Advertisement

ಭಾರತಕ್ಕೆ ನಮ್ಮ ಬೆಂಬಲ: ಪಾಕ್‌ ಅಭಿಮಾನಿಗಳ ಟ್ವೀಟ್

02:25 AM Jun 28, 2019 | Team Udayavani |

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌-ಪಾಕಿಸ್ಥಾನ ಪಂದ್ಯದ ವೇಳೆ ಭಾರತದ ಅಭಿಮಾನಿಗಳು ಪಾಕಿಸ್ಥಾನ ತಂಡಕ್ಕೆ ಬೆಂಬಲ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಆತಿಥೇಯ ಇಂಗ್ಲೆಂಡ್‌-ಭಾರತ ನಡುವಿನ ಜೂ. 30ರ ಪಂದ್ಯದಲ್ಲಿ ಪಾಕಿಸ್ಥಾನ ಅಭಿಮಾನಿಗಳು ಭಾರತಕ್ಕೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಬರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Advertisement

ಮಾಜಿ ಇಂಗ್ಲೆಂಡ್‌ ಕ್ರಿಕೆಟಿಗ, ಹಾಲಿ ಟೀವಿ ಕ್ರಿಕೆಟ್ ವಿಶ್ಲೇಷಕ ನಾಸಿರ್‌ ಹುಸೇನ್‌ ಭಾರತ-ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ ಎಂದು ಟ್ವಿಟರ್‌ನಲ್ಲಿ ಪಾಕ್‌ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಉತ್ತರಿಸಿರುವ ಪಾಕ್‌ ಅಭಿಮಾನಿಗಳು, ‘ನಿಮಗೆ ಅನುಮಾನವೇ ಬೇಡ, ಭಾರತ ಬಿಟ್ಟು ಮತ್ಯಾರಿಗೆ ಕೊಡಲು ಸಾಧ್ಯ’ ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ಥಾನ-ಭಾರತ ಅಭಿಮಾನಿಗಳ ಭಾಂಗ್ರಾ ನೃತ್ಯ
ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ ಪಾಕಿಸ್ಥಾನ ತಂಡದ ಗೆಲುವನ್ನು ಪಾಕ್‌ ಅಭಿಮಾನಿಗಳ ಜತೆ ಭಾರತದ ಅಭಿ ಮಾನಿಗಳು ಕೂಡ ಸೇರಿಕೊಂಡು ಸಂಭ್ರ ಮಿಸಿದ್ದಾರೆ. ಕ್ರೀಡಾಂ ಗಣದ ಹೊರಗೆ ಪಾಕ್‌-ಭಾರತ ಅಭಿಮಾನಿಗಳಿಬ್ಬರು ಭಾಂಗ್ರಾ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next