ ತರಬೇತಿ ಪಡೆದ ಹೊರಗುತ್ತಿಗೆ ನೌಕರರೇ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ತ್ಯಜಿಸಿಹೋರಾಟಕ್ಕೆ ಮುಂದಾಗಿರುವುದರಿಂದ ನವಜಾತ ಶಿಶು ನಿಗಾ ಘಟಕಕ್ಕೆ ತರಬೇತಿ ನೀಡಿ ಒಬ್ಬರು,ಇಬ್ಬರು ಸಿಬ್ಬಂ ದಿಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ. ವೈದ್ಯರ ಕೊರತೆಯಿಂದಾಗಿ ನಾನ್ ಕ್ಲಿನಿಕ್ ಡಿಸಿಸ್‌ಗೆ ಸಂಬಂಧಪಟ್ಟಂತೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌ನಂತರ ಗಂಭೀರ ಕಾಯಿಲೆಗಳಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆದಂತಾಗಿದ್ದು, ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಯ ಮೊರೆ ಹೋಗುವಂತಾಗಿದೆ.
ಡಾಟಾ ಟಂಟ್ರಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿರುವುದರಿಂದ ಐಸಿಟಿಸಿ, ಎನ್‌ವಿಬಿಡಿಸಿಪಿ, ಐಡಿಎಸ್‌ಪಿ, ಎನ್‌ಎಫ್‌ಡಿಎಸ್, ಎನ್‌ಸಿಡಿ ನ್ಯಾಷನಲ್ ರಿಪೋರ್ಟ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಸಾಧ್ಯವಾಗದಾಗಿದೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ 18 ಜನ ಡಾಟಾ ಎಂಟ್ರಿ ವಿಭಾದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ 8 ಜನರು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ವೈರಾಜಿಕಲ್‌ಪ್ರಯೋಗಾಲಯದಲ್ಲಿ ಕೇವಲ ಇಬ್ಬರು ಟೆಕ್ನಿಷಿಯನ್ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ದಿನಕ್ಕೆ 500 ರಿಂದ 600 ಕೋವಿಡ್ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸುವ ಪರಿಸ್ಥಿತಿ ಇದೆ. ಡಾಟಾ ಎಂಟ್ರಿ ಸಿಬ್ಬಂದಿ ಕೊರತೆಯಿಂದ ರೋಗಿಯ ದಾಖಲಾತಿ, ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರ, ಆಸ್ಪತ್ರೆಯಿಂದ ರೋಗಿಯ ಬಿಡುಗಡೆ ಸೇರಿದಂತೆ ಅನೇಕ ಸಮಸ್ಯೆಗಳಾಗುತ್ತಿದ್ದು, ಇರುವ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು “ಡಿ’ ಗ್ರೂಪ್ ನೌಕರರು ಪ್ರತಿಭಟನೆ ನಿರತರಾಗಿರುವುದರಿಂದ ಸ್ವಚ್ಛತೆಗೂ ಆದ್ಯತೆ ನೀಡಲು ಸಾಧ್ಯವಾಗದಂತಾಗಿದೆ.