Advertisement

ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

09:23 AM Jul 19, 2019 | Suhan S |

ಚಿಕ್ಕೋಡಿ: ಗ್ರಾಮೀಣ ಪ್ರದೇಶದಲ್ಲಿ ದಿನದಯಾಳ್‌ ಉಪಾಧ್ಯೆ ವಿದ್ಯುತ್‌ ಸಂಪರ್ಕ ವಿಚಾರದಲ್ಲಿ ಹೆಸ್ಕಾ ಅಧಿಕಾರಿಗಳು ಫಲಾನುಭವಿಗಳಿಗೆ ಸಮರ್ಪಕ ವಿದ್ಯುತ್‌ ತಲುಪಿಸುತ್ತಿಲ್ಲ ಹಾಗೂ ಯಾವುದೇ ಸಭೆಗೆ ಹಾಜರಾಗುತ್ತಿಲ್ಲ ಎಂದು ದಲಿತ ಸಮುದಾಯದ ಮುಖಂಡ ಅನೀಲ ಕುರಣೆ ಅಕ್ರೋಶ ವ್ಯಕ್ತಪಡಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕಾಡಳಿತ,ತಾಪಂ ಹಾಗೂ ಸಮಾಜ ಇಲಾಖೆ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಕುಂದು-ಕೊರತೆಗಳ ನಿವಾರಣೆಗಾಗಿ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿ, ಪ.ಜಾತಿ ಮತ್ತು ಪ. ವರ್ಗದ ಜನರಿಗಾಗಿ ಸರ್ಕಾರ ಚಿಕ್ಕೋಡಿ ಪಟ್ಟಣದ ಹಾಲಟ್ಟಿಯಲ್ಲಿ ಸ್ಮಶಾನಭೂಮಿ ಜಾಗೆ ನೀಡಿದೆ. ಪುರಸಭೆಗೆ ಆವರಣ ಗೋಡೆ ನಿರ್ಮಿಸುವುದು, ರಸ್ತೆ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯಗಳನ್ನು ಹಲವು ಭಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ನಂತರ ಪುರಸಭೆ ಮುಖ್ಯಾಧಿಕಾರಿ ಡಾ| ಸುಂದರ ರೂಗಿ ಮಾತನಾಡಿ, ಸ್ಮಶಾನ ಭೂಮಿಗೆ ಮೂಲಭೂತ ಸೌಲಭ್ಯವನ್ನು ಮುಂದಿನ ಸಭೆ ನಡೆಯುವ ಮುನ್ನ ಮಾಡಿಕೊಡಲಾಗುವುದು ಎಂದರು.

ದಲಿತ ಮುಖಂಡ ರಾವಸಾಹೇಬ ಫಕೀರೆ ಹಾಗೂ ನ್ಯಾಯವಾದಿ ಸುದರ್ಶನ ತಮ್ಮಣ್ಣವರ ಮಾತನಾಡಿ, ಚಿಕ್ಕೋಡಿ ಪಟ್ಟಣ ಸೇರಿದಂತೆ 16 ಜನರಿಗೆ ಬೇಡಜಂಗಮ ಪ್ರಮಾಣ ಪತ್ರವನ್ನು ತಹಶೀಲ್ದಾರ ಕಚೇರಿಯಿಂದ ನೀಡಲಾಗಿದೆ.ಅವುಗಳನ್ನು ರದ್ದುಪಡಿಸುವ ಜೊತೆಗೆ ಪ್ರಮಾಣಪತ್ರವನ್ನು ತಹಶೀಲ್ದಾರರು ನಿಷ್ಕ್ರಿಯಗೊಳಿಸಬೇಕು. ಅಲ್ಲದೇ ಸುಳ್ಳು ಪ್ರಮಾಣ ಪತ್ರ ನೀಡಿರುವ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕೆಂದು ತಹಶೀಲ್ದಾರರನ್ನು ಒತ್ತಾಯಿಸಿದರು.

ತಹಶೀಲ್ದಾರ್‌ ಸಂತೋಷ ಬಿರಾದಾರ ಉತ್ತರಿಸಿ ಇದು ನಾನು ಅಧಿಕಾರ ವಹಿಸಿಕೊಳ್ಳುವ ಪೂರ್ವದಲ್ಲಿ ನಡೆದಿರುವ ಘಟನೆ ಈ ಕುರಿತು ಹಲವು ದೂರುಗಳು ಬಂದಿದ್ದು, ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಮಜಾಯಿಸಿದರು.

Advertisement

ದಲಿತ ಸಮುದಾಯದ ಮುಖಂಡ ಶೇಖರ ಪ್ರಭಾತ ಮಾತನಾಡಿ, ಬೋರಗಾಂವದಲ್ಲಿ ನಿರ್ಮಾಣವಾಗುತ್ತಿರುವ ಟೇಕ್ಸ್‌ಟೈಲ್ ಪಾರ್ಕ್‌ನಲ್ಲಿ ಔದ್ಯೋಗಿಕ ಎಸ್‌ಸಿ-ಎಸ್‌ಟಿ ಜನರಿಗಾಗಿ ಶೇ. 22ರಷ್ಟು ಜಾಗೆ ನಿಗದಿರಸಬೇಕೆಂದು ನಿಯಮವಿದ್ಯರೂ ಎಸ್‌ಸಿ-ಎಸ್‌ಟಿ ಜನರ ಪ್ರಮಾಣ ಪತ್ರ ಬಳಿಸಿ ಮಹಾರಾಷ್ಟ್ರದ ಉದ್ಯೋಗಿಗಳು ಜಾಗೆಯ ಲಾಭ ಪಡೆಯುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಯೋಗ್ಯ ಫಲಾನುಭವಿಗಳಿಗೆ ಲಭ್ಯವಾಗುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಸರ್ವೇ, ಕೆಎಸ್‌ಆರ್‌ಟಿಸಿ, ನೀರಾವರಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಎಸ್‌ಸಿ-ಎಸ್‌ಟಿ ಜನರಿಗಾಗಿ ಇರುವ ಸೌಲಭ್ಯಗಳ ಪ್ರಗತಿ ಪರಿಶೀಲನೆಯನ್ನು ಒಪ್ಪಿಸಿದರು.

ತಹಶೀಲ್ದಾರ ಡಾ| ಸಂತೋಷ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಸವರಾಜ ಮುಕರ್ತಿಹಾಳ, ತಾ.ಪಂ ಇಒ ಎಸ್‌.ಕೆ. ಪಾಟೀಲ, ಬಿಇಒ ಬಿ.ಎ. ಮೇಕನಮರಡಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next