Advertisement
ನಿಮ್ಮಂಥ ನಾಯಕರು ನಮಗೆ ಬೇಕು ಎಂದು ಒಕ್ಕೊರಲಿನಿಂದ ಕೂಗುವ ಮೂಲಕ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮನ ಒಲಿಸುವಲ್ಲಿ ಎಸ್.ಪಿ.ಮುದ್ದಹನುಮೇಗೌಡರ ಅಭಿಮಾನಿಗಳು ಯಶಸ್ವಿಯಾದರು.
Related Articles
Advertisement
ಬಂಡಾಯ ಅಭ್ಯರ್ಥಿ: ದೇವೇಗೌಡರ ಸ್ಪರ್ಧೆ ಅಂತಿಮವಾಗಿರುವ ಬೆನ್ನಲ್ಲೆ ಕಾಂಗ್ರೆಸ್, ತನ್ನ ಮೈತ್ರಿ ಧರ್ಮವನ್ನೂ ಲೆಕ್ಕಿಸದೇ ಬಂಡಾಯದ ಅಭ್ಯರ್ಥಿಯಾಗಿ ಮುದ್ದಹನುಮೇಗೌಡರು ಸ್ಪರ್ಧೆಗೆ ಮುಂದಾಗಿರುವುದು ಜೆಡಿಎಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡರನ್ನು ಮನವೊಲಿಸುವ ಪ್ರಯತ್ನ ಮಾಡುತ್ತದೆಯೋ..? ಅಥವಾ ಮುದ್ದಹನುಮೇಗೌಡರನ್ನೇ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತದೆಯೋ ಎನ್ನುವುದು ಸದ್ಯದ ಪ್ರಶ್ನೆಯಾಗಿಯೇ ಉಳಿದಿದೆ.
ಸೋಮವಾರ 11 ಗಂಟೆಗೆ ಟೌನ್‌ಹಾಲ್‌ನಿಂದ ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಡೀಸಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ನನಗೆ ಟಿಕೆಟ್ ನೀಡದೇ ಇರಲು ಕಾರಣ ತಿಳಿಸಿ. ಒಂದೇ ಒಂದು ಕಾರಣ ಹೇಳದೇ, ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ, ಒಂದು ಅವಕಾಶ ಕೊಡಿ, ನನಗೆ ಟಿಕೆಟ್ ಕೊಟ್ಟರೆ ಇತಿಹಾಸ ಸೃಷ್ಟಿಯಾಗುತ್ತದೆ. ಪಕ್ಷದ ಬಿ-ಫಾರಂ ಸಿಗದಿದ್ದಲ್ಲಿ ಆ ಬಗ್ಗೆ ಸೋಮವಾರ ಮಾತನಾಡುತ್ತೇನೆ. ನಾಮಪತ್ರ ಸಲ್ಲಿಸೋದು ಮಾತ್ರ ನಿಶ್ಚಿತ, ಬೇರೆ ಏನೇ ಇದ್ದರೂ ಸೋಮವಾರ ಮಾತನಾಡುತ್ತೇನೆ.-ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಸಂಸದ * ಚಿ.ನಿ.ಪುರುಷೋತ್ತಮ್