Advertisement

ಕಾರ್ತಿ ಆಸ್ತಿ ಮುಟ್ಟುಗೋಲು

06:00 AM Oct 12, 2018 | Team Udayavani |

ನವದೆಹಲಿ: ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆಯ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸೇರಿದ 54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಯು.ಕೆ., ಸ್ಪೈನ್‌ ಮತ್ತು ಭಾರತದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ತಮಿಳುನಾಡಿನ ಕೊಡೈಕೆನಾಲ್‌ ಮತ್ತು ಊಟಿಯಲ್ಲಿರುವ ಕೃಷಿ ಭೂಮಿ ಮತ್ತು ಬಂಗಲೆ, ದಕ್ಷಿಣ ದೆಹಲಿಯ ಜೋರ್‌ಭಾಗ್‌ನಲ್ಲಿರುವ 16 ಕೋಟಿ ರೂ. ಮೌಲ್ಯದ ಅಪಾರ್ಟ್‌ ಮೆಂಟ್‌, ಯು.ಕೆ.ಯಲ್ಲಿರುವ 8.67 ಕೋಟಿ ರೂ. ಮೌಲ್ಯದ ಕಾಟೇಜ್‌, ಸ್ಪೇನ್‌ನ ಬಾರ್ಸೆಲೋನಾದಲ್ಲಿ 14.57 ಕೋಟಿ ರೂ. ಮೌಲ್ಯದ ಟೆನಿಸ್‌ ಕ್ಲಬ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next