Advertisement

ಬೇರೆ ಗ್ರಾಮದ ಕೂಲಿ ಕಾರ್ಮಿಕರಿಗೆ ಮಣೆ-ಕಾರ್ಮಿಕರ ಆಕ್ರೋಶ

09:18 AM Sep 25, 2022 | Team Udayavani |

ಚಿಂಚೋಳಿ: ತಾಲೂಕಿನ ಹೂಡದಳ್ಳಿ ಮತ್ತು ಗಾರಂಪಳ್ಳಿ ಗ್ರಾಮದ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಮೂಲ ನಿವಾಸಿ ಬಹುಜನ ಮಹಿಳಾ ಸಂಘದ ಮುಖಂಡರು ಪಟ್ಟಣದ ಚಂದಾಪೂರ ನಗರದಲ್ಲಿ ಶಾಸಕ ಡಾ|ಅವಿನಾಶ ಜಾಧವ ಅವರಿಗೆ ಘೇರಾವ್‌ ಹಾಕಿ ಮನವಿ ಪತ್ರ ಸಲ್ಲಿಸಿದರು.

Advertisement

ಹೂಡದಳ್ಳಿ, ಗಾರಂಪಳ್ಳಿ ಗ್ರಾಮಗಳಲ್ಲಿ ಮಹಿಳಾ ಮತ್ತು ಪುರುಷ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರೂ ಕೆಲಸ ನೀಡುತ್ತಿಲ್ಲ. ಸ್ವ-ಗ್ರಾಮದ ಕೂಲಿಕಾರ್ಮಿಕರನ್ನು ಕಡೆಗಾಣಿಸಿ ಬೇರೆ ಗ್ರಾಮದ ಕೂಲಿಕಾರ್ಮಿಕರನ್ನು ಟಂಟಂ ವಾಹನದಲ್ಲಿ ಕರೆತಂದು ಕೆಲಸ ಮಾಡಿಸುತ್ತಿದ್ದಾರೆ. ಗಾರಂಪಳ್ಳಿ ಪಿಡಿಒ ಮತ್ತು ಕಂಪ್ಯೂಟರ್‌ ಆಪರೇಟರ್‌ ಸಾಮಾನ್ಯ ಜನರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಸಂಘದ ಮುಖಂಡ ಮಾರುತಿ ಗಂಜಗಿರಿ ಶಾಸಕರ ಗಮನಕ್ಕೆ ತಂದರು.

ಮುಖಂಡ ಪೂಜಾರಿ ಗೋಪಾಲ ಮಾತನಾಡಿ, ಗಾರಂಪಳ್ಳಿ ಪಂಚಾಯಿತಿಯಲ್ಲಿ ಪತ್ತಿ ಹೆಸರಿನಲ್ಲಿ ಪತಿಯಂದಿರ ಹಸ್ತಕ್ಷೇಪ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಲ್ಲದವರು ಪತ್ನಿ ಹೆಸರಿನಲ್ಲಿಯೇ ದಬ್ಟಾಳಿಕೆ ನಡೆಸುತ್ತಿದ್ದಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಆ. 1ರಂದು ತಾಪಂ ಎದುರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ತಾ.ಪಂ ಅಧಿಕಾರಿಗಳು ನೀಡಿದ ಭರವಸೆ ಇನ್ನುವರೆಗೆ ಇಡೇರಿಸಿಲ್ಲವೆಂದು ಶಾಸಕರಿಗೆ ತಿಳಿಸಿದರು.

ಶಾಸಕ ಡಾ|ಅವಿನಾಶ ಜಾಧವ ಪ್ರತಿಭಟನೆಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ನಿಮ್ಮ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುತ್ತೇನೆಂದು ತಿಳಿಸಿದರು. ಮುಖಂಡರಾದ ಹರ್ಷವರ್ಧನ, ರಜಿಯಾ ಬೇಗಂ, ಸಿದ್ಧು ರಂಗನೂರ, ಮೌನೇಶ ಮುಸ್ತಾರಿ, ಗೋಪಾಲ ಪೂಜಾರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next