Advertisement

ದೇವೆಗೌಡರ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ: ಯಡಿಯೂರಪ್ಪ ಹೇಳಿಕೆ

09:48 AM Nov 08, 2019 | keerthan |

ಹಾವೇರಿ: ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಮಾತುಕತೆ ವಿಚಾರವಾಗಿ ಇಂದು ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ದೇವೆಗೌಡರ ಜೊತೆ ನಮ್ಮ ಸಂಬಂಧ ಯಾವಾಗಲೂ ಚೆನ್ನಾಗಿ ಇದೆ. ಅಷ್ಟ ಮಾತ್ರ ನಾನು ಹೇಳಬಲ್ಲೆ ಎಂದರು.

Advertisement

ಇದನ್ನೂ ಓದಿ : ರೈತರ ಬೆಳೆಗಳಿಗೆ ಬೆಂಬಲ ಬೆಲೆ: ಬಿ ಎಸ್ ಯಡಿಯೂರಪ್ಪ

ಹಾವೇರಿಯ ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಮಾತನಾಡಿದ ಬಿಎಸ್ ವೈ, ನಾನು ಬೇರೆ ವಿಷಯಗಳನ್ನು ಮಾಧ್ಯಮದ ಜೊತೆ ಚರ್ಚೆ ಮಾಡುವುದಿಲ್ಲ. ಸಮಯ -ಸಂದರ್ಭ ಬಂದಾಗ ನಾನೇ ಎಲ್ಲವನ್ನು ಮಾತನಾಡುತ್ತೇನೆ ಎಂದರು.

ಇತ್ತೀಚೆಗೆ ಬಿಎಸ್ ವೈ ಅವರದ್ದು ಎನ್ನಲಾದ ವಿಡಿಯೋ ಬಹಿರಂಗವಾಗಲು ಬಿಜೆಪಿಯವರೇ ಕಾರಣ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ,  ಸಿದ್ದರಾಮಯ್ಯನವರು ನನ್ನ ಬಗ್ಗೆ ಇಷ್ಟೊಂದು ಚಿಂತೆ ಮಾಡ್ತಿದಾರಲ್ಲಾ ಅದಕ್ಕೆ ಅವರಿಗೆ ಅಭಿನಂದನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next