Advertisement

ಮಂಜೂರಾದ 27 ಹುದ್ದೆಗಳಲ್ಲಿ 6 ಮಂದಿ ಮಾತ್ರ ಕಾರ್ಯನಿರ್ವಹಣೆ

09:38 PM Jan 22, 2020 | mahesh |

ಬಂಟ್ವಾಳ: ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ಆದರೆ ಅದನ್ನು ಅನುಷ್ಠಾನಗೊಳಿಸುವ ಇಲಾಖೆಯಲ್ಲಿ ಸಿಬಂದಿ ಕೊರತೆ ಕಾಡುತ್ತಿದೆ. ಬಂಟ್ವಾಳ ತಾ| ಕೃಷಿ ಇಲಾಖೆಗೆ ಮಂಜೂರಾಗಿರುವ 27 ಹುದ್ದೆಗಳಲ್ಲಿ 6 ಮಂದಿ ಮಾತ್ರ ಕಾರ್ಯ ನಿರ್ವಹಿಸು ತ್ತಿದ್ದು, ಶೇ. 77.77ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ ಇವೆ.

Advertisement

ಈ ರೀತಿಯಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಖಾಲಿಯಾಗಿರುವುದೇ ಹೆಚ್ಚಿದ್ದಾಗ ಇರುವ ಸಿಬಂದಿಯೂ ಒತ್ತಡದಲ್ಲೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗುತ್ತದೆ. ಕಾರ್ಯನಿರ್ವ ಹಿಸುವವರೇ 2- 3 ಹುದ್ದೆಗಳನ್ನು ನಿರ್ವಹಿಸಬೇಕಾ ಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಕೆಲಸವೂ ಸಾಗುವುದಿಲ್ಲ.

ತಾಲೂಕಿನ ಬಿ.ಸಿ. ರೋಡ್‌ನ‌ಲ್ಲಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಜತೆಗೆ ಮೂರು ರೈತ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಂಟ್ವಾಳ ಕಸ್ಬಾ ಸಂಪರ್ಕ ಕೇಂದ್ರವು ಸಹಾಯಕ ನಿರ್ದೇಶಕರ ಕಚೇರಿಯ ವಠಾರದಲ್ಲಿದ್ದರೆ, ಪಾಣೆಮಂಗಳೂರು ಹಾಗೂ ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರ ಗಳು ಕಾರ್ಯಾಚರಿಸುತ್ತಿವೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ ಒಬ್ಬರು ಕೃಷಿ ಅಧಿಕಾರಿ, 4 ಮಂದಿ ಸಹಾಯಕ ಕೃಷಿ ಅಧಿಕಾರಿ ಕರ್ತವ್ಯ ನಿರ್ವ ಹಿಸಬೇಕಿದ್ದು, ಆದರೆ ಇಲ್ಲಿ ಸಾಧ್ಯವಾಗಿಲ್ಲ. ರೈತರ ಬಳಿಗೆ ತೆರಳಿ ಫೀಲ್ಡ್‌ನಲ್ಲೇ ಕಾರ್ಯ ನಿರ್ವಹಿಸ ಬೇಕಾದ ಕಾರಣ ಸಿಬಂದಿ ಕೊರತೆ ಹೆಚ್ಚಿನ ತೊಂದರೆ ನೀಡುತ್ತದೆ ಎಂದು ಇಲಾಖೆ ಮೂಲ ಹೇಳುತ್ತದೆ.

ಹೊರಗುತ್ತಿಗೆ ಸಿಬಂದಿ
ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಒತ್ತಡ ನಿಭಾಯಿಸಲು, ಇಲಾಖೆಯ ಕಾರ್ಯ ಸರಾಗ ವಾಗುವ ನಿಟ್ಟಿನಲ್ಲಿ ಹೊರಗುತ್ತಿಗೆಯ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ ಒಬ್ಬೊಬ್ಬರು ಲೆಕ್ಕಿಗರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಒಟ್ಟು 4 ಮಂದಿ ಹೊರಗುತ್ತಿಗೆಯ ಸಿಬಂದಿ ಇದ್ದಾರೆ.

Advertisement

ಮುಖ್ಯಸ್ಥರ ಹುದ್ದೆಯೇ ಖಾಲಿ !
ತಾಲೂಕಿನ ಕೃಷಿ ಇಲಾಖೆಯ ಮುಖ್ಯಸ್ಥರಾಗಿರುವ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯೇ ಖಾಲಿ ಇದೆ. 2018ರ ಎಪ್ರಿಲ್‌ನಿಂದ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯನ್ನು ಬಂಟ್ವಾಳ ಕಸ್ಬಾದ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಅವರು ನಿಭಾಯಿಸುತ್ತಿದ್ದಾರೆ. ಇದರ ಜತೆಗೆ ತಾಂತ್ರಿಕ ಅಧಿಕಾರಿ ಸಹಿತ ಅವರು ಮೂರು ಹುದ್ದೆಗಳನ್ನು ನಿಭಾಯಿಸಬೇಕಾದ ಸ್ಥಿತಿ ಇದೆ !

ಭರ್ತಿ-ಖಾಲಿ ವಿವರ
ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಒಂದು ಹುದ್ದೆ ಖಾಲಿಯಿದ್ದು, ಕೃಷಿ ಅಧಿಕಾರಿ 5 ಹುದ್ದೆಗಳಲ್ಲಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಾಯಕ ಕೃಷಿ ಅಧಿಕಾರಿಯ 12 ಹುದ್ದೆಗಳಲ್ಲಿ ಮೂರು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ ಅಧೀಕ್ಷಕರು, ಪ್ರಥಮದರ್ಜೆ ಸಹಾಯಕರು, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರ ತಲಾ ಒಂದೊಂದು ಹುದ್ದೆಗಳಿದ್ದು, ಎಲ್ಲವೂ ಖಾಲಿ ಇವೆ.

ದ್ವಿತೀಯ ದರ್ಜೆ ಸಹಾಯಕರ ಮಂಜೂರಾದ ಎರಡೂ ಹುದ್ದೆಗಳೂ ಖಾಲಿ ಇವೆ. ಡಿ ದರ್ಜೆ ನೌಕರರ 3 ಹುದ್ದೆಗಳಲ್ಲಿ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಒಟ್ಟು ಮಂಜೂರಾದ 27 ಹುದ್ದೆಗಳ ಪೈಕಿ 6 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 21 ಹುದ್ದೆಗಳು ಖಾಲಿ ಇವೆ.

 2-3 ಹುದ್ದೆಗಳ ನಿರ್ವಹಣೆ
ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿಯಿದ್ದು, ಇರುವವರು 2-3 ಹುದ್ದೆಗಳನ್ನು ನಿಭಾಯಿಸುತ್ತಿದ್ದೇವೆ. ನನ್ನ ಖಾಯಂ ಹುದ್ದೆ ಕೃಷಿ ಅಧಿಕಾರಿಯಾಗಿದ್ದು, ಪ್ರಸ್ತುತ ಪ್ರಭಾರ ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯನ್ನು ನಿಭಾಯಿ ಸುತ್ತಿದ್ದೇನೆ. ಉಳಿದಂತೆ ಕೆಲವೊಂದು ಹುದ್ದೆಗಳಿಗೆ ಹೊರಗುತ್ತಿಗೆಯ ಆಧಾರದಲ್ಲಿ ಸಿಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
 - ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಬಂಟ್ವಾಳ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next