Advertisement
ನಗರದ ರೆಡ್‌ಕ್ರಾಸ್ ಸಭಾಂಗಣದಲ್ಲಿ ಶನಿವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಜಾಗೃತಿ ವೇದಿಕೆ ವತಿಯಿಂದ ನಡೆದ ಶೋಷಿತ ಸಮುದಾಯಗಳ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಜಾಗೃತಿ ಅಭಿಯಾನ ನಡೆಯಲಿ: ಚಿಂತಕ ಪ್ರೊ.ಹಲ್ಕೆರೆ ಮಹದೇವು ಮಾತನಾಡಿ, ಹಿಂದುಳಿದವರು, ಮಹಿಳೆಯರು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳ ಪರವಾಗಿ ದಲಿತ ಚಳವಳಿ ನಡೆದುಕೊಂಡು ಬಂದಿದೆ. ಜಾತ್ಯತೀತ ರಾಜಕಾರಣ ಹಾಳಾದರೆ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಅನ್ಯಾಯವಾಗುವುದಿಲ್ಲ. ಬದಲಾಗಿ ಶೋಷಿತ ಸಮುದಾಯಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಜಾತ್ಯತೀತ ರಾಜಕಾರಣ ಉಳಿಸಿಕೊಳ್ಳುವ ಜಾಗೃತಿ ಅಭಿಯಾನ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ನಾಗರಾಜು, ಮಾಜಿ ಮೇಯರ್ ವೆಂಕಟೇಶಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ಸುರೇಶ್ ಕಂಠಿ, ಮಾಜಿ ಸದಸ್ಯ ಪಿ.ಎಲ್.ದೇವರಾಜು, ನಾಗೇಂದ್ರ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ವಿವಿಧ ಸಮು ದಾಯದ ಮುಖಂಡರಾದ ಸಾತನೂರು ಕೃಷ್ಣ, ಗುರುರಾಜ್, ರಾಜಣ್ಣ, ಡಿ.ರಮೇಶ್, ಮಂಚಶೆಟ್ಟಿ, ಸಿದ್ದಶೆಟ್ಟಿ, ಎಂ.ಎಸ್.ರಾಜಣ್ಣ, ಪ್ರತಾಪ, ರವಿಕುಮಾರ್, ನಾಗರತ್ನ, ದೊಡ್ಡ ಯ್ಯ, ಅಮ್ಜದ್‌ಪಾಷಾ, ಮುಜಾಹಿದ್, ಬೆನ ಲ್ ಚಾರ್ಲ್ಸ್ ಮತ್ತಿತರರು ಉಪಸ್ಥಿತರಿದ್ದರು. ತಳ ಸಮುದಾಯದ ಹಕ್ಕು ಕಸಿಯಲು ಯತ್ನ : ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾರಿಗಾಗಿ ವಿವಿಧ ಯೋಜನೆ ಜಾರಿಗೊಳಿಸಲಾಗಿತ್ತು. ನಿಗಮಗಳಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಈಗಿನ ಸರ್ಕಾರ ಅಹಿಂದ ವರ್ಗಕ್ಕೆ ಸೇರಿದ ನಿಗಮಗಳನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಿದೆ. ಮೀಸಲಾತಿ ವಿಚಾರದಲ್ಲೂ ಬಲಾಡ್ಯರಿಗೆ ಅವಕಾಶ ಕಲ್ಪಿಸುವ ಮೂಲಕ ತಳ ಸಮುದಾಯಗಳ ಹಕ್ಕು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ವಿಷಾದಿಸಿದರು.