Advertisement

ದೇಶದಿಂದಲೇ ದೇಸಿ !

06:00 AM Jun 03, 2018 | Team Udayavani |

ಈ ಊರಿನಲ್ಲಿ ಇದ್ದೂ ಇದ್ದೂ ಬೇಜಾರಾಗಿದೆ. ಎಲ್ಲಾದರೂ ಹೋಗೋಣ ಅಂತನ್ನಿಸುತ್ತದೆ’ ಎಂದು ಅವರಿವರು ಆಡುವ ಮಾತನ್ನು ಕೇಳುತ್ತಲೇ ಇರುತ್ತೇವೆ. ಹಾಗೆ, ಕೆಲವರು ಎದ್ದು ಹೊರಟೇಬಿಡುತ್ತಾರೆ. ಮತ್ತೆ ಒಂದೆರಡು ದಿನಗಳಲ್ಲಿಯೇ ಮರಳಿಬರುತ್ತಾರೆ ಮತ್ತು ಎಲ್ಲರ ಜೊತೆಗೂ ಹೇಳುತ್ತಿರುತ್ತಾರೆ : “ಈ ನಮ್ಮೂರೇ ಅಡ್ಡಿಯಿಲ್ಲ. ಆ ಊರಿಗಿಂತ’

Advertisement

ರಾಮಾಯಣ ಮಹಾಕಾವ್ಯದಲ್ಲಿ ಹೇಳಿರುವಂತೆ, ಲಂಕಾಪಟ್ಟಣ ಅದ್ಭುತವಾದ, ಸುಸಜ್ಜಿತವಾದ ಒಂದು ನಗರ. ಬಹುಶಃ ರಾವಣ ಎಂಥ ದೃಢಮನಸ್ಕನೆಂದರೆ ತನ್ನ ಕಠಿಣವಾದ ಪರಿಶ್ರಮದಿಂದ ಸುವರ್ಣ-ಲಂಕೆಯ ಪ್ರಜೆಗಳಿಗೆ ಅತುಲ್ಯ ಸುಖೀಜೀವನವನ್ನು ಕಲ್ಪಿಸಿದ್ದ. ಹನುಮಂತನು ಲಂಕಾಪಟ್ಟವನ್ನು ಪ್ರವೇಶಿಸುವಾಗ ಅಲ್ಲಿನ ವಾಸ್ತುವೈಭವದ ಕಟ್ಟಡಗಳನ್ನು , ಹಾದಿ-ಬೀದಿಗಳ ಸೊಗಸನ್ನು ನೋಡಿ ಬೆರಗುಗೊಂಡಿದ್ದ. ರಾವಣ ಸಂಹಾರದ ಬಳಿಕ, ಶ್ರೀರಾಮಚಂದ್ರನು ಲಂಕೆಯಲ್ಲಿಯೇ ಉಳಿಯುತ್ತೇನೆ ಎಂದು ಹೇಳುತ್ತಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ವಿಭೀಷಣನಿಗೆ ರಾಜ್ಯದಾಸೆ ಎಳ್ಳಿನಿತೂ ಇರಲಿಲ್ಲ. ಆದರೆ, ಶ್ರೀರಾಮಚಂದ್ರ ತಮ್ಮನಾದ ಲಕ್ಷ್ಮಣನನ್ನು ಕರೆದುಹೇಳುತ್ತಾನೆ, “”ಈ ಸುವರ್ಣ ಲಂಕೆ ಎಂಬುದು ನನ್ನ ತಾಯಿ ಮತ್ತು ತಾಯ್ನಾಡಿಗಿಂತ ದೊಡ್ಡದಲ್ಲ. ನಾವು ಹೊರಡೋಣ” 

ಕೆಲವೆಡೆ ಅಣೆಕಟ್ಟು ನಿರ್ಮಾಣ, ಕೈಗಾರಿಕ ಕ್ರಾಂತಿಗಳಿಗಾಗಿ ಜನರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುತ್ತಾರೆ. ಒಂದು ಊರಿನ ಜೊತೆಗೆ ಜನರ ಭಾವನೆ ಎಷ್ಟೊಂದು ತೀವ್ರವಾಗಿರುತ್ತದೆ ಎಂಬುದು ದ್ವೀಪದಂಥ ಸಿನೆಮಾ ನೋಡಿದವರಿಗೆ ಗೊತ್ತೇ ಇದೆ. ತಮ್ಮೂರಿನ ಕಲ್ಲು, ಮರ, ಹಕ್ಕಿ, ಹಾದಿ, ಬೀದಿ, ಮಂದಿರ ಎಲ್ಲವೂ ಅವರ ಜೀವನದ ಭಾಗಗಳೇ. ತವರೂರಿನ ಜೊತೆಗೆ ಎಂಥ ತಾದಾತ್ಮ ಸಾಧಿಸಿರುತ್ತಾರೆಂದರೆ, ಕೆಲವರು ಕಲ್ಲುಗಳನ್ನು ಮಾತನಾಡಿಸುತ್ತಾರೆ, ಹೂವುಗಳನ್ನು ನೋಡಿ ನಗುತ್ತಾರೆ, ಮರದ ಕೆಳಗೆ ಧ್ಯಾನಿಸುತ್ತಾರೆ, ಪ್ರಾಣಿಗಳಿಗೆ ಮನುಷ್ಯರ ಹೆಸರು ಇಡುತ್ತಾರೆ. ಕಾಲ-ದೇಶ ಎಂಬ ಯುಗ ಪದಗಳ ಜೊತೆಗಿರುವ ದೇಶ ಎಂಬುದು ಒಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಭಾಗ. ದೇಶ ಎಂಬುದನ್ನು ಸ್ಪೇಸ್‌, ಜಾಗ, ಊರು, ನಾಡು ಎಂಬಂಥ ಯಾವ ಅರ್ಥದಲ್ಲಿಯೂ ಬಳಸಬಹುದು. ದೇಶದಿಂದಲೇ ದೇಸಿ, ದೇಶದಿಂದಲೇ ದೇಸಿಗ !

ಇತ್ತೀಚೆಗೆ ಪತ್ರಿಕೆಗಳಲ್ಲಿ ಬರುವ ಜನಪ್ರಿಯ ಧಾಟಿಯ ಕತೆಗಳ ವಸ್ತುಗಳನ್ನು ಗಮನಿಸಿ. ಊರಿನಲ್ಲಿ ಇಳಿಹರೆಯದ ತಂದೆ, ತಾಯಿ ಇಬ್ಬರೇ ಇರುತ್ತಾರೆ. ಮಕ್ಕಳೆಲ್ಲ ವಿದೇಶದಲ್ಲಿರುತ್ತಾರೆ. ಕೆಲವೊಮ್ಮೆ ಇರುವ ಒಬ್ಬನೇ ಒಬ್ಬ ಮಗ ದೂರದೇಶದಲ್ಲಿ ಹೆಚ್ಚು ಪಗಾರದ ಉದ್ಯೋಗಕ್ಕೆ ಅಂಟಿಕೊಂಡು ವೃದ್ಧರಾದ ತಂದೆ-ತಾಯಿಗಳನ್ನು ಸರಿಯಾಗಿ ನೋಡುವುದಿಲ್ಲ. ಬಹುಶಃ ಜಾಗತೀಕರಣದ, ಐಟಿ ಕ್ರಾಂತಿಯ ಬಳಿಕ ಈ ಬೆಳವಣಿಗೆ ಅಧಿಕವಾಗಿದೆ ಅಂತನ್ನಿಸುತ್ತದೆ. 

ಇದು ಎಲ್ಲರೂ ಅಲ್ಲಲ್ಲಿ ಓದಿರಬಹುದಾದ ಕತೆಯೇ : ಒಬ್ಟಾಕೆ ವೃದ್ಧೆ ಒಂದು ಮೊಬೈಲ್‌ ಅಂಗಡಿಗೆ ಹೋಗಿ, “”ಈ ಮೊಬೈಲ್‌ ಹಾಳಾಗಿದೆಯ ನೋಡಪ್ಪ” ಎನ್ನುತ್ತಾಳೆ. ಅಂಗಡಿಯವನು ಅದನ್ನು ಪರಿಶೀಲಿಸಿ, “”ಸರಿಯಾಗಿದೆ” ಎನ್ನುತ್ತಾನೆ. ಆಕೆ ಕೇಳುತ್ತಾಳೆ, “”ಮತ್ತೇಕೆ ಒಂದು ತಿಂಗಳಿನಿಂದ ಇದಕ್ಕೆ ನನ್ನ ಮಗನ ಫೋನ್‌ ಬರುವುದಿಲ್ಲ?” 

Advertisement
Advertisement

Udayavani is now on Telegram. Click here to join our channel and stay updated with the latest news.

Next