Advertisement

ಭಾರತದ ಆರ್ಥಿಕ ಪ್ಯಾಕೇಜ್‌ನ ಗಾತ್ರ ಪಾಕ್‌ನ ಜಿಡಿಪಿಗಿಂತಲೂ ದೊಡ್ಡದು

09:56 PM Jun 11, 2020 | Sriram |

ನವದೆಹಲಿ: ಕೋವಿಡ್ -19 ಹಿನ್ನೆಲೆಯಲ್ಲಿ ಕಡು ಬಡವರಿಗೆ ಆರ್ಥಿಕ ನೆರವು ಕಲ್ಪಿಸಲು ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನ ಗಾತ್ರ ಪಾಕಿಸ್ತಾನದ ಜಿಡಿಪಿಗಿಂತಲೂ ದೊಡ್ಡದಿದೆ ಎಂದು ಹೇಳಿದೆ.

Advertisement

ಕೋವಿಡ್ -19 ದಿಂದಾಗಿ ಭಾರತದಲ್ಲಿ ಕಡು ಬಡವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ವರದಿಯೊಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ವರದಿ ಉಲ್ಲೇಖೀಸಿ ಟ್ವೀಟ್‌ ಮಾಡಿದ್ದ ಇಮ್ರಾನ್‌ ಖಾನ್‌, ತಮ್ಮ ಸರ್ಕಾರ 9 ವಾರಗಳಲ್ಲಿ 120 ಬಿಲಿಯನ್‌ ರೂ.ಗಳನ್ನು ಬಡವರ ಬ್ಯಾಂಕ್‌ ಖಾತೆಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿದೆ. ಇದರಿಂದ 10 ಮಿಲಿಯನ್‌ ಕುಟುಂಬಗಳಿಗೆ ಸಹಾಯವಾಗಿದೆ. ತಮ್ಮ ಸರ್ಕಾರದ ಯಶಸ್ವಿ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ತಂತ್ರಜ್ಞಾನದ ನೆರವನ್ನು ಭಾರತಕ್ಕೆ ನೀಡಲು ಸಿದ್ಧ ಎಂದಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾತ್ಸವ, ಭಾರತ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನ ಗಾತ್ರ ಪಾಕಿಸ್ತಾನದ ಜಿಡಿಪಿಗಿಂತಲೂ ದೊಡ್ಡದಿದೆ. ಪಾಕಿಸ್ತಾನದ ಸಾಲ, ಅದರ ಜಿಡಿಪಿಯ ಶೇ.90ರಷ್ಟಿದೆ ಎಂಬುದು ನೆನಪಿರಲಿ ಎಂದು ಕುಟುಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next