Advertisement

ಭೂಮಾಪನ ಇಲಾಖೆ ವಿರುದ್ಧ ಆಕ್ರೋಶ

01:27 PM Jan 28, 2020 | Suhan S |

ಮೂಡಿಗೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಭೂಮಾಪನ ಇಲಾಖೆ ವಿರುದ್ಧ ಕನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ರೈತಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್‌. ದುಗ್ಗಪ್ಪಗೌಡ ಮಾತನಾಡಿ, ಪ್ರಸ್ತುತ ತಾಲೂಕು ಕಚೇರಿಯಲ್ಲಿರುವ ಭೂ ಮಾಪನ ಇಲಾಖೆ ಕಚೇರಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ತಾಲೂಕಿನ ರೈತರು ತಮ್ಮ ಜಮೀನಿನ ಸರ್ವೆಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಾದು ಕುಳಿತರೂ ಕೂಡ ಭೂ ಮಾಪನ ಇಲಾಖೆ ಅಧಿ ಕಾರಿಗಳು ಯಾವುದೇ ಕೆಲಸವನ್ನು ಕೈಗೆತ್ತಿಗೊಳ್ಳದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಸರ್ವೆ ಇಲಾಖೆಯಲ್ಲಿ ಲಂಚ ನೀಡದೇ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ. ಅಧಿ ಕಾರಿಗಳು ಹಾಗೂ ಸಿಬ್ಬಂದಿ ಇಂತಹ ನಡವಳಿಕೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೃಷಿ ಭೂಮಿಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗದೆ ಸಾಗುವಳಿ ಮಾಡಲು ಕಷ್ಟಪಡುವಂತಾಗಿದೆ. ಈ ವಿಚಾರದ ಬಗ್ಗೆ ಹಲವು ಬಾರಿ ಮೂಡಿಗೆರೆ ತಹಶೀಲ್ದಾರ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸುಧಾರಣೆ ಕಂಡು ಬಂದಿಲ್ಲ ಎಂದು ಆರೋಪಿಸಿದರು. ಭ್ರಷ್ಟಾಚಾರ, ಅಕ್ರಮ, ವಂಚನೆ, ಕಿರುಕುಳ ಇತರೆ ವಿಚಾರಗಳಿಗೆ ಸಂಬಂ ಧಿಸಿದಂತೆ ಸಾರ್ವಜನಿಕರು ಹಾಗೂ ಇಲಾಖಾವಾರು ಹೆಚ್ಚಿನ ಮಟ್ಟದಲ್ಲಿ ದೂರುಗಳು ಕೇಳಿಬರುತ್ತಿವೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಬರೆದ ಪತ್ರವನ್ನು ಸರ್ಕಾರದ ಕಂದಾಯ ಇಲಾಖೆ ಆಯುಕ್ತರಿಗೆ ತಹಶೀಲ್ದಾರ್‌ ಮೂಲಕ ಸಲ್ಲಿಲಾಯಿತು ಎಂದು ತಿಳಿಸಿದರು.

ರಾಜ್ಯ ರೈತಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್‌ ಅವರು ಮಾತನಾಡಿ, ಸರ್ವೆ ಇಲಾಖೆಯಲ್ಲಿ ಭೂ ಮಾಪಕರು ಹಾಗೂ ಕಚೇರಿ ಅ ಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಹಾಗೂ ಇಲಾಖಾವಾರು ಬಹಳ ದೂರುಗಳು ಕೇಳಿಬರುತ್ತಿವೆ. ಭೂ ಮಾಪಕರು ಜಮೀನುಗಳ ಅಳತೆ ಮತ್ತು ಕಚೇರಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಒಂದು ವೇಳೆ ಅಳತೆ ಕಾರ್ಯ ಮುಗಿಸಿದರೂ ಕೂಡ ಕಡತವನ್ನು ಮುಂದುವರೆಸಲು ಸತಾಯಿಸುತ್ತಿದ್ದಾರೆ ಎಂದರು.

ನೋಂದಣಿ ಪೂರ್ವ ವಿಭಾಗ ಪತ್ರ, ಶುದ್ಧ ಕ್ರಯ ಪತ್ರ ಹಾಗೂ ಹದ್ದು ಬಸ್ತ್, ಪಕ್ಕಾಪೋಡಿ ಕೋರಿ ಬರುವ ಅರ್ಜಿಗಳಲ್ಲಿ ಸಾವಿರಾರು ರೂ. ಲಂಚ ಪಡೆಯುತ್ತಿದ್ದಾರೆ. ಹಲವು ರೈತರು ಹಾಗೂ ಸಾರ್ವಜನಿಕರು ನೋವು ತೋಡಿಕೊಳ್ಳುತಿದ್ದಾರೆ. ಇಂತಹ ಹಲವು ವಿಚಾರಗಳನ್ನು ಒಳಗೊಂಡಂತೆ ಪ್ರತಿಭಟನೆ ನಡೆಸಲಾಯಿತು ಎಂದರು. ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಯು.ಡಿ ಅಣ್ಣೇಗೌಡ, ಸಂಚಾಲಕ ಸಂಜಯ ಜೈನ್‌ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next