Advertisement

ನಮ್ದು ಹೊಟ್ಟೆ ಪಕ್ಸ…

11:51 AM Apr 08, 2019 | Team Udayavani |

ಸೌತ್‌ ಕೆನರಾದವ್ರು ಅಂದರೆ ಕೇಳಬೇಕೆ? ಸೌತ್‌ಕೆನರಾನೇ ಅಡುಗೆಗಳ ಹಬ್‌. ಹೀಗಾಗಿ, ನಮ್ಮನೆ ಹಬ್ಬದ ಅಡುಗೆ ಬಗ್ಗೆ ಹೇಳಬೇಕು ಅಂದರೆ ಎಂಟು ಎಪಿಸೋಡು ಬೇಕು. ಅಷ್ಟೊಂದು ಅಡುಗೆ. ಅನ್ನ ಸಾರು, ಅನ್ನ ಹುಳಿ, 6 ಥರ ಪಲ್ಯ, ಎರಡು ಥರ ಉಪ್ಪಿನಕಾಯಿ, ತುಂಬಾ ಸ್ವೀಟೀಷ್‌ ಅಲ್ಲದ ಸಿಹಿಗಳು, ಆಂಬೊಡೆ ಪಾಯಸ… ಏನು ಕೇಳ್ತೀರ? ಹಬ್ಬ ಅಂದ್ರೆ ಬರೀ ತಿನ್ನೋದೇ ಕೆಲಸ…

Advertisement

ಬಾಯ್ತುಂಬ ಮಾತು
ಹೊಟ್ಟೆ ತುಂಬಾ ಊಟ
ಕಣ್ತುಂಬಾ ಖುಷಿ
ಹಬ್ಬ ಅಂದ್ರೆ ಇಷ್ಟೇನೇ…

ಆಗೆಲ್ಲ ನಮ್ಗೆ ಹಬ್ಬಗಳು ಗೊತ್ತಾಗ್ತಾನೇ ಇರಲಿಲ್ಲ. ಇವತ್ತು ಏನ್ಹಬ್ಬ ಅಂತ ಯಾರಾದ್ರೂ ಕೇಳಿಬಿಟ್ಟರೆ ತಳಬುಡ ತಿಳೀತಿರಲಿಲ್ಲ. ಚಂದ್ರಮಾನ, ಸೌರಮಾನ ಯುಗಾದಿ ಅಂತೆಲ್ಲ ಆಚರಣೆ ಮಾಡೋರು. ಧಾರವಾಡ ಸೀಮೇಲಿ ಏನಾಗೋದು ಅಂದ್ರೆ, ಈ ಹುಟ್ಟಿದ ಹಬ್ಬ ಅಂತೆಲ್ಲ ಆಚರಿಸಿಕೊಳ್ತಿರಲಿಲ್ಲ. ತಾಯಿಗೆ ನೆನಪಾದಾಗ ಹೇಳ್ಳೋಳು, ಎಣ್ಣೆ ನೀರು ಹಾಕೋಳು ಅಷ್ಟೇ. ನಮ್ಮ ಅಣ್ಣತಮ್ಮಂದಿರಿಗೂ ಅವ್ರು ಯಾವಾಗ ಹುಟ್ಟಿದ್ದು ಅನ್ನೋದೆಲ್ಲ ಗೊತ್ತೇ ಇರಲಿಲ್ಲ. ಹೀಗಾಗಿ, ಹಬ್ಬ ಅಂದ್ರೆ ರಜ, ತಿನ್ನೋದು, ತಿರುಗೋದು ಅಷ್ಟೇ ನನ್ನ ಕಲ್ಪನೇಲಿ ಇದ್ದಿದ್ದು.

ಯುಗಾದಿ ಹಬ್ಬದಂದು ಎಣ್ಣೆ ನೀರು ಮ್ಯಾಂಡೇಟರಿ. ಸ್ನಾನ ಇಲ್ಲದೆ ಎಲ್ಲೂ ತಲೆ ಹಾಕಂಗೇ ಇರಲಿಲ್ಲ. ಅಮ್ಮ ಎಲ್ಲರನ್ನೂ ಕೂಡ್ರಿಸಿ, ಹಣೆಗೆ ಕುಂಕುಮ ಇಟ್ಟು, ಗರಿಕೇಲಿ ಎಣ್ಣೆ ಶಾಸ್ತ್ರ ಮಾಡಿದಾಗಲೇ, ಮೈಯಲ್ಲಿ ಎಷ್ಟು ಗಾಯಗಳು ಆಗಿವೆ ಅಂತ ಕ್ಲೀನಾಗಿ ಲೆಕ್ಕಸಿಗ್ತಾ ಇದ್ದದ್ದು. ಆಮೇಲೆ ಅಡುಗೆ ಮನೆಯಿಂದ ಹೋಳಿಗೆ ಗೀಳಿಗೆ ಥರದವು ಘಮ್‌ ಅಂದರೆ ಹಬ್ಬ ಅನ್ನೋದು ನಿಕ್ಕಿ ಆಗೋದು. ನಮಗೆಲ್ಲ ತಿನ್ನೋದರ ಮೇಲೇನೇ ಫೋಕಸ್ಸು ಜಾಸ್ತಿ.

ಸೌತ್‌ ಕೆನರಾದವ್ರು ಅಂದರೆ ಕೇ
ಳಬೇಕೆ? ಸೌತ್‌ಕೆನರಾನೇ ಅಡುಗೆಗಳ ಹಬ್‌. ಹೀಗಾಗಿ, ನಮ್ಮನೆ ಹಬ್ಬದ ಅಡುಗೆ ಬಗ್ಗೆ ಹೇಳಬೇಕು ಅಂದರೆ ಎಂಟು ಎಪಿಸೋಡು ಬೇಕು. ಅಷ್ಟೊಂದು ಅಡುಗೆ. ಅನ್ನ ಸಾರು, ಅನ್ನ ಹುಳಿ, 6 ಥರ ಪಲ್ಯ, ಎರಡು ಥರ ಉಪ್ಪಿನಕಾಯಿ, ತುಂಬಾ ಸ್ವೀಟೀಷ್‌ ಅಲ್ಲದ ಸಿಹಿಗಳು, ಆಂಬೊಡೆ ಪಾಯಸ… ಏನು ಕೇಳ್ತೀರ? ಹಬ್ಬ ಅಂದ್ರೆ ಬರೀ ತಿನ್ನೋದೇ ಕೆಲಸ. ಈ ಸೌತ್‌ಕೆನರಾ ಇಂಪ್ಯಾಕ್ಟ್ ಹೇಗಾಗಿದೆ ಅಂದರೆ, ಈಗಲೂ ನನಗೆ ಏನಾದರೂ ತಿನ್ನೋ ಮೊದಲು ಅದಕ್ಕೆ ಏನು ಹಾಕಿದ್ದಾರೆ, ಹೇಗೆ ಮಾಡಿದ್ದಾರೆ ಅಂತ ತಿಳಿಯದೇ ತಿನ್ನಕ್ಕೆ ಬರೋಲ್ಲ.

Advertisement

ಹಬ್ಬದ ದಿನ ನಮ್ಮ ಹೋಟ್ಲು ಪೂಜೆ ಇರೋದು. ಇದಕ್ಕೆ ಹಿಂದಿನ ದಿನಾನೇ ಇಡೀ ಹೋಟೆಲ್‌ ತೊಳೆದು, ಜಿರಲೆ ಪರಲೆ ಬರದಂಗೆ ಮಾತ್ರೆಗಳನ್ನು ಹಾಕ್ತಿದ್ವಿ. ಹಬ್ಬಕ್ಕೆ ಕೆಲಸಗಾರರಿಗೆ ರಜೆ. ನಮ್ಮ ಥರಾನೇ ಊರಲೆಲ್ಲ ಅಂಗಡಿಗಳಿಗೆ ಒಂದು ದಿವ್ಯಪೂಜೆ ಮಾಡೋರು.

ನಮ್ಮಪ್ಪ ಯಾವಾಗ್ಲೂ ಹೇಳ್ಳೋರು: “ಹಬ್ಬ ಅನ್ನೋದು ಸಂಬಂಧಗಳ ನವೀಕರಿಸಲು ಇರೋ ನೆಪ ಅಂತ. ಅದಕ್ಕೇ ಇರಬೇಕು ಹಬ್ಬದ ದಿನ ನಮ್ಮನೆ ತುಂಬ ಸಮಾರಾಧನೆ ನಡೆಯೋದು. ಯಾರ್ಯಾರೋ ಬಂದ್‌ಬಂದ್‌ ಊಟ ಮಾಡೋರು. ಹೊಸ ಗಂಡ ಹೆಂಡತಿಗೂ ಊಟ ಬಡಿಸೋರು. ಹೀಗೆ ತುಂಬ ಜನ ಕರೆಸಿ ಊಟ ಹಾಕ್ತಾನೇ ಇರೋರು. ಈ ನೆಪದಲ್ಲೂ ನಮಗೆ ತಿನ್ನೋದೇ ಕೆಲ್ಸ.

ಹಬ್ಬಕ್ಕೆ ಹೊಸ ಬಟ್ಟೆಗಿಟ್ಟೆ ಬೇಕು ಅನ್ನೋ ವ್ಯಾಮೋಹ ಏನೂ ಇರಲಿಲ್ಲ. ದುಡೀಬೇಕು, ತಗೋಬೇಕು ಅನ್ನೋ ಸ್ಥಿತಿ ನಮುª. ಜಾಯಿಂಟ್‌ ಫ್ಯಾಮಿಲಿ ನಮುª. ಎಲ್ಲರೂ ಸೇರಿ ಹೋಟೆಲ್‌ನಲ್ಲಿ ದುಡೀತಿದ್ವಿ. ಬೆಳಗ್ಗೆ ಕಾಲೇಜು, ತಲೆ ಮೇಲೆ ತಲೆ ಬಿದ್ದರೂ ಸಂಜೆ 4.30ಕ್ಕೆ ವಾಲಿಬಾಲ್‌ ಆಡೋಕೆ ಹೋಗ್ತಿದ್ದೆ. ಆಗೆಲ್ಲಾ ಹೋಟೆಲ್‌ನಲ್ಲಿ ನನ್ನ ರಿಲೀವ್‌ ಮಾಡೋಕೆ ಅಣ್ಣ ಬರೋನು. ನಮ್ಮ ಸ್ಕೂಲ್‌ ಡ್ರೆಸ್‌ ಬಹಳ ಗಟ್ಟಿ ಇತ್ತು ಹೀಗಾಗಿ, ಬಟ್ಟೆ ಬೇಕೇಬೇಕು ಅಂತೇನೂ ಇರಲಿಲ್ಲ. ಬಟ್ಟೆ ಹರಿದೋಯ್ತು ಅಂದರೆ 20-30ರೂ. ಇಸಿದುಕೊಂಡು ದಾವಣಗೆರೆಗೋ, ಹುಬ್ಬಳಿಗೋ ಹೋಗಿ ಬಟ್ಟೆ ತಂದು ಬಿಡೋವು. ಹೋಗುವಾಗ ಜೊತೆಗೆ ಅಕ್ಕನೋ, ತಂಗೀನೋ ಬಂದರೆ ಇನ್ನೊಂದಷ್ಟು ದುಡ್ಡು ಕೂಡಿಸಿಕೊಂಡು ಒಟ್ಟು 100 ರೂ.ಗೆ ಬಟ್ಟೆ ತಂದು ಬಿಡ್ತಿದ್ವಿ. ದೊಡ್ಡೋರ ಬಟ್ಟೇನ ಚಿಕ್ಕೋರು ಹಾಕ್ಕೊಳ್ಳೋದು ಇರುತ್ತಲ್ಲಾ ಅವೆಲ್ಲ ನಡೀತಾ ಇತ್ತು.

ಹೊಟ್ಟೆ ಬಟ್ಟೆ ವಿಚಾರಕ್ಕೆ ಬಂದಾಗ ಎಷ್ಟೋ ಜನ ಹೇಳ್ತಾ ಇರ್ತಾರೆ- “ನಾವು ಬಡತನದಿಂದ ಬಂದ್ವಿ, ನಮ್ಮ ಅಮ್ಮನಿಗೆ ಉಡೋಕೆ ಸೀರೆ ಇರಲಿಲ್ಲ. ಅಪ್ಪ ನನಗೆ ಚಪ್ಪಲಿ ಕೊಡಿಸಲಿಲ್ಲ’ ಅಂತೆಲ್ಲಾ.. ಇದನ್ನೆಲ್ಲ ಕೇಳಾªಗ… “ಅರರೆ, ನಮ್ಮ ತಂದೆ, ತಾಯಿ ನಮಗೆ ಹೊಟ್ಟೆ ಬಟ್ಟೆಗೆಲ್ಲ ಹಾಕಿದ್ರಲ್ಲಾ, ಹಾಗಂತ, ನಾವೇನು ಕಷ್ಟಾನೇ ಪಡಲಿಲ್ವ ಅಂತ ಗೊಂದಲ ಆಗಿಬಿಡ್ತದೆ. ಪ್ರತಿಯೊಬ್ಬನ ಬದುಕಲ್ಲೂ ಕಷ್ಟ ಬರ್ತದೆ. ಅದನ್ನೇ ಅಂಡರ್‌ಲೈನ್‌ ಮಾಡ್ತಾ ಬದುಕಬಾರದು ಅನ್ನೋದು ನನ್ನ ತತ್ವ.

ಬೇಸಿಕಲಿ, ಹಬ್ಬ ಹರಿದಿನಗಳೆಲ್ಲ ಪ್ರಕೃತಿ ಓರಿಯಂಟೆಡ್‌. ಫ‌ಸಲು, ಸುಗ್ಗಿಗೂ ಸಂಬಂಧ ಇರ್ತದೆ. ಮಳೆಗಾಲದಲ್ಲಿ ಕೃಷಿ ಜಾಸ್ತಿ, ದುಡ್ಡು ಓಡಾಡುವುದರಿಂದ ಮದುವೆ, ಮುಂಜಿಗಳು ಶುರುವಾದವು. ಒಂದೂವರೆ ಎರಡು ತಿಂಗಳ ಗ್ಯಾಪಲ್ಲಿ ಒಂದಿಷ್ಟು ಹಬ್ಬಗಳು ಅಂತ ಮಾಡಿಕೊಂಡರು. ತಿಥಿವಾರ, ದೇವರು ದಿಂಡ್ರು ಆಮೇಲೆ ಸೇರಿಕೊಂಡವು. ದೀಪಾವಳಿಗೆ ಬಲೀಂದ್ರ, ದಸರಾಕ್ಕೆ ರಾವಣಾಸುರನ ಕತೆಗಳು ಸೇರುತ್ತಾ ಹೋಗಿ ಹಬ್ಬಕ್ಕೆ ದೈವಿಕ ಮಹತ್ವ ಬಂದು ಬಿಟ್ಟಿದೆ.

ಹಬ್ಬ ಅಂದ್ರೆ ರಜಾನೇ ಕಣ್ಮುಂದೆ ಬರೋದು. ಈಗಲೂ ಅದೇ ಅಲ್ವಾ? ಸಿನಿಮಾ ಗೆದ್ದಾಗ ನಾವು, ನೀವೆಲ್ಲ ಸೇರ್ತೀವಿ. ಒಳ್ಳೆ ಊಟ ಮಾಡ್ತೀವಿ, ಬಾಯ್ತುಂಬ ಮಾತನಾಡ್ತೀವಿ, ಕಣ್ಣಲ್ಲಿ ನೀರು ಸುರಿಯೋ ಹಂಗೆ ನಗ್ತಿವಿ…
ಇದೂ ಹಬ್ಬ ಅಲ್ವಾ?

ನಮ್ಮ ಅಪ್ಪ ಹೇಳ್ತಿದ್ದದ್ದೂ ಇದನ್ನೇ ಕಣ್ರೀ…

ಯೋಗರಾಜ್‌ ಭಟ್‌, ನಿರ್ದೇಶಕರು
ನಿರೂಪಣೆ: ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next