ದಾವಣಗೆರೆ: ಕೋಮುಗಲಭೆ, ಗೋ ರಕ್ಷಣೆ ಹೆಸರಲ್ಲಿನ ಹತ್ಯೆ, ಮಹಿಳೆಯರು ಮತ್ತು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಿಲ್ಲಿಸುವ ಜೊತೆಗೆ ಶಾಂತಿ ವಾತಾವರಣ ಮರು ಸ್ಥಾಪನೆ ಆಗಬೇಕು. ದೇಶ ಮತ್ತು ಸಂವಿಧಾನದ ಉಳಿಯಬೇಕು ಎಂಬ ಉದ್ದೇಶದಿಂದ ಭಾರತೀಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶಾಂತಿಯೆಡೆಗೆ ನಮ್ಮ ನಡಿಗೆ…ಜಾಥಾ ಶುಕ್ರವಾರ ನಗರಕ್ಕೆ ಆಗಮಿಸಿ, ಹುಬ್ಬಳ್ಳಿ ಕಡೆಗೆ ತೆರಳಿದೆ.
ಅನ್‌ಹಡ್ ಸಂಸ್ಥೆಯ ಶಬನಮ್ ಹಷ್ಮಿ ನೇತೃತ್ವದಲ್ಲಿ ಭಾರತೀಯ ಮಹಿಳಾ ಒಕ್ಕೂಟ, ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಎಡಪಂಥೀಯ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಪರ ಸಂಘಟನೆಗಳ 25ಕ್ಕೂ ಹೆಚ್ಚು ಮಹಿಳೆಯರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಗಾಂಧಿ ವೃತ್ತದಲ್ಲಿ ಜಾಥಾ ಸ್ವಾಗತಿಸಿದ ಸಂದರ್ಭದಲ್ಲಿ ಅನ್‌ಹಡ್ ಸಂಸ್ಥೆಯ ಶಬನಮ್ ಹಷ್ಮಿ ಮಾತನಾಡಿ, ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ, ಅತ್ಯಾಚಾರ, ದಬ್ಟಾಳಿಕೆ ನಡೆಯುತ್ತಿವೆ.
ಅದಕ್ಕಿಂತಲೂ ಮುಖ್ಯವಾಗಿ ಸಂವಿಧಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲಿಕ್ಕೆ ಆಗುವುದೇ ಇಲ್ಲ. ಇದೇ ಮೊದಲ ಬಾರಿಗೆ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮಹಿಳೆಯರು, ಚಿಂತಕಿಯರು ದೇಶ ಮತ್ತು ಸಂವಿಧಾನದ ಉಳಿವಿಗೆ ಆಗ್ರಹಿಸಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ. ದೇಶ ಮತ್ತು ಸಂವಿಧಾನದ ಉಳಿಯಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಒಳಗೊಂಡಂತೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಮನವಿ ಮಾಡಿದರು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, ದೇಶ ಮತ್ತು ಸಂವಿಧಾನದ ಉಳಿಯಬೇಕು ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ಹಿಂಸಾಚಾರ ಕೊನೆಗಾಣಬೇಕು ಎಂದು ಒತ್ತಾಯಿಸಿ ಭಾರತೀಯ ಮಹಿಳಾ ಒಕ್ಕೂಟ, ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಎಡಪಂಥೀಯ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಪರ ಸಂಘಟನೆಗಳ ನೇತೃತ್ವದಲ್ಲಿ ಕೇರಳ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ದೆಹಲಿಯಿಂದಲೇ ಸೆ. 22ರಂದು
ಏಕಕಾಲದಲ್ಲಿ 5 ಜನಜಾಗೃತಿ ಜಾಥಾ ಹೊರಟಿವೆ.
ಅ.13 ರಂದು ನವದೆಹಲಿಯಲ್ಲಿ ಸೇರಲಿವೆ. ಶಬನಮ್ ಹಷ್ಮಿ ನೇತೃತ್ವದಲ್ಲಿನ ಜಾಥಾ ಕೇರಳದ ಕೊಲ್ಲಂನಿಂದ ಪ್ರಾರಂಭವಾಗಿ ಮೂರು ದಿನಗಳ ಹಿಂದೆ ರಾಜ್ಯದಲ್ಲಿ ಸಂಚರಿಸುತ್ತಿದೆ. ಮೈಸೂರು, ಬೆಂಗಳೂರು, ತುಮಕೂರು, ದಾವಣಗೆರೆ ನಂತರ ಹುಬ್ಬಳ್ಳಿ, ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ತೆರಳಲಿದೆ ಎಂದು ತಿಳಿಸಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ದೇಶದಲ್ಲಿ ಹಿಂದೆಂದಿಗಿಂತಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ಹಿಂಸಾಚಾರ ನಡೆಯುತ್ತಿರುವುದು ನಿಲ್ಲಬೇಕು. ದೇಶದಲ್ಲಿ ಶಾಂತಿಯ ವಾತಾವರಣ ನೆಲೆಸುವಂತಾಗಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ದೇಶ ಮತ್ತು ಸಂವಿಧಾನದ ಉಳಿವಿಗೆ ಒತ್ತಾಯಿಸಿ ಮಹಿಳೆಯರೇ ಜಾಥಾ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಮಹಿಳಾ ಒಕ್ಕೂಟದ ರಾಷ್ಟ್ರೀಯ ನಾಯಕಿಯರಾದ ಮೀನಾಕ್ಷಿ, ರಾಜಕುಮಾರಿ, ಮಧು, ಸುಮಿತ್ರಾ, ನರ್ಸತ್ ಪರ್ವೀನ್,
ನೂರ್ ಜಹಾನ್ , ಮಹಾನಗರ ಪಾಲಿಕೆ ಸಿಪಿಐ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್,