Advertisement
ಕರ್ಣಾಟಕ ಬ್ಯಾಂಕ್ ಫೆ.18ಂದು 100ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಿನದಂದು ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸ್ಥಾಪಕರ ದಿನಾಚರಣೆಯಲ್ಲಿ ಪ್ರೊ|ಎಸ್. ಸಡಗೋಪನ್ ಅವರು ತಂತ್ರಜ್ಞಾನ ಮತ್ತು ಬದುಕು ವಿಷಯದಲ್ಲಿ ಸ್ಥಾಪಕರ ದಿನದ ಉಪನ್ಯಾಸದಲ್ಲಿ ಸಮಕಾಲೀನ ನಾಳೆಯ ಕುರಿತು ಮಾತನಾಡಿದ ಅವರು ಕೃಷಿ ,ಶಿಕ್ಷಣ ಸಂಶೋಧನೆ ಸೇರಿ ಹಲವು ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
Related Articles
Advertisement
ಕರ್ಣಾಟಕ ಬ್ಯಾಂಕಿಗೆ ಇದೊಂದು ಐತಿಹಾಸಿಕ ಕ್ಷಣ. ಇದನ್ನು ಇನ್ನಷ್ಟು ಸ್ಮರಣೀಯ ಹಾಗೂ ಅರ್ಥಪೂರ್ಣಗೊಳಿಸುವಲ್ಲಿ ಶತಮಾನ ವರ್ಷಪೂರ್ತಿ ಹಲವಾರು ದೂರಗಾಮಿ ಉಪಕ್ರಮಗಳನ್ನು ಬ್ಯಾಂಕ್ ಹಮ್ಮಿಕೊಂಡಿದ್ದು, ತನ್ನ ದ್ವಿತೀಯ ಶತಮಾನದ ಯಾನಕ್ಕೆ ಭದ್ರ ಬುನಾದಿಯನ್ನು ಹಾಕಿ ಮುನ್ನುಗ್ಗುತ್ತಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ. ಎಸ್. ಅವರು ಹೇಳಿದರು. ಗಣ್ಯಾತಿಗಣ್ಯರು, ಬ್ಯಾಂಕಿನ ಹಿರಿಯ ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬ್ಯಾಂಕಿನ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸದ ಅನಂತರ “ಸ್ಟ್ರಿಂಗ್ಸ್ ಅಟ್ಯಾಚ್ಡ್ ‘ ವಯೋಲಿನ್ ಹಾಗೂ ವೀಣಾ ವಾದನ ಕಛೇರಿಯನ್ನು ವಿ| ಆರ್. ಕುಮರೇಶ್ ಹಾಗೂ ಡಾ| ಜಯಂತಿ ಕುಮರೇಶ್ ನಡೆಸಿಕೊಟ್ಟರು. ವಿ| ಕೆ.ಯು.ಜಯಚಂದ್ರ ರಾವ್ ಮೃದಂಗದಲ್ಲಿ ಹಾಗೂ ವಿ| ಪ್ರಮಥ್ ಕಿರಣ್ ತಬಲಾ ಮತ್ತು ಮೋರ್ಚಿಂಗ್‌ನಲ್ಲಿ ಸಹಕಾರ ನೀಡಿದರು.