Advertisement

ಡೀಸಿ ವಿವಾದಾತ್ಮಕ ಆದೇಶಕ್ಕೆ ಆಕ್ರೋಶ

05:19 PM Oct 04, 2019 | Team Udayavani |

ಕೋಲಾರ: ನಗರದ ಹೊಸ ಬಸ್‌ ನಿಲ್ದಾಣ ವೃತ್ತದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಜಿಲ್ಲಾ ಪ್ರಗತಿಪರ ಸಂಘಟನೆ ಗಳಿಂದ ಆದೇಶದ ಪ್ರತಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಯಾವುದೇ ಸರ್ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬಾರದು. ಪ್ರತಿಭಟನೆ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅ.1ರಂದು ಆದೇಶ ಹೊರಡಿಸಿದ್ದರು. ಜೊತೆಗೆ ಸರ್ಕಾರಿ ಕಚೇರಿಗಳ ಸುತ್ತಲೂ 200 ಮೀಟರ್‌ ಅಂತರದವರೆಗೆ 144 ಸೆಕ್ಷನ್‌ ಜಾರಿ ಮಾಡಿದ್ದರು. ಈ ವಿವಾದಾತ್ಮಕ ಆದೇಶ ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಅನಿರ್ದಿಷ್ಟಾವಧಿ ಪ್ರತಿಭಟನೆ: ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ವಿವಾದಾತ್ಮಕ ಆದೇಶವನ್ನು ಖಂಡಿಸಿ ನಗರದ ಪತ್ರಕರ್ತರ ಭವನದಲ್ಲಿ ಅ.10ರಂದು ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ಸಭೆ ಸೇರಿ ನಗರದ ನಚಿಕೇತ ನಿಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಕಾಲ್ನಡಿಗೆ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಡಿಪಿಎಸ್‌ ಮುನಿರಾಜು, ನರಸಾಪುರ ನಾರಾಯಣಸ್ವಾಮಿ, ದಲಿತ ನಾರಾಯಣಸ್ವಾಮಿ, ಜನವಾದಿ ಮಹಿಳಾಸಂಘಟನೆಯ ವಿ.ಗೀತಾ, ಸಂಗಸಂದ್ರ ವಿಜಯಕುಮಾರ್‌, ಸಿ.ವಿ.ನಾಗರಾಜ್‌, ನಾಗನಾಳ ಮುನಿಯಪ್ಪ, ವರದೇನಹಳ್ಳಿವೆಂಕಟೇಶ್‌, ಖಾದ್ರಿಪುರ ಬಾಬು, ಹೂಹಳ್ಳಿ ನಾಗರಾಜ್‌, ಆಸೀಫ್‌, ಮುನಿ ಆಂಜಿನಪ್ಪ, ಕೆ.ಎಂ.ಸಂದೇಶ್‌, ಡಿ.ಎಸ್‌. ಎಸ್‌ ಮಂಜುಳಾ, ಕಾಮಧೇನಹಳ್ಳಿ ಶ್ರೀನಿವಾಸಯ್ಯ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next