Advertisement
“ನಾವೆಲ್ಲರೂ ಭಾರತೀಯ ಕ್ರಿಕೆಟ್‌ಗಾಗಿ ದುಡಿಯುತ್ತಿದ್ದೇವೆ. ಈ ಹಿಂದಿನ ಆಡಳಿತ ಮಂಡಳಿ ಕೂಡ ಅಮೋಘ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿತ್ತು. ಇದೀಗ ರಾಹುಲ್ ಭಾಯ್ ಆಗಮಿಸಿದ್ದಾರೆ. ದ್ರಾವಿಡ್ ಭಾರತ ಕ್ರಿಕೆಟ್ ಕಂಡ ಯಶಸ್ವಿ ಆಟಗಾರ. ಅವರ ಗರಡಿಯಲ್ಲಿ ಬೆಳೆದ ಹಲವಾರು ಕ್ರಿಕೆಟಿಗರು ಇಂದು ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವುದನ್ನು ಕಾಣಬಹುದು. ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಪಾಲಿಗೆ ಅದೃಷ್ಟವೇ ಸರಿ. ಅದರಂತೆ ನಮ್ಮ ಗುರಿ ಹೊಸ ಆಡಳಿತ ಮಂಡಳಿಯಲ್ಲಿ ಭಾರತೀಯ ಕ್ರಿಕೆಟನ್ನು ಉತ್ತುಂಗಕ್ಕೆ ಏರಿಸಿ ಭಾರತೀಯ ಕ್ರಿಕೆಟಿನ ಗೌರವವನ್ನು ಉಳಿಸಿಕೊಳ್ಳುವುದಾಗಿದೆ’ ಎಂದು ಕೊಹ್ಲಿ ಹೇಳಿದರು.
ಈ ತಿಂಗಳಾಂತ್ಯ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆಯೂ ಮಾತನಾಡಿದ ವಿರಾಟ್ ಕೊಹ್ಲಿ, “ನಮಗಲ್ಲಿ ಪ್ರಬಲ ಸವಾಲು ಎದುರಾಗಲಿದೆ. ಅಲ್ಲಿ ಗೆಲುವು ಸಾಧಿಸುವುದು ಸುಲಭವಿಲ್ಲ. ಆದರೆ ನಮ್ಮ ತಂಡ ಬಲಿಷ್ಠವಾಗಿದೆ. ಆಸ್ಟ್ರೇಲಿಯದಲ್ಲಿ ನಾವು ಈಗಾಗಲೇ ಯಶಸ್ವಿಯಾಗಿದ್ದೇವೆ. ಅದೇ ಮನಃಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಕಣಕ್ಕೆ ಇಳಿಯುತ್ತೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.