Advertisement

ನಮ್ಮ ಸೊಲ್ಲು ಅಡಗಲು ಬಿಡುವುದಿಲ್ಲ; ಒಟ್ಟಾಗಿ ದನಿ ಎತ್ತುತ್ತೇವೆ

07:09 PM Mar 03, 2021 | Team Udayavani |

ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಸ್ಥಳೀಯರನ್ನು, ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಸ್ಥಳೀಯ ಸಂಸ್ಥೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾದುದು ಅತ್ಯಂತ ಪ್ರಮುಖವಾದುದು. ಯಾಕೆಂದರೆ ಸ್ಥಳೀಯರ ಸಂಕಷ್ಟಗಳನ್ನು ಅವರಿಂದ ಮಾತ್ರ ಪರಿಹ ರಿಸಲು ಸಾಧ್ಯ. ಇಲ್ಲವಾದರೆ ಯಾವುದೋ ನಗರದಲ್ಲಿ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತ ತಂತ್ರಜ್ಞರು, ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಯನ್ನು ನಿರ್ಧರಿಸಿ ತಮ್ಮ ಮೂಗಿನ ನೇರಕ್ಕೆ ಪೂರೈಸಿ ಬಿಡುತ್ತಾರೆ. ಅದೇ ರೀತಿಯ ಕಾಮಗಾರಿ ಕುಂದಾಪುರ-ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿದೆ. ಹಾಗಾಗಿಯೇ ಇಡೀ ಕಾಮಗಾರಿ ಗೊಂದಲದಿಂದ ಕೂಡಿದ್ದು, ಜನರಿಗೆ ಪ್ರಯೋಜನಕಾರಿ ಎನಿಸದಂತಾಗಿದೆ. ನಮ್ಮ ಅಭಿಪ್ರಾಯವನ್ನೂ ಕೇಳಬೇಕು ಎನ್ನುವುದು ಸ್ಥಳೀಯ ಸಂಸ್ಥೆಗಳ ಅನಿಸಿಕೆ.

Advertisement

ಕುಂದಾಪುರ: ಗ್ರಾಮ ಮಟ್ಟದಲ್ಲಿ ಆಯಾಯ ಗ್ರಾ.ಪಂ. ಅಥವಾ ಸ್ಥಳೀಯ ಸಂಸ್ಥೆಗಳದ್ದೇ ಪರಮೋಚ್ಚ ಅಧಿಕಾರ. ಜತೆಗೆ ಸ್ಥಳೀಯರ ಅಗತ್ಯಗಳನ್ನು ಪೂರೈಸುವ ಹೊಣೆಗಾರಿಕೆಯೂ ಅವುಗಳದ್ದೇ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಸ್ಥಳೀಯ ಸಂಸ್ಥೆಗಳು, ಅದರ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಕಿಮ್ಮತ್ತೇ ನೀಡುವುದಿಲ್ಲ. ಅವರ ತೊಂದರೆಗಳನ್ನು ಆಲಿಸಲು ಪ್ರಾಧಿಕಾರದ ಅಧಿಕಾರಿಗಳು ಕಿವಿಗೊಡುವುದೇ ಇಲ್ಲ. ಆದರೂ ಸ್ಥಳೀಯ ಸಂಸ್ಥೆಗಳು ಸುಮ್ಮನಾಗಬೇಕಿಲ್ಲ. ತಮ್ಮ ವ್ಯಾಪ್ತಿಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಶಾಸಕರು, ಸಂಸದರು, ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರಕ್ಕೆ ಒತ್ತಡ ತರುವ ಕೆಲಸವನ್ನು ಮಾಡಬೇಕಿದೆ.

ಈ ನಿಟ್ಟಿನಲ್ಲಿ “ಉದಯವಾಣಿ’ಯು ಹೆದ್ದಾರಿ ಹಾದು ಹೋಗುವ ಎಲ್ಲ ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ.ಗಳ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಬಗ್ಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಪ್ರಕಟಿಸಿದೆ. ಎಲ್ಲರೂ ತಮ್ಮ ಭಾಗದ ಸಮಸ್ಯೆಗಳನ್ನು ಮುಚ್ಚಿ ಹಾಕಲು ಬಿಡುವು ದಿಲ್ಲ. ಸಂಘಟನಾತ್ಮಕವಾಗಿ ದನಿ ಎತ್ತುತ್ತೇವೆ. ನಮ್ಮ ಜನರಿಗೆ ಆಗಬೇಕಾದ ಅನುಕೂಲಗಳ ಬಗ್ಗೆ ಎಳ್ಳಷ್ಟೂ ರಾಜಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳು ಆಗಲೇಬೇಕು
ಪುರಸಭೆ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯಿಂದ ಸಂಗಮ್‌ವರೆಗೆ ಅರ್ಧಂಬರ್ಧ ಸರ್ವಿಸ್‌ ರಸ್ತೆಯಾಗಿದ್ದು, ಈ ಕಾರ್ಯ ಪೂರ್ಣಗೊಳ್ಳಬೇಕಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ಕರೆದಿದ್ದು, ಅಲ್ಲಿಯೂ ಗಮನಕ್ಕೆ ತರಲಾಗಿದೆ. ಮೇಲ್ಸೇತುವೆ ಕಾಮಗಾರಿ ಮುಗಿದ ಬಳಿಕ ಈ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ. ಆಗಲೂ ಮಾಡದಿದ್ದರೆ ಮತ್ತೆ ಸಭೆ ಕರೆಯಲಾಗುವುದು. ಆಗಬೇಕಾದ ಕಾಮಗಾರಿಗಳು ಆಗಲೇಬೇಕು, ಅಲ್ಲಿ ರಾಜಿಯಿಲ್ಲ.
– ವೀಣಾ ಭಾಸ್ಕರ್‌ ಮೆಂಡನ್‌, ಕುಂದಾಪುರ ಪುರಸಭಾಧ್ಯಕ್ಷೆ
**
ವಿಸ್ತೃತ ವರದಿ ಸಿದ್ಧ
ಉದಯವಾಣಿಯಲ್ಲಿ ಕಳೆದೊಂದು ವಾರದಿಂದ ಬರುತ್ತಿರುವ ಹೆದ್ದಾರಿ ಸರಣಿ ಕುರಿತ ಎಲ್ಲ ಲೇಖನಗಳನ್ನು ದಾಖಲೆ ಮಾಡಿಟ್ಟಿದ್ದೇವೆ. ಈ ಬಗ್ಗೆ ವಿಸ್ತೃತ ವರದಿಯನ್ನು ಕೂಡ ಸಿದ್ಧಪಡಿಸುತ್ತಿದ್ದೇವೆ. ಇನ್ನು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಆಗಬೇಕಾದ ಹೆದ್ದಾರಿ ಕಾಮಗಾರಿ ಕುರಿತಂತೆ ಸಂಸದರ ಗಮನಕ್ಕೂ ತರಲಾಗುವುದು.
– ಶಿವಕುಮಾರ್‌, ಬೈಂದೂರು ಪಟ್ಟಣ ಪಂಚಾಯತ್‌ ಆಡಳಿತಾಧಿಕಾರಿ
**
ಮತ್ತೂಮ್ಮೆ ಮನವಿ
ಆದಷ್ಟು ಶೀಘ್ರ ಎಲ್ಲ ಪಂಚಾಯತ್‌ ಸದಸ್ಯರ ವಿಶೇಷ ಸಭೆ ಕರೆದು, ನಮ್ಮ ತಲ್ಲೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಅಗತ್ಯವಾಗಿ ಆಗಬೇಕಾದ ಹೆದ್ದಾರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಗುವುದು. ಬಸ್‌ ನಿಲ್ದಾಣ, ಸರ್ವಿಸ್‌ ರಸ್ತೆ, ಜಂಕ್ಷನ್‌ನಲ್ಲಿ ಬೆಳಕಿನ ವ್ಯವಸ್ಥೆ ಅಳವಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತೂಮ್ಮೆ ಮನವಿ ಸಲ್ಲಿಸಲಾಗುವುದು.
– ಭೀಮವ್ವ, ತಲ್ಲೂರು ಗ್ರಾ.ಪಂ. ಅಧ್ಯಕ್ಷೆ
**
ಸಂಪರ್ಕ ರಸ್ತೆ ಬೇಕು
ಹೆಮ್ಮಾಡಿಯಲ್ಲಿ ಸರ್ವಿಸ್‌ ರಸ್ತೆಯಿಲ್ಲದೆ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಜಾಲಾಡಿ, ಸಂತೋಷನಗರ ಭಾಗದ ಜನರು ತುಂಬಾ ಕಷ್ಟ ಪಡುವಂತಾಗಿದೆ. ಈ ಬಗ್ಗೆ ಆದಷ್ಟು ಬೇಗ ಈ ಭಾಗದ ಜನರ ಸಭೆಯನ್ನು ಕರೆದು ಚರ್ಚಿಸಿ, ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು.
– ಸತ್ಯನಾರಾಯಣ, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ
**
ಪೂರ್ವಭಾವಿ ಸಭೆ
ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಲಾಡಿಯಿಂದ ಸಂತೋಷ್‌ನಗರ, ಹೆಮ್ಮಾಡಿ ಯ ವರೆಗೆ ಸರ್ವಿಸ್‌ ರಸ್ತೆ ಬೇಕಿದೆ. ಈ ಬಗ್ಗೆ ಜನಾಭಿ ಪ್ರಾಯ ಪಡೆದು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ಕರೆದು ಚರ್ಚಿಸಲಾಗುವುದು. ಇದರಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಶಾಸಕರು, ಸಂಸದರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು. ನಮ್ಮ ಭಾಗದ ಕಾಮಗಾರಿಗಳು ಆಗಲೇಬೇಕು.
– ನಾಗೇಶ್‌ ಪುತ್ರನ್‌, ಕಟ್‌ಬೆಲೂ¤ರು ಗ್ರಾ.ಪಂ. ಅಧ್ಯಕ್ಷ
**
ಸರ್ವಿಸ್‌ ರಸ್ತೆ, ಚರಂಡಿ
ಹೊಸಾಡು ಪಂಚಾಯತ್‌ ವ್ಯಾಪ್ತಿಯ ಮುಳ್ಳಿಕಟ್ಟೆಯಿಂದ ಅರಾಟೆಯವರೆಗೆ ಎರಡೂ ಕಡೆ ಸರ್ವಿಸ್‌ ರಸ್ತೆ, ಚರಂಡಿ, ಬೀದಿ ದೀಪ, ಮುಳ್ಳಿಕಟ್ಟೆಯಲ್ಲಿ ಜಂಕ್ಷನ್‌, ಬಸ್‌ ನಿಲ್ದಾಣ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮತ್ತೂಮ್ಮೆ ಮನವಿ ಸಲ್ಲಿಸಲಾಗುವುದು.
– ಪಾರ್ವತಿ, ಹೊಸಾಡು ಗ್ರಾ.ಪಂ. ಪಿಡಿಒ
**
ಅವೈಜ್ಞಾನಿಕ ಡಿವೈಡರ್‌ ಕ್ರಾಸಿಂಗ್‌
ತ್ರಾಸಿ ಹೆದ್ದಾರಿ ಕುರಿತು ಈವರೆಗೆ ಏನೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನುವ ಬಗ್ಗೆ ಪಂ.ನಿಂದ ಮಾಹಿತಿ ಪಡೆಯಲಾಗುವುದು. ಜಂಕ್ಷನ್‌ ಅಭಿವೃದ್ಧಿ, ಅವೈಜ್ಞಾನಿಕ ಡಿವೈಡರ್‌ ಕ್ರಾಸಿಂಗ್‌ ಸರಿಪಡಿಸುವ ಸಂಬಂಧ ಸಂಸದರು, ಶಾಸಕರ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
– ಗೀತಾ ದೇವಾಡಿಗ, ತ್ರಾಸಿ ಗ್ರಾ.ಪಂ. ಅಧ್ಯಕ್ಷೆ
**
ಗ್ರಾಮಸಭೆಯಲ್ಲಿ ನಿರ್ಣಯ
ಮರವಂತೆ ಪಂ.ವ್ಯಾಪ್ತಿಯಲ್ಲಿ ಬಹಳ ಮುಖ್ಯವಾಗಿ ದಾರಿದೀಪವನ್ನು ಇನ್ನೂ ಅಳವಡಿಸಿಲ್ಲ. ಪಂಚಾಯತ್‌ ಎದುರಿನ ರಸ್ತೆಯಲ್ಲಿ ಸರ್ವಿಸ್‌ ರಸ್ತೆ ಬೇಕಿದೆ. ಈ ಬಗ್ಗೆ ಮುಂದಿನ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ ಅದನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುವುದು.
– ರುಕ್ಮಿಣಿ, ಮರವಂತೆ ಗ್ರಾ.ಪಂ. ಅಧ್ಯಕ್ಷೆ
**
ವಿದ್ಯುತ್‌ ದೀಪ ಅಗತ್ಯ
ನಾವುಂದ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆಯಾಗಬೇಕಿದೆ. ನಾವುಂದದಿಂದ ಬಡಾಕೆರೆ ಕ್ರಾಸ್‌ವರೆಗೆ ಸರ್ವಿಸ್‌ ರಸ್ತೆಯಾಗಬೇಕಿದೆ. ಈ ಬಗ್ಗೆ ಪಂ.ನಲ್ಲಿ ಸದಸ್ಯರ ಸಭೆ ಕರೆದು ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ಜಾನಕಿ ಮೊಗವೀರ, ನಾವುಂದ ಗ್ರಾ.ಪಂ. ಅಧ್ಯಕ್ಷೆ
**
ಮಾಹಿತಿ ಪಡೆದು ಕ್ರಮ
ಈಗಷ್ಟೇ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದು, ನಮ್ಮ ಕಿರಿಮಂಜೇಶ್ವರ ಪಂ. ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಇನ್ನೂ ಆಗಬೇಕಾದ ಕಾಮಗಾರಿಗಳ ಕುರಿತಂತೆ ಅಧಿಕಾರಿಗಳು, ಪಂ. ಸದಸ್ಯರ ಸಭೆ ಕರೆದು, ಮಾಹಿತಿ ಪಡೆದು, ಅದನ್ನು ಶಾಸಕರು, ಸಂಸದರ ಗಮನಕ್ಕೆ ತರಲಾಗುವುದು.
– ಗೀತಾ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ
**
ಸರ್ವಿಸ್‌ ರಸ್ತೆಗೆ ಬೇಡಿಕೆ
ಹೆದ್ದಾರಿ ಕಾಮಗಾರಿ ಬಗ್ಗೆಯೇ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಶಾಸಕರು ಸಹ ಉಪ್ಪುಂದಕ್ಕೆ ಭೇಟಿ ಕೊಟ್ಟಾಗ ಇಲ್ಲಿ ಹೆದ್ದಾರಿಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ. ಸರ್ವಿಸ್‌ ರಸ್ತೆ, ರಿಕ್ಷಾ ನಿಲ್ದಾಣ ಬಗ್ಗೆ ಬೇಡಿಕೆ ಸಲ್ಲಿಸಿದ್ದೇವೆ.
– ಲಕ್ಷ್ಮೀ ಖಾರ್ವಿ, ಉಪ್ಪುಂದ ಗ್ರಾ.ಪಂ. ಅಧ್ಯಕ್ಷೆ
**
ಚರಂಡಿ ವ್ಯವಸ್ಥೆ: ಕ್ರಮ
ಬಿಜೂರು ಪಂಚಾಯತ್‌ ವ್ಯಾಪ್ತಿಯ ಹೆದ್ದಾರಿಯಲ್ಲಿ ಬೀದಿ ದೀಪದ ಸಮಸ್ಯೆ ಹಾಗೂ ಚರಂಡಿ ವ್ಯವಸ್ಥೆಯೊಂದು ಸರಿಯಾಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು.
– ರಮೇಶ್‌ ದೇವಾಡಿಗ, ಬಿಜೂರು ಗ್ರಾ.ಪಂ. ಅಧ್ಯಕ್ಷ
**
ಈಡೇರದಿದ್ದರೆ ಹೋರಾಟ
ನಮ್ಮ ಶಿರೂರು ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಹೆದ್ದಾರಿ ಕಾಮಗಾರಿ ಬಾಕಿ ಇದೆ. ಈ ಬಗ್ಗೆ ಸಂಸದರ ಗಮನಕ್ಕೆ ತರಲಾಗುವುದು. ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಡಗೂಡಿ ಹೋರಾಟ ನಡೆಸಲಾಗುವುದು.
– ದಿಲ್‌ಶಾದ್‌, ಶಿರೂರು ಗ್ರಾ.ಪಂ. ಅಧ್ಯಕ್ಷೆ
**
ಸಭೆಯಲ್ಲಿ ಚರ್ಚೆ
ಕಂಬದಕೋಣೆ ಪಂ. ವ್ಯಾಪ್ತಿ ಯಲ್ಲಿ ಹೆದ್ದಾರಿಯಲ್ಲಿ ಆಗಬೇಕಾದ ಕಾಮಗಾರಿ ಕುರಿತಂತೆ ಆದಷ್ಟು ಶೀಘ್ರ ಸಭೆ ಕರೆದು, ಅದರಲ್ಲಿ ಈ ಎಲ್ಲ ವಿಚಾರ ಗಳನ್ನು ಚರ್ಚೆ ಮಾಡಲಾಗುವುದು. ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸಂಸದರು, ಶಾಸಕರು, ಅಧಿಕಾರಿ ಗಳಿಗೆ ಸಲ್ಲಿಸಲಾಗುವುದು.
– ಸುಕೇಶ್‌ ಹಳೆಗೇರಿ,ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ
**
ಅಧಿಕಾರಿಗಳಿಗೆ ಮನವಿ
ಕೆರ್ಗಾಲು ಪಂಚಾಯತ್‌ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಆಗಬೇಕಾದ ಕಾಮಗಾರಿ ಬಗ್ಗೆ ತಿಳಿದುಕೊಂಡು ಈ ಬಗ್ಗೆ ಸಂಸದರು, ಶಾಸಕರು, ಹೆದ್ದಾರಿ ಪ್ರಾಧಿಕಾರಕ್ಕೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.
– ಮಾಧವ ದೇವಾಡಿಗ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next