Advertisement

ಶಿಕ್ಷಣ-ವೈದ್ಯಕೀಯ ಸೌಲಭ್ಯ ಕಲಿಸುವುದು ನಮ್ಮ ಧ್ಯೇಯ: ಗುಣಪಾಲ್‌ ಶೆಟ್ಟಿ ಐಕಳ

04:09 PM Apr 09, 2021 | Team Udayavani |

ಮುಂಬಯಿ, ಎ. 8: ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷ ಕಾರ್ಯಾನಗುತ್ತು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಸಂಘವು
ಪರಿಸರದ ಬಂಟ ಬಾಂಧವರಿಗೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ನೀಡುವಲ್ಲಿ ವಿಶೇಷವಾಗಿ ಸ್ಪಂದಿಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ನಮಗಿಂದು
ಅತ್ಯಾವಶ್ಯಕವಾಗಿದ್ದು, ಸಂಘವು ಕೂಡಾ ಈ ನಿಟ್ಟಿನಲ್ಲಿ ಪ್ರಾಧಾನ್ಯ ನೀಡುತ್ತಾ ಬರುತ್ತಿದೆ. ಪ್ರಾದೇಶಿಕ ಸಮಿತಿಗಳು ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು
ಗುರುತಿಸಿ ಉಚಿತ ಶಿಕ್ಷಣ ನೀಡುವುದರ ಜತೆಗೆ  ಅನಾರೋಗ್ಯದಲ್ಲಿರುವ ಸಮಾಜ ಬಾಂಧವರಿಗೆ ವಿಶೇಷ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು
ಎಂದು ಬಂಟರ ಸಂಘ ಕೇಂದ್ರ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಗುಣಪಾಲ್‌ ಶೆಟ್ಟಿ ಐಕಳ ತಿಳಿಸಿದರು.

Advertisement

ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಎ. 5ರಂದು ಅಪರಾಹ್ನ 2ರಿಂದ ಸಂಜೆ 5ರ ವರೆಗೆ ತಾಡೆªàವ್‌ನ ಜಸ್ಲೋಕ್‌
ಆಸ್ಪತ್ರೆಯಲ್ಲಿ ನಡೆದ ಧರ್ಮಾರ್ಥ ಕೋವಿಡ್‌ ಲಸಿಕೆ ಶಿಬಿರದಲ್ಲಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬಾರದು. ಎಲ್ಲರೂ
ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಯಾರೂ ಆತ್ಮಸ್ಥೈರ್ಯವನ್ನು ಕಳೆದು ಕೊಳ್ಳಬಾರದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ
ಹರಿಸಬೇಕು ಎಂದು ತಿಳಿಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೇಂದ್ರ ಪ್ರಾದೇಶಿಕ ಸಮನ್ವಯಕ ಗುಣಪಾಲ್‌ ಶೆಟ್ಟಿ
ಐಕಳ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕಾರ್ಯಾನಗುತ್ತು ಶಿವರಾಮ ಎನ್‌. ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಜರಗಿದ ಕೋವಿಡ್‌
ಲಸಿಕೆ ಶಿಬಿರದಲ್ಲಿ ಪರಿಸರದ ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಂಡರು. ಜಸ್ಲೋಕ್‌ ಆಸ್ಪತ್ರೆಯ ಸರ್ಜನ್‌ ಡಾ| ವಿವೇಕ್‌ ಶೆಟ್ಟಿ ಮತ್ತು ಆಸ್ಪತ್ರೆಯ ಸಿಬಂದಿ ಲಸಿಕೆ ನೀಡುವ ಮೂಲಕ ಹೆಚ್ಚಿನ ಸಹಕಾರ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಕಾರ್ಯಾನಗುತ್ತು ಶಿವರಾಮ ಶೆಟ್ಟಿ ಮಾತನಾಡಿ, ನಮ್ಮ ಸಮಿತಿಯ ಪರಿಧಿಯಲ್ಲಿರುವ ಹಿರಿಯ ನಾಗರಿಕರು ಹಾಗೂ 45
ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಸುರಕ್ಷೆಗಾಗಿ ಲಸಿಕೆ ಕೊಡಿಸುವುದು ನಮ್ಮ ಧ್ಯೇಯವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡಾಗ
ನಮ್ಮ ಶ್ರಮ ಸಾರ್ಥಕವಾಗುತ್ತದೆ. ಕೋವಿಡ್‌ ಲಸಿಕೆ ಶಿಬಿರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಜಸ್ಲೋಕ್‌ ಆಸ್ಪತ್ರೆಯ ವೈದ್ಯ ಡಾ| ವಿವೇಕ್‌ ಶೆಟ್ಟಿ
ಮತ್ತು ಸಿಬಂದಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸಮಿತಿಯ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಾಯ, ಸಹಕಾರ ಸದಾಯಿರಲಿ ಎಂದರು.

ಸಿಟಿ ಪ್ರಾದೇಶಿಕ ಸಂಚಾಲಕ ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸಂತೋಷ್‌ ಆರ್‌. ಶೆಟ್ಟಿ, ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಕೇಶವ್‌ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಯಮುನಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಶೆಟ್ಟಿ, ಕಾರ್ಯದರ್ಶಿ ಭುವನೇಶ್‌
ಶೆಟ್ಟಿ, ಕೋಶಾಧಿಕಾರಿ ಶ್ರವಣ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ಕೋವಿಡ್  ವೈರಸ್‌ ದೇಶಾದ್ಯಂತ ಹರಡಿ ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಕೋವಿಡ್ ವೈರಾಣುವನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಇದು ಒಬ್ಬರಿಂದ ಇನ್ನೊಬ್ಬರಿಗೆ ಶರೀರಕ್ಕೆ ಮೂಗು, ಬಾಯಿ, ಇಂದ್ರಿಯಗಳಿಂದ ಶರೀರ ಪ್ರವೇಶಿಸಿ ಕ್ರಮೇಣ ವ್ಯಕ್ತಿಯ ಪ್ರಾಣ ತೆಗೆಯುತ್ತದೆ.
ಮೂಗಿನಿಂದ ವೈರಾಣು ಶರೀರ ಪ್ರವೇಶಿಸದ ಹಾಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ವೈರಾಣು ಸೋಂಕದ ಹಾಗೆ ಮುಖ ತೊಳೆಯುವುದರ ಜತೆಗೆ ನಮ್ಮ ಶರೀರ, ಪರಿಸರವನ್ನು ಸ್ಯಾನಿಟೈಸ್ ಮಾಡಬೇಕು. ಹಿರಿಯ ನಾಗರಿಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಸಿಟಿ ಪ್ರಾದೇಶಿಕ ಬಂಟ ಬಾಂಧವರ ಆರೋಗ್ಯಕ್ಕಾಗಿ ತಾನು ಸದಾ ಸಹಕಾರ ನೀಡಲಿದ್ದೇನೆ.
-ಡಾ| ವಿವೇಕ್‌ ಶೆಟ್ಟಿ
ಸರ್ಜನ್‌, ಜಸ್ಲೋಕ್‌ ಆಸ್ಪತ್ರೆ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next