ಮಂಗಳೂರು: ಕಳೆದ ಹನ್ನೊಂದು ತಿಂಗಳ ಕಾಲ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಹರ್ಷ ಅವರು ಸದ್ಯ ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇದುವರೆಗೆ ಸಹಕಾರ ನೀಡಿದ ಮಂಗಳೂರಿನ ಜನತೆಗೆ ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
“ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ್ ಇತ್ತೆ ವರ್ಗಾವಣೆ ಅವೋಂದುಂಡು. ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್ ದಿಂಜಿನ ಸೊಲ್ಮೆಲು” (ಮಂಗಳೂರಿನ ಎಲ್ಲಾ ಪ್ರೀತಿಯ ಬಂಧುಗಳೇ, ಹನ್ನೊಂದು ತಿಂಗಳಿನಿಂದ ಮಂಗಳೂರಿನ ಪೊಲೀಸ್ ಆಯುಕ್ತನಾಗಿ ಸೇವೆ ನಡೆಸಿದ ನನಗೆ ಈಗ ವರ್ಗಾವಣೆ ಆಗಿದೆ. ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಪ್ರಾಮಾಣಿಕ ಮತ್ತು ಜನಪರವಾಗಿ ನನ್ನ ಕರ್ತವ್ಯ ಮಾಡಿಕೊಂಡು ಬಂದಿದ್ದೇನೆ. ನನಗೆ ಸಹಕಾರ, ಬೆಂಬಲ ಕೊಟ್ಟ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು) ಎಂದು ಟ್ವೀಟ್ ಮಾಡಿದ್ದಾರೆ.
ಮಂಗಳೂರು ಕಮಿಷನರ್ ಹರ್ಷ ಸೇರಿದಂತೆ 13 ಮಂದಿ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಕಳೆದ ಶುಕ್ರವಾರ ವರ್ಗಾವಣೆ ಮಾಡಿ ಆದೇಶಿಸಿತ್ತು. ಅದರಂತೆ ಹರ್ಷ ಅವರು ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗವಾಗಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಆಗಿ ವಿಕಾಸ್ ಕುಮಾರ್ ನೇಮಕವಾಗಿದ್ದಾರೆ.