Advertisement

ಇನ್ಫೋಸಿಸ್‌ನಿಂದ 9 ಸಾವಿರ ನೌಕರರು ಹೊರಕ್ಕೆ

03:45 AM Jan 21, 2017 | Team Udayavani |

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ  8-9 ಸಾವಿರ ಉದ್ಯೋಗಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಸಂಸ್ಥೆಯಲ್ಲಿ ತೀರಾ ಕೆಳಹಂತದ ಉದ್ಯೋಗಗಳನ್ನು ಯಾಂತ್ರೀಕರಣಗೊಳಿಸಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್‌ ಹೇಳಿದ್ದಾರೆ.

Advertisement

ಕಂಪನಿಯಿಂದ ಹೊರ ಹೋಗಿರುವ ಉದ್ಯೋಗಿಗಳು ಸದ್ಯ ಉತ್ತಮ ಕೆಲಸದಲ್ಲಿದ್ದಾರೆ. ಪ್ರತಿ  ತ್ತೈಮಾಸಿಕಕ್ಕೆ 2 ಸಾವಿರ ಮಂದಿಯಂತೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ತರಬೇತಿಯನ್ನೂ ಕೊಡಲಾಗಿದೆ. ಇದರಿಂದ ಅವರಿಗೆ ಉನ್ನತ ಉದ್ಯೋಗದ ಆಫ‌ರ್‌ಗಳು ಸಿಕ್ಕಿವೆ ಎಂದು ಶಂಕರ್‌ ಸಮಾರಂಭವೊಂದರ ಪಾರ್ಶ್ವದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.

ತೀರಾ ಕೆಳಹಂತದ ಉದ್ಯೋಗಗಳನ್ನು ಸಂಪೂರ್ಣವಾಗಿ ಯಾಂತ್ರೀಕರಣಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದರ ಪ್ರಮಾಣ ಹೆಚ್ಚಲಿದೆ ಎಂದು ಈ ಮಾಹಿತಿ ನೀಡಿದರು. ಹೀಗಾಗಿ ಕೆಳ ಹಂತದ ಉದ್ಯೋಗಗಳಿಗೆ ನೇಮಕ ಪ್ರಕ್ರಿಯೆಯೂ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ ಎಂಬ ಅಂಶದ ಬಗ್ಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next