Advertisement
1917 ಶಾಲೆ ಆರಂಭಬಡಮಕ್ಕಳ ಶಿಕ್ಷಣಕ್ಕಾಗಿ ದತ್ತಿನಿಧಿ ಸ್ಥಾಪನೆ, ಹಲವು ಸೌಲಭ್ಯ
ಮಂಕುಡೆ ರಾಮಕೃಷ್ಣ ಆಚಾರ್ ಅವರು ಗ್ರಾ.ಪಂ. ಅಧ್ಯಕ್ಷರಾಗಿದ್ದಾಗ ಸರಕಾರದ ಅನುದಾನ ಮತ್ತು ಸ್ವಂತ ಹಣದಿಂದ 1964ರಲ್ಲಿ ಕಟ್ಟಡ ನಿರ್ಮಿಸಿದ್ದರು. ಆಗ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿತ್ತು. 1982ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಕಟ್ಟಡವು 1981-82ರಲ್ಲಿ ವಿಸ್ತರಿಸಲ್ಪಟ್ಟು ಏಳು ತರಗತಿ ಶಾಲೆಯಾಗಿ ಸರಕಾರದಿಂದ ಅನುಮತಿ ಪಡೆದು ಪ್ರಸ್ತುತ 8 ತರಗತಿಗಳನ್ನು ಹೊಂದಿದೆ.
Related Articles
ಎಲ್‌ಕೆಜಿ, ಯುಕೆಜಿ ಸಹಿತ ಶಾಲೆಯಲ್ಲಿ ಈಗ ಒಟ್ಟು 150 ಮಕ್ಕಳಿದ್ದಾರೆ. 6 ಶಿಕ್ಷಕರು, ಮೂವರು ಗೌರವ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಭಾರತ ಸೇವಾದಳ, ಯೋಗ, ನೈತಿಕ ಶಿಕ್ಷಣ, ಬಡಮಕ್ಕಳ ಶಿಕ್ಷಣಕ್ಕಾಗಿ ದತ್ತಿನಿಧಿ ಮತ್ತು ಸರಕಾರದ ಎಲ್ಲ ಸೌಲಭ್ಯಗಳಿವೆ. ಇಲ್ಲಿನ ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಎನ್‌ಎಂಎಂಎಸ್ ಪರೀಕ್ಷೆ ಬರೆದು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಕೊಠಡಿ, ಶೌಚಾಲಯ, ಕಂಪ್ಯೂಟರ್ ಕೊಠಡಿ ಇತ್ಯಾದಿ ಮೂಲ ಸೌಲಭ್ಯಗಳಿವೆ.
Advertisement
ಹಿಂದಿನ ಮುಖ್ಯ ಶಿಕ್ಷಕರುಕೆ.ಪಿ. ಸೀತಾರಾಮ ಭಟ್, ಪಿ. ವೆಂಕಟ್ರಮಣ ಭಟ್, ಯಮುನಾ, ಕೆ. ಪಕ್ರು ಮೂಲ್ಯ, ಮಾಧವಿ ಎಚ್.ವಿ., ಸಂತೋಷಾ ಕುಮಾರಿ. ಸರಕಾರ, ಕೊಳ್ನಾಡು ಗ್ರಾ.ಪಂ., ತಾ.ಪಂ., ಜಿ.ಪಂ., ಹಿರಿಯ ವಿದ್ಯಾರ್ಥಿ ಸಂಘ, ಹಳೆ ವಿದ್ಯಾರ್ಥಿ ಯುವಕ ಮಂಡಲ, ಎಸ್‌ಡಿಎಂಸಿ, ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಪ್ರಗತಿಯನ್ನು ಸಾಧಿಸಿದೆ. 2017ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ. ಶತಮಾನೋತ್ಸವ ಕಟ್ಟಡ ನಿರ್ಮಾಣವಾಗಿದೆ. ಈಗ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ.
-ಗಟ್ರೂಡ್ ಡಿ’ಸೋಜಾ, ಮುಖ್ಯ ಶಿಕ್ಷಕರು 1967ರಿಂದ 70ರ ವರೆಗೆ 3ನೇ ತರಗತಿವರೆಗೆ ಇಲ್ಲಿ ವ್ಯಾಸಂಗ ಮಾಡಿದ್ದೆ. ದಿ| ದೂಮಣ್ಣ ಮಾಸ್ತರರ ಶಿಸ್ತುಬದ್ಧ ಪಾಠ, ಶಿಕ್ಷಣ ನನ್ನ ಜೀವನ ಪಾಠಕ್ಕೆ ಭದ್ರ ಬುನಾದಿಯಾಯಿತು. ನಾನು ಈ ಶಾಲೆಯಲ್ಲಿ ಓದುತ್ತಿದ್ದಾಗ ಹಳೆ ವಿದ್ಯಾರ್ಥಿ ಸಂಘವು ಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿತ್ತು. ನನ್ನ ಅಮ್ಮ ದಿ| ದೇವಕಿ ಅಮ್ಮ ಅವರ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸಿ, ಬಡ್ಡಿ ಮೊತ್ತದಲ್ಲಿ ಪ್ರತಿಭಾನ್ವಿತರಿಗೆ ಪುರಸ್ಕರಿಸಲು ನಿರ್ಧರಿಸಿದಾಗ ಕಲಿತ ಶಾಲೆಗೆ ಇಷ್ಟಾದರೂ ನೀಡಿದೆನೆಂಬ ಧನ್ಯತಾ ಮನೋಭಾವ ಲಭಿಸಿದೆ.
-ಬಾಲಕೃಷ್ಣ ಭಟ್, ಡೆಪ್ಯುಟಿ ಮ್ಯಾನೇಜರ್, ಎಸ್‌ಬಿಐ, ಮೈಸೂರು (ಹಿರಿಯ ವಿದ್ಯಾರ್ಥಿ) - ಉದಯಶಂಕರ್ ನೀರ್ಪಾಜೆ