ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಅವರಿಗೆ
ಮನವಿ ಪತ್ರ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ದೇವು ಬಿ.ಗುಡಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ಆಶಯ ಈಡೇರುತ್ತಿಲ್ಲ. ಆದರೆ ಇದು ರಾಜಕೀಯ ವಿಷಯವಾಗಿ ಪರಿವರ್ತನೆಯಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯಲು ನೀರಿ ಅಗತ್ಯವಿದೆ. ಮಹದಾಯಿ ನದಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪರಿಪರಿಯಾಗಿಕೇಳುವ ಸ್ಥಿತಿ ಬಂದಿದೆ. ಇದಕ್ಕೆ ಕಾರಣ ರಾಜಕೀಯ ಮೇಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚರಬಸವೇಶ್ವ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಯಾವುದೇ ಬಂದ್ ಆಚರಣೆ ನಡೆಯಲಿಲ್ಲ. ಆದರೆ ಕನ್ನಡಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿ ಮನವಿ ಪತ್ರ ಸಲ್ಲಿಸಿದರು.
Related Articles
ಭೀಮರಾಯ ಕಾಂಗ್ರೆಸ್, ವಿರೇಶ ಅಂಗಡಿ, ಅಮರೇಶಗೌಡ ಸಗರ, ವಿಜಯ ಚಿಗಿರಿ, ನಿಂಗು ಶಹಾಪುರ, ನಾಗರಾಜ ದೊರಿ, ನಿಂಗಣ್ಣ ಟಣಕೆದಾರ, ಶರಣು ಮದ್ರಿಕಿ, ಲೋಕನಾಥ ದೋರನಹಳಿ, ಮಹಾದೇವ ಮದ್ರಿಕಿ, ದೇವು ಸೂಗೂರ, ಯಲ್ಲಪ್ಪ ಸಗರ, ಮಲ್ಲಾರಾವ್ ಕುಲಕರ್ಣಿ, ಮರಿಲಿಂಗ ಸಗರ, ನಿಂಗು ತಿಮ್ಮಾಪುರ, ಸಾಬರಡ್ಡಿ ಸಗರ, ಪರಶುರಾಮ ಸಗರ, ದಂಡಪ್ಪ ಸಗರ, ರಾಜು ಶರಣು ಇದ್ದರು.
Advertisement