Advertisement
ತಾನು ಕೇಳಿ ತಿಳಿದದ್ದು ನಿಜ ಎಂಬುದು ಗಂಧರ್ವನಿಗೆ ಭೂಮಿಗೆ ಬಂದೊಡನೆ ಅರಿವಿಗೆ ಬಂತು. ಸೂರ್ಯ ರಶ್ಮಿ ಮುತ್ತಿಕ್ಕುವ ಗಿರಿ ಶಿಖರಗಳು, ವಿಶಾಲ ವಾದ ಹುಲ್ಲುಗಾವಲು ಗಳು, ಕಡು ಹಸುರಿನ ದಟ್ಟಾರಣ್ಯ, ಉಗ್ರ ಮತ್ತು ಸೌಮ್ಯ ವನ್ಯಜೀವಿಗಳು, ಮಳೆಹನಿಗಳು ಬಿದ್ದಾಗ ಉಕ್ಕುವ ಮಣ್ಣಿನ ಮಧುರ ಕಂಪು… ಎಲ್ಲೆಲ್ಲೂ ಅಪೂರ್ವ ಸೌಂದರ್ಯ ಗಂಧರ್ವನನ್ನು ಸೆರೆಹಿಡಿಯಿತು. ಇವೆಲ್ಲವುಗಳಿಗೆ ಶಿಖರಪ್ರಾಯ ಎಂಬಂತೆ ಮನುಷ್ಯನನ್ನು ಕಂಡು ಆತ ಮಾರು ಹೋದ. ಮನುಷ್ಯನ ಹೃದಯದ ನೃತ್ಯ ಮತ್ತು ಆತ್ಮದ ಸಂಗೀತ ಅವನನ್ನು ಆನಂದ ತುಂದಿಲನನ್ನಾಗಿಸಿದವು. ಸೃಷ್ಟಿಯ ಅತ್ಯದ್ಭುತ ಚೆಲುವನ್ನು ಮನುಷ್ಯ ನಲ್ಲಿ ಕಂಡು ಗಂಧರ್ವ ನಿಬ್ಬೆರಗಾದ.
“ಸಂಸಾರ, ಜಂಜಡ, ಹೊರಾಟಗಳೇ ಬದುಕಿನ ತಿರುಳಲ್ಲವೇ?’ ಎಂದು ಪ್ರಶ್ನಿಸಿದ ಗಂಧರ್ವ. ಆದರೆ ಮನುಷ್ಯ ಕೇಳಲಿಲ್ಲ. ಗಂಧರ್ವ ಅವನನ್ನು ಒಂದು ಹಸುವಾಗಿ ರೂಪಾಂತರಿಸಿದ. ಹಸು ದೂರದ ಹುಲ್ಲುಗಾವಲಿನಲ್ಲಿ ಹುಲ್ಲು ಮೇಯತೊಡಗಿತು.
ಎರಡನೆಯ ಮನುಷ್ಯ “ನಾನು ಕಳಂಕಪೂರಿತನಾಗಿದ್ದೇನೆ. ನನ್ನನ್ನು ದೇವರಂತೆ ಪರಿಶುದ್ಧಗೊಳಿಸು’ ಎಂದು ಕೇಳಿದ. “ಕಾಮನೆಗಳು, ರಸಗಳು, ಆಸೆಗಳೇ ಬದುಕಿನ ರಸದೂಟೆಗಳಲ್ಲವೇ’ ಎಂದ ಗಂಧರ್ವ. ಆ ಮನುಷ್ಯ ಕೇಳಲಿಲ್ಲ. ಗಂಧರ್ವ ಅವನನ್ನು ದೂರದ ದೇವಸ್ಥಾನದಲ್ಲಿ ಒಂದು ಅಮೃತಶಿಲೆಯ ಮೂರ್ತಿಯನ್ನಾಗಿಸಿದ.
Related Articles
Advertisement
ನಾಲ್ಕನೆಯ ಮನುಷ್ಯ ಮಾತ್ರ “ನಾನು ಈಗಿರುವುದರಲ್ಲೇ ಸಂತೃಪ್ತನಾಗಿದ್ದೇನೆ. ಉತ್ತಮ ಮನುಷ್ಯನಾಗಿ ಬಾಳುವುದಕ್ಕೆ ಅನುಗ್ರಹ ಮಾಡು’ ಎಂದ. ಗಂಧರ್ವನ ಮುಖದಲ್ಲಿ ಖುಷಿಯ ನಗು ಮಿಂಚಿತು, ಆ ಮನುಷ್ಯನನ್ನು ಬಾಚಿ ತಬ್ಬಿಕೊಂಡ, ಬಳಿಕ ಸ್ವರ್ಗಕ್ಕೆ ಹೊರಟು ಹೋದ.
ಬದುಕು ಬಹಳ ಸುಂದರ, ಈ ಭೂಮಿಯ ಮೇಲಿನ ನಮ್ಮ ಜನ್ಮ ಬಲು ದೊಡ್ಡದು ಎಂಬುದನ್ನು ಸಾರುವ ಕಥೆ ಇದು. ಪ್ರತೀಕ್ಷಣವೂ ಸಂತಸವಾಗಿರುತ್ತ, ಬದುಕು ತೆರೆದುಕೊಂಡ ಹಾಗೆ ಜೀವಿಸ ಬೇಕಿರುವ ಅದೃಷ್ಟವಂತರು ನಾವು.ಕಥೆ ಇಲ್ಲಿಗೆ ಮುಗಿಯಲಿಲ್ಲ. ಗಂಧರ್ವ ಸ್ವರ್ಗಕ್ಕೆ ಹೋಗಿ ದೇವರನ್ನು ಕಂಡ. “ಅಲ್ಲಿ ಹೋಗಿ ಏನು ಮಾಡಿದೆ? ಸೃಷ್ಟಿಗೇನಾದರೂ ಭಂಗ ತಂದೆಯಾ?’ ಎಂದು ದೇವರು ಪ್ರಶ್ನಿಸಿದರು. “ಇಲ್ಲ. ನಿಜವಾಗಿ ನಿಮ್ಮ ಸೃಷ್ಟಿಗೆ ಮಾರು ಹೋದೆ. ಕೆಲವರ ಬೇಡಿಕೆಗಳನ್ನು ಈಡೇರಿಸಿದೆ’ ಎಂದು ವಿವರಿಸಿದ ಗಂಧರ್ವ. ದೇವರು ಪ್ರಶ್ನಿಸಿದರು, “ಈಗ ನಿನಗೇನಾದರೂ ವರ ಬೇಕೇ?’
“ಆ ನಾಲ್ಕನೆಯವನಂತಹ ಮನುಷ್ಯ ಜನ್ಮವನ್ನು ನನಗೆ ಕರುಣಿಸು’ ಎಂದು ಪ್ರಾರ್ಥಿಸಿಕೊಂಡ ಗಂಧರ್ವ!
ಪುಣ್ಯವಶಾತ್, ನಾವು ಹಾಗೆ ಪ್ರಾರ್ಥಿಸಬೇಕಿಲ್ಲ. ಏಕೆಂದರೆ ನಾವೀಗಾ ಗಲೇ ಇಲ್ಲಿ ಜನಿಸಿದ್ದೇವೆ. ಹಾಗಾಗಿ ಅವಕಾಶವನ್ನು ಪೂರ್ಣ ಸದುಪಯೋಗ ಪಡಿಸಿಕೊಂಡು ಬದುಕೋಣ. ( ಸಾರ ಸಂಗ್ರಹ)