ಈ ಲಾಕ್ ಡೌನ್ ಪಿರಿಯಡ್, ನಮಗೆಲ್ಲಾ ಎಷ್ಟೊಂದು ವಿಷಯದಲ್ಲಿ ತಿಳಿವಳಿಕೆ ಕೊಡು¤ ಅನ್ನೋದನ್ನು ನೆನಪು ಮಾಡಿ ಕೊಂಡ್ರೆ, ಖುಷಿ ಆಗುತ್ತೆ. ಇಷ್ಟು ದಿನ ನಾವೆಲ್ಲಾ, ಮೊದಲೇ ಒಂದು ಟೈಮ್ ಟೇಬಲ್ ಫಿಕ್ಸ್ ಮಾಡಿಕೊಂಡು ದುಕ್ತಾ ಇದ್ವಿ. ಅದರ ಪ್ರಕಾರ, ನಾವು ಇಡೀ ದಿನ ಬ್ಯುಸಿ ಅಂತ ಭಾವಿ ಸಿದ್ವಿ. ಅದನ್ನೇ ಎಲ್ಲರಿಗೂ ಹೇಳಿಕೊಂಡು ಬದುಕ್ತಾ ಇದ್ವಿ. ಆದರೆ, ಅದೆಲ್ಲಾ ಸುಳ್ಳು ಅಂತ ಈ ಕೊರೊನಾ ಕಾಲದಲ್ಲಿ ಸಾಬೀತಾಗಿ ಹೋಯ್ತು.
ಈ ಲಾಕ್ ಡೌನ್ ಸಮಯದಲ್ಲಿ ತುಂಬಾ ಬುಕ್ಸ್ ಓದಲಿಕ್ಕೆ, ಸಾಕಷ್ಟು ಒಳ್ಳೆಯ ಸಿನಿಮಾ ನೋಡಲಿಕ್ಕೆ, ಆ ನೆಪದಲ್ಲಿ, ಈ ದಿನಗಳ ಹೀರೋ- ಹೀರೊಯಿನ್, ನಿರ್ದೇಶಕರನ್ನು ಪರಿಚಯ ಮಾಡಿಕೊ ಳ್ಳೋಕೆ ಸಾಧ್ಯವಾಯ್ತು. ಈಗ ದಿನಕ್ಕೆ 3 ಸಿನಿಮಾ ನೋಡ್ತೇನೆ. ಇಷ್ಟದ ಅಡುಗೆ ಮಾಡೋದು, ಬಗೆಬಗೆಯ ರಂಗೋಲಿ ಬಿಡಿಸೋದು, ಮೆಚ್ಚಿನ ಪುಸ್ತಕಗಳನ್ನು ಓದುವುದು, ಹೊಸ ಹೊಸ ಹೂಗಳ ಮಾಲೆ ಕಟ್ಟುವುದು-ನನ್ನ ನಿತ್ಯದ ಕೆಲಸ ಆಗಿದೆ.
ಈ ಮಧ್ಯೆ, ಕೆಲವು ಓಲ್ಡ ಏಜ್ ಹೋಂಗಳಲ್ಲಿ ಇರುವ ಸಮಸ್ಯೆಗೆ ಪರಿಹಾರ ಸೂಚಿಸ್ತೇನೆ. ಶ್ರಮಿಕರು, ರೈತರು ಕಾಲ್ ಮಾಡ್ತಾರೆ. ತಮ್ಮ ಸಮಸ್ಯೆ ಹೇಳಿಕೊಂಡು, “”ಇದಕ್ಕೆ ಸರ್ಕಾರದ ಮೂಲಕ ಪರಿಹಾರ ಕೊಡಿಸಿ” ಅಂತಾರೆ. ನನ್ನಿಂದ ಸಾಧ್ಯವಾದಷ್ಟೂ ಮಟ್ಟಿಗೆ, ಅವರ ಕೆಲಸ ಮಾಡಿಸಿಕೊಡ್ತೇನೆ. ಕೆಲಸ ಆದ ಖುಷಿಗೆ, ಆ ಜನ ಮತ್ತೆ ಕಾಲ್ ಮಾಡ್ತಾರೆ. ಅಭಿನಂದನೆ ಹೇಳ್ತಾರೆ. ಆಗೆಲ್ಲಾ, ನಾಲ್ಕು ಜನಕ್ಕೆ ಸಹಾಯ ಮಾಡಿದೆ ಎಂಬ ಸಾರ್ಥಕ ಭಾವ ಜೊತೆಯಾಗುತ್ತೆ.
ಕೊರೊನಾ ಕಾರಣದಿಂದ, ನನ್ನ ಮಗಳು ಪೂರ್ತಿ 25 ದಿನ ಲಂಡನ್‌ನಲ್ಲಿ ಉಳಿಯಬೇಕಾಗಿ ಬಂದಿತ್ತು. ವಿಮಾನ ಸಂಚಾರ ಇಲ್ಲದ ಕಾರಣಕ್ಕೆ ಅವಳು ಭಾರತಕ್ಕೆ ಬರಲು ಸಾಧ್ಯ ಆಗಿರಲಿಲ್ಲ. ಅವಳ ಆರೋಗ್ಯದ ಬಗ್ಗೆ ಯೋಚಿಸಿ ಯೋಚಿಸಿ ಸುಸ್ತಾಗಿಹೋಗಿದ್ದೆ. ಮೊನ್ನೆಯಷ್ಟೇ ಅವಳು ವಾಪಸ್ ಬಂದಳು. ನನಗೆ, ಹೋದ ಜೀವ ಮರಳಿ ಬಂದಂತೆ ಆಯ್ತು.
ಕೊರೊನಾ ಮತ್ತು ಲಾಕ್ ಡೌನ್‌ನಂಥ ಸಂದರ್ಭಗಳು ತೀರಾ ಆಕಸ್ಮಿಕವಾಗಿ ಜೊತೆಯಾದ್ದರಿಂದ, ನಮ್ಮ ಶಕ್ತಿ ಮತ್ತು ಮಿತಿಗಳು ನಮಗೆ ಚೆನ್ನಾಗಿ ಅರ್ಥ ಆಗಿವೆ ಅನ್ನಬಹುದು. ಕೊರೊನಾಕ್ಕೆ, ಇಂಥದೇ ಎಂಬ ಖಚಿತ ಮೆಡಿಸಿನ್ ಇನ್ನೂ ಸಿಕ್ಕಿಲ್ಲ ಅನ್ನುವುದನ್ನು ನೆನಪು ಮಾಡಿಕೊಂಡಾಗ, ಭಯ ಆಗುತ್ತದೆ. ಆದರೆ, ನಾವು ಸಾಮಾಜಿಕ- ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ, ಕೊರೋನಾ ವಿರುದ ಗೆಲ್ತಾ ಇದ್ದೇವೆ ಅನ್ನುವ ಖುಷಿ ಕೂಡ ಜೊತೆಗೇ ಇದೆ…
* ಜಯಮಾಲಾ, ಹಿರಿಯ ಚಿತ್ರನಟಿ