Advertisement
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ ಅಂಗವಿಕಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಅಧಿ ಕಾರದಲ್ಲಿ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಅಂಗವಿಕಲರನ್ನು ಸಂರ್ಪೂಣವಾಗಿ ಕಡೆಗಣಿಸಿದ್ದಾರೆ ಎಂದು ಹರಿಹಾಯ್ದರು.
ಚೇತನರಿಗೆ ಕೇವಲ 100 ರೂ., 75 ಕ್ಕಿಂತ ಮೇಲ್ಪಟ್ಟು ಹೊಂದಿದದವರಿಗೆ 200 ರೂ. ಕೊಡುವ ಮೂಲಕ ವಿಕಲ ಚೇತನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು. ಸರ್ವಜ್ಞ ವಿಕಲ ಚೇತನ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪರುಶುರಾಮ ಗುನ್ನಾಪುರ ಮಾತನಾಡಿ, ರಾಜ್ಯದಲ್ಲಿ ಸುಮಾರು 27 ಸಾವಿರ ವಿಕಲ ಚೇತನ ಬ್ಯಾಕ್ ಲಾಗ್ ಹುದ್ದೆಗಳು ಖಾಲಿಯಿದ್ದು, ಇದುವರೆಗೆ ಸರ್ಕಾರ ವಿಶೇಷ ನೇಮಕಾತಿ ಮಾಡಿಕೊಂಡಿಲ್ಲ. ವಿಕಲ ಚೇತನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸಿಲ್ಲ ಎಂದು ಟೀಕಿಸಿದರು. ವಿನೋದ ಖೇಡ, ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಪ್ರತಿ ಗ್ರಾಪಂ ಸೇವೆಯಲ್ಲಿರುವ ವಿಕಲಚೇತನರ ವೇತನವನ್ನೂ ಹೆಚ್ಚಿಸಬೇಕು. ಸರ್ಕಾರ ನೀಡುವ ಪ್ರತಿ ಇಲಾಖೆಗಳಲ್ಲಿ ಶೇ.
5ರಷ್ಟು ಅನುದಾನವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ವಿಕಲ ಚೇತನ ಹೊಸ ಕಾಯ್ದೆ 2016 ಸಮಗ್ರವಾಗಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು.
Related Articles
Advertisement