Advertisement
“ಪುಣೆಯ ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸ್ಪರ್ಧೆಗಳು ನಡೆದವು. ರಾತ್ರಿ ಹೊತ್ತು ವಿದ್ಯುತ್ ಬೆಳಕಿನಲ್ಲಿ ಕೆಲವು ಸ್ಪರ್ಧಿಗಳಿಗೆ ಸರಿಯಾಗಿ ಗುರಿಯನ್ನು ಗುರುತಿಸಲು ಸಾಧ್ಯವೇ ಆಗಲಿಲ್ಲ. ನಮಗೆ ಊಟಕ್ಕೆ ಅವಕಾಶ ನೀಡಿದ್ದು ಕೇವಲ 30 ನಿಮಿಷ. ಅನಂತರ ಸತತವಾಗಿ ಸ್ಪರ್ಧೆ ನಡೆಸುತ್ತಲೇ ಹೋದರು. ಬಿಲ್ಗಾರಿಕೆ ಸಂಸ್ಥೆಯವರು ನಿಯಮ ಮೀರಿ ಹೀಗೆ ಅಂತಿಮ ಹಂತದಲ್ಲಿ ಸ್ಪರ್ಧೆ ನಡೆಸಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಬಿಲ್ಗಾರರೊಬ್ಬರು ಆರೋಪಿಸಿದ್ದಾರೆ.
ಬಿಲ್ಗಾರಿಕೆ ಸಂಸ್ಥೆ ನಡೆಸಿದ ಆಯ್ಕೆ ಕ್ರಮವನ್ನು ಸಂಸ್ಥೆಯ ಅಧಿಕಾರಿಯೊಬ್ಬರು ತಪ್ಪೆಂದು ಹೇಳಿದ್ದಾರೆ. ಈ ರೀತಿ ದಿನಕ್ಕೆ 15 ಪಂದ್ಯಗಳಲ್ಲಿ ಸ್ಪರ್ಧಿಸುವಂತೆ ಮಾಡುವುದು ತಪ್ಪು. ಈ ಹಿಂದೆ ದಿನಕ್ಕೆ 12 ಪಂದ್ಯ ನಡೆಸಿದ ಉದಾಹರಣೆಯಿದೆ. ಅದೂ ಬೆಳಗ್ಗೆ, ಸಂಜೆ ವೇಳೆ ಸಮಯ ವಿಂಗಡಿಸಿ ಸ್ಪರ್ಧೆ ನಡೆಸಲಾಗಿತ್ತು ಎಂದಿದ್ದಾರೆ. ಯಾಕೆ ಈ ಸ್ಪರ್ಧೆ?
ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ 8 ಸ್ಪರ್ಧಿಗಳನ್ನು ಆಯ್ಕೆ ಮಾಡಲು ಈ ಸ್ಪರ್ಧೆಯನ್ನು ನಡೆಸಲಾಗಿತ್ತು. ಇಲ್ಲಿ ಆಯ್ಕೆಯಾದ 8 ಮಂದಿ, ಉಳಿದ 12 ಮಂದಿ ಈ ತಿಂಗಳಲ್ಲಿ ನಡೆಯುವ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಆಯ್ಕೆಯಾದ 12 ಮಂದಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಆಡುತ್ತಾರೆ.